ಟೆಲ್ ಅವೀವ್/ಖಾನ್ ಯೂನಿಸ್: ಗಾಜಾ ಪಟ್ಟಿಯ ಅತ್ಯಂತ ದೊಡ್ಡ ಆಸ್ಪತ್ರೆ ಅಲ್ ಶಿಫಾದ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹಮಾಸ್ ಉಗ್ರರು ಮತ್ತು ಇಸ್ರೇಲ್ ಪಡೆಗಳ ನಡುವೆ ಸೋಮವಾರವೂ ಕದನ ಮುಂದುವರಿದಿದೆ.
ಹೀಗಾಗಿ, ಈ ಆಸ್ಪತ್ರೆ ವಸ್ತುಶಃ ಕೆಲಸ ಮಾಡದೇ ಇರುವ ಸ್ಥಿತಿಗೆ ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆಸ್ಪತ್ರೆ ಆವರಣಕ್ಕೆ ಇಸ್ರೇಲಿ ಸೇನೆ ಮುತ್ತಿಗೆ ಹಾಕಿದ್ದು, ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಇತ್ತ ಇಸ್ರೇಲಿ ಮಿಲಿಟರಿಯನ್ನು ಗುರಿ ಯಾಗಿಸಲು ಆಸ್ಪತ್ರೆಗಳ ಮೇಲೆಯೇ ಹಮಾಸ್ ದಾಳಿ ನಡೆಸುತ್ತಿದೆ. ಈ ನಡುವೆ ಆಸ್ಪತ್ರೆಯಲ್ಲಿ ಅಸುನೀಗಿದ ವ್ಯಕ್ತಿಗಳ ಮೃತದೇಹಗಳನ್ನು ಹೊರಕ್ಕೆ ಸಾಗಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.
ಅಲ್‌ಕುದ್ ಆಸ್ಪತ್ರೆ ಮೇಲೆ ದಾಳಿ: ಗಾಜಾ ಪಟ್ಟಿಯಲ್ಲಿ ರುವ ಅಲ್ ಕುದ್ ಆಸ್ಪತ್ರೆಯಲ್ಲಿ ಇಸ್ರೇಲ್ ಪಡೆಗಳು ದಾಳಿ ನಡೆಸಿದ್ದು, ಈ ವೇಳೆ 21ಮಂದಿ ಮೃತಪಟ್ಟಿದ್ದಾರೆ.
ಹೆಜ್ಬುಲ್ಲಾ ಕ್ಷಿಪಣಿ ದಾಳಿ
ಗಾಜಾ -ಇಸ್ರೇಲ್ ಕಾದಾಟದ ನಡುವೆಯೇ ಇತ್ತ ಲೆಬನಾನ್‌ನ ಹೆಜ್ಬುಲ್ಲಾ ಕೂಡ ಇಸ್ರೇಲ್‌ಮೇಲೆ ದಾಳಿ ಹೆಚ್ಚಿಸಿದೆ. ಗಡಿಯಲ್ಲಿರು ಇಸ್ರೇಲಿ ಪಡೆ, ಟ್ಯಾಂಕರ್‌ಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ಘಟನೆಯಲ್ಲಿ ಇಸ್ರೇಲಿನ ಹಲವು ಸೈನಿಕರು ಮೃತಪಟ್ಟಿರುವುದು ವರದಿಯಾಗಿದೆ.
ಅಮೆರಿಕದ ದಾಳಿ: ಈ ಎಲ್ಲ ಬೆಳವಣಿಗೆಗಳ ನಡುವೆ ಅಮೆರಿಕದ ವಾಯುಪಡೆ ಸಿರಿಯಾದಲ್ಲಿ ದಾಳಿ ನಡೆ ಸಿದೆ. ಈ ಸಂದರ್ಭದಲ್ಲಿ ಇರಾನ್ ಬೆಂಬಲಿತ ಪ್ರತ್ಯೇ ಕತಾ ವಾದಿ ಸಂಘಟನೆಗಳ ನೆಲೆಗಳನ್ನು ಧ್ವಂಸಗೊಳಿಸ ಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೂರನೇ ಬಾರಿಗೆ ಅಮೆರಿಕ ಇಂಥ ಕ್ರಮ ಕೈಗೊಳ್ಳುತ್ತಿದೆ.