ವಿಶ್ವಸಂಸ್ಥೆ: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಐಎಸ್‌ಐಎಲ್-ಕೆ(ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆ್ಯಂಡ್ ದಿ ಲೆವೆಂಟ್-ಖೊರಾಸಾನ್) ಹೊಸ ನಾಯಕ ಶಿಹಾಬ್ ಅಲ್-ಮುಹಾಜಿರ್ ಈಗ ಉಗ್ರ ಸಂಘಟನೆಯ ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಶ್ರೀಲಂಕಾದ ಕಾರ್ಯಚಟುವಟಿಕೆಗಳ ನೇತೃತ್ವ ವಹಿಸಿದ್ದಾನೆ. ಈತ ಈ ಹಿಂದೆ ಹಖಾನಿ ಜಾಲದೊಂದಿಗೆ ನಂಟು ಹೊಂದಿದ್ದ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್ ಅವರ ವರದಿಯೊಂದು ಈ ವಿಚಾರವನ್ನು ಬಹಿರಂಗಪಡಿಸಿದೆ.
ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಐಎಸ್‌ಐಎಲ್‌ನ ಅಪಾಯ ಮತ್ತು ಈ ಅಪಾಯವನ್ನು ಎದುರಿಸುವಲ್ಲಿ ಸದಸ್ಯ ರಾಷ್ಟ್ರಗಳಿಗೆ ಬೆಂಬಲ ನೀಡಲು ವಿಶ್ವಸಂಸ್ಥೆ ಮಾಡುತ್ತಿರುವ ಪ್ರಯತ್ನಕ್ಕೆ ಸಂಬಂಧಿಸಿದ ವರದಿ ಇದಾಗಿದೆ.
ಶಿಹಾಬ್-ಅಲ್ ಮುಹಾಜಿರ್ 2020ರ ಜೂನ್‌ನಲ್ಲಿ ಐಎಸ್‌ಐಎಲ್-ಕೆ ಹೊಸ ನಾಯಕನಾಗಿ ಘೋಷಿತನಾಗಿದ್ದಾನೆ.
ಇದನ್ನೂ ಓದಿ:ಕಾಂಕ್ರೀಟ್ ಗೋಡೆ ಕಟ್ಟುವುದರಿಂದ ಸಮಸ್ಯೆ ಪರಿಹಾರವಾಗಲ್ಲ :ಮಾತುಕತೆ ಮೂಲಕವೇ ಪರಿಹರಿಸಿ; HDD
ಐಎಸ್‌ಐಎಲ್-ಕೆ ಸದ್ಯ ಆಫ^ನ್‌ನ ವಿವಿಧ ಪ್ರಾಂತ್ಯಗಳಲ್ಲಿ 1000-2200ರಷ್ಟು ಸದಸ್ಯರನ್ನು ಹೊಂದಿದೆ. ಕೊರೊನಾ ಹೊರತಾಗಿಯೂ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಈ ಸಂಘಟನೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಐಎಸ್‌ಐಎಲ್ ಮತ್ತು ಉಗ್ರವಾದದ ಇತರೆ ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲ ಸದಸ್ಯ ರಾಷ್ಟ್ರಗಳೂ ಒಗ್ಗಟ್ಟಾಗಬೇಕು ಎಂದೂ ವರದಿಯಲ್ಲಿ ಕರೆ ನೀಡಲಾಗಿದೆ.