Advertisement

ಇಸ್ರೇಲ್‌ನಲ್ಲಿ ಮತ್ತೆ ನೆತನ್ಯಾಹು ಹವಾ

11:43 PM Apr 10, 2019 | Team Udayavani |

ಜೆರುಸಲೇಮ್‌: ಭಾರತದಲ್ಲಿ ಗುರುವಾರ ಮೊದಲ ಹಂತದ ಮತದಾನ ಶುರುವಾಗುತ್ತಿದ್ದಂತೆಯೇ ದೂರದ ಇಸ್ರೇಲ್‌ನ ಸಂಸತ್‌ (ನೆಸೆಟ್‌)ಗೆ ಚುನಾವಣೆಗೆ ನಡೆದು ಫ‌ಲಿತಾಂಶ ಹೊರಬಿದ್ದಿದೆ. ಹಾಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸತತ ಐದನೇ ಬಾರಿಗೆ ಪ್ರಧಾನಿ ಯಾಗಿ ಅಧಿಕಾರಕ್ಕೆ ಬರುವುದು ಖಾತ್ರಿಯಾಗಿದೆ. ಫ‌ಲಿತಾಂಶ ಹೊರಬೀಳುತ್ತಿದ್ದಂತೆಯೇ ಭಾರತದ ಪ್ರಧಾನಿ ಮೋದಿ, ನೆತನ್ಯಾಹು ಅವರಿಗೆ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಒಟ್ಟು 120 ಸದಸ್ಯ ಬಲವಿರುವ ಇಸ್ರೇಲ್‌ ಸಂಸತ್ತಿನಲ್ಲಿ ಯಾವುದೇ ಪಕ್ಷಕ್ಕೆ (ಅಥವಾ ಮೈತ್ರಿಕೂಟಕ್ಕೆ) ಸರಕಾರ ರಚಿಸಲು 61 ಸ್ಥಾನಗಳ ಅವಶ್ಯಕತೆಯಿದೆ. ಲಿಕುಡ್‌ 35 ಸ್ಥಾನ ಗೆದ್ದಿದ್ದರೆ, ಇಸ್ರಯೇಲ್‌ ಬೈಟೆನ್ಯೂ 5, ರೈಟಿಸ್ಟ್‌ ಯೂನಿಯನ್‌ 5 ಸ್ಥಾನ ಪಡೆದಿವೆ.

ಸದ್ಯಕ್ಕಿರುವ ನೆತನ್ಯಾಹು ನೇತೃತ್ವದ ಮೈತ್ರಿ ಸರಕಾರದ ಅಂಗ ಪಕ್ಷವಾಗಿರುವ ಇಸ್ರೇಲಿನ ಮಾಜಿ ಸೈನ್ಯಾಧಿಕಾರಿ ಬೆನ್ನಿ ಗ್ರಾಂಟ್ಸ್‌ ಅವರ “ಕಹೋಲ್‌ ಲವಾನ್‌’ (ಕಲಾನು) ಪಕ್ಷ ಸಹ 35 ಸ್ಥಾನ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next