Advertisement

ನಮಗೆ ಪಾಠ ಮಾಡೋ ಅಗತ್ಯವಿಲ್ಲ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತಕ್ಕ ತಿರುಗೇಟು

12:53 PM Sep 16, 2020 | Nagendra Trasi |

ವಾಷಿಂಗ್ಟನ್: ಭಯೋತ್ಪಾದನೆಗೆ ಪಾಕಿಸ್ತಾನ ಮೂಲ ಕೇಂದ್ರವಾಗಿದೆ ಎಂದು ಬಹಿರಂಗವಾಗಿ ವಾಗ್ದಾಳಿ ನಡೆಸಿರುವ ಭಾರತ, ಮಾನವ ಹಕ್ಕುಗಳ ಬಗ್ಗೆ ಪಾಕಿಸ್ತಾನ ನಮಗೆ ಪಾಠ ಹೇಳಿಕೊಡಬೇಕಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ತನ್ನ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಸಿಖ್ ಹಾಗೂ ಕ್ರಿಶ್ಚಿಯನ್ ಸಮುದಾಯದ ಜನರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವ ಪಾಕಿಸ್ತಾನ ಅನಾವಶ್ಯಕವಾದ ಭಾಷಣ, ಪಾಠ ಮಾಡಬೇಕಾದ ಅಗತ್ಯವಿಲ್ಲ ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯಲ್ಲಿ 45ನೇ ಮಾನವ ಹಕ್ಕು ಮಂಡಳಿ(ಎಚ್ ಆರ್ ಸಿ)ಯ ಅಧಿವೇಶನದಲ್ಲಿ ಪಾಕಿಸ್ತಾನದ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಭಾರತ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿಯ ಕೊಂದ ಮಹಿಳೆ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಮೂವರ ಹತ್ಯೆ

ಪಾಕಿಸ್ತಾನವನ್ನು ಉದ್ದೇಶಪೂರ್ವಕವಾಗಿ ಭಾರತ ಸುಳ್ಳು ಆರೋಪಗಳಿಂದ ಮಸಿ ಬಳಿಯುವ ಕೆಲಸ ಮಾಡುವ ಅಭ್ಯಾಸ ಇಟ್ಟುಕೊಂಡಿದೆ ಎಂಬ ದೂರಿಗೆ ಭಾರತದ ರಾಯಭಾರಿ ಖಡಕ್ ಸ್ಪಷ್ಟನೆ ನೀಡಿರುವುದಾಗಿ ವರದಿ ಹೇಳಿದೆ.

Advertisement

ಯಾವ ದೇಶ ತನ್ನ ನೆಲದಲ್ಲಿರುವ ಅಲ್ಪಸಂಖ್ಯಾತರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದೆಯೋ, ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆಯೋ ಅಲ್ಲದೇ ಜಮ್ಮು-ಕಾಶ್ಮೀರದ ವಿರುದ್ಧ ಹೋರಾಡಲು ಸಾವಿರಾರು ಉಗ್ರರಿಗೆ ತರಬೇತಿ ನೀಡಿರುವುದನ್ನು ಸ್ವತಃ ಪ್ರಧಾನಿಯೇ ಒಪ್ಪಿಕೊಂಡಿರುವ ಪಾಕಿಸ್ತಾನ ನಮಗೆ ಪಾಠ ಹೇಳಬೇಕಾದ ಅಗತ್ಯವಿಲ್ಲ ಎಂದು ಭಾರತ ತಿಳಿಸಿದೆ.

ಜಮ್ಮು-ಕಾಶ್ಮೀರ ವಿವಾದಾತ್ಮಕ ಪ್ರದೇಶ ಎಂದು ಪಾಕಿಸ್ತಾನ ಚಿತ್ರಿಸಿದ್ದು, ಈ ಬೆಳವಣಿಗೆ ಖಂಡಿಸಿ ಶಾಂಘೈ ಸಹಕಾರ ಒಕ್ಕೂಟ ಆಯೋಜಿಸಿದ್ದ ಆನ್ ಲೈನ್ ಸಭೆಯಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಂಗಳವಾರ(ಸೆ.15,2020) ಹೊರನಡೆದಿದ್ದ ಘಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next