ಜೆರುಸಲೇಂ(ಇಸ್ರೇಲ್): ದಕ್ಷಿಣ ನಗರವಾದ ಗಾಜಾದಲ್ಲಿ ನಿರೀಕ್ಷಿತ ಭೂ ದಾಳಿಗೂ ಮುನ್ನ, ಪೂರ್ವ ರಾಫಾದಿಂದ ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸುವುದಾಗಿ ಇಸ್ರೇಲ್ ಸೇನೆ ಸೋಮವಾರ (ಮೇ 06) ತಿಳಿಸಿದೆ.
ಇದನ್ನೂ ಓದಿ:Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
ಪೂರ್ವ ರಾಫಾ ಪ್ರದೇಶದಿಂದ ಎಷ್ಟು ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸೇನಾ ವಕ್ತಾರ, ಅಂದಾಜು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಸುಮಾರು 1.2 ಮಿಲಿಯನ್ ಜನರು ಪ್ರಸ್ತುತ ರಾಫಾದಲ್ಲಿ ಆಶ್ರಯ ಪಡೆದಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನ ಪ್ಯಾಲೆಸ್ತೇನಿಯನ್ ಉಗ್ರಗಾಮಿಗಳ ನಡುವಿನ ಏಳು ತಿಂಗಳ ಯುದ್ಧದ ಸಮಯದಲ್ಲಿ ಹೆಚ್ಚಿನವರು ಗಾಜಾದಿಂದ ಬೇರೆ ಸ್ಥಳಕ್ಕೆ ಓಡಿ ಹೋಗಿರುವುದಾಗಿ ವರದಿ ವಿವರಿಸಿದೆ.
ಜನರನ್ನು ಸ್ಥಳಾಂತರಿಸುವುದರ ಮುಖ್ಯ ಉದ್ದೇಶ ಹಮಾಸ್ ಅನ್ನು ಬಗ್ಗು ಬಡಿಯುವುದಾಗಿದೆ. ಜನರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಸ್ಥಳಾಂತರಿಸಲಾಗುತ್ತಿದೆ ಎಂದು ಮಿಲಿಟರಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಇಸ್ರೇಲ್ ಮತ್ತು ಗಾಜಾ ನಡುವಿನ ಕೆರೆಮ್ ಶಾಲೋಮ್ ಗಡಿ ಭಾಗದಲ್ಲಿ ರಾಕೆಟ್ ದಾಳಿ ನಡೆದ ಪರಿಣಾಮ ಮೂವರು ಇಸ್ರೇಲ್ ಸೈನಿಕರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ಸೇನೆ ತಿಳಿಸಿದೆ.