Advertisement

ಕಣಿವೆ ರಾಜ್ಯಕ್ಕೆ ಐಸಿಸ್‌ ಎಂಟ್ರಿ?

11:45 AM Feb 28, 2018 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ಜಗತ್ತಿನ ಅತ್ಯಂತ ಅಪಾಯಕಾರಿ ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಉಗ್ರ ಸಂಘಟನೆ ಕಾಲಿಟ್ಟಿದೆಯೇ? ರವಿವಾರ ಹುರಿಯತ್‌ ನಾಯಕನ ಮನೆಯ ಮುಂಭಾಗದಲ್ಲಿ ನಡೆದ ಪೊಲೀಸ್‌ ಸಿಬಂದಿಯೊಬ್ಬರ ಹತ್ಯೆಯನ್ನು ತಾನೇ ಮಾಡಿದ್ದು ಎಂದು ಐಸಿಸ್‌ ಹೇಳಿಕೊಂಡಿರುವುದೇ ಈ ಪ್ರಶ್ನೆ ಮೂಡಲು ಕಾರಣ.

Advertisement

ಹಿಂದೊಮ್ಮೆ ಐಸಿಸ್‌ ಉಪಸ್ಥಿತಿ ಬಗ್ಗೆ ಅನುಮಾನ ಮೂಡಿತ್ತಾದರೂ, ಅದನ್ನು ಸರಕಾರ ತಳ್ಳಿಹಾಕಿತ್ತು. ಆದರೆ, ರವಿವಾರದ ದಾಳಿಯ ಹೊಣೆಯನ್ನು ಐಸಿಸ್‌ ಹೊತ್ತುಕೊಂಡಿರುವುದಾಗಿ ಆ ಉಗ್ರ ಸಂಘಟನೆಯ ಸುದ್ದಿ ಸಂಸ್ಥೆ ಅಲ್‌ ಅಮಕ್‌ ವರದಿ ಮಾಡಿದೆ. ಮೂಲಗಳ ಪ್ರಕಾರ, ಐಸಿಸ್‌ ಸಂಘಟನೆ ಜತೆ ಎಸಾ ಫ‌ಜೀಲಿ ಎಂಬಾತ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ ಕಾಶ್ಮೀರ್‌ ವಿಲ್ಲಯØ ಟೆಲಿಗ್ರಾಂ ವಾಹಿನಿ ಐಸಿಸ್‌ ಹೊಣೆಹೊತ್ತಿರುವುದರ ಬಗ್ಗೆ ಪ್ರಸಾರ ಮಾಡಿದೆ ಎನ್ನಲಾಗಿದೆ.

ಈ ಬಗ್ಗೆ  ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಇಲಾಖೆ, ಕಣಿವೆ ರಾಜ್ಯದಲ್ಲಿ ಐಸಿಸ್‌ ಪ್ರವೇಶವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಜಮ್ಮು-ಕಾಶ್ಮೀರ ಡಿಜಿಪಿ ಎಸ್‌.ಪಿ.ವೇದ್‌ ಕೂಡ ಪ್ರತಿಕ್ರಿಯಿಸಿದ್ದು, ರಾಜ್ಯಕ್ಕೆ ಐಸಿಸ್‌ ಕಾಲಿಟ್ಟಿರುವ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದಿದ್ದಾರೆ.
ಉಗ್ರನ ಹತ್ಯೆ: ಈ ನಡುವೆ, ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಲಷ್ಕರ್‌ ಉಗ್ರನನ್ನು ಕೊಲ್ಲಲಾಗಿದೆ. ಎರಡೂ ಕಡೆ ಗುಂಡಿನ ಚಕಮಕಿ ನಡೆದ ಬಳಿಕ ಉಗ್ರರನ್ನು ಹೊಡೆದುರುಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next