Advertisement

ಅಫ್ಘಾನ್ ನ ಭಾರತದ ಆಸ್ತಿಗಳನ್ನು ಗುರಿಯಾಗಿಸಲು ತಾಲಿಬಾನ್, ಪಾಕ್ ಬಂಡುಕೋರರಿಗೆ ಐಎಸ್ಐ ಸೂಚನೆ!

04:06 PM Jul 18, 2021 | Team Udayavani |

ಹೊಸದಿಲ್ಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ತನ್ನ ಬಂಡುಕೋರರಿಗೆ ಮತ್ತು ತಾಲಿಬಾನ್‌ ಗೆ ಅಫ್ಘಾನಿಸ್ತಾನದಲ್ಲಿ ಕಳೆದ 20 ವರ್ಷಗಳಲ್ಲಿ ಭಾರತ ನಿರ್ಮಿಸಿದ ಕಟ್ಟಡಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಮಾಡಲು ನಿರ್ದೇಶಿಸಿದೆ ಎಂದು ವರದಿಯಾಗಿದೆ.

Advertisement

“ಅಫ್ಘಾನಿಸ್ತಾನದಲ್ಲಿ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಹೋರಾಟಗಾರರು ತಾಲಿಬಾನ್ ಗೆ ಬೆಂಬಲ ನೀಡಿದ್ದಾರೆ. ಅವರು ಭಾರತೀಯ ಆಸ್ತಿ ಮತ್ತು ಕಟ್ಟಡಗಳನ್ನು ಗುರಿಯಾಗಿಸುವ ಸೂಚನೆಗಳೊಂದಿಗೆ ಕಣಕ್ಕೆ ಪ್ರವೇಶಿಸಿದ್ದಾರೆ”ಎಂದು ಸ್ಥಳೀಯ ಸರ್ಕಾರಿ ಮೂಲಗಳು ತಿಳಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ತಾಲಿಬಾನ್ ನಿಯಂತ್ರಣಕ್ಕೆ ಬಂದ ಪ್ರದೇಶಗಳಲ್ಲಿ ಮೊದಲು ಭಾರತಕ್ಕೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಬೇಕು ಎಂದು ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 41.99 ಕೋಟಿ ಲಸಿಕಾ ಡೋಸ್ ಗಳ ಪೂರೈಕೆ : ಕೇಂದ್ರ

ಅಂದಾಜಿನ ಪ್ರಕಾರ ಹತ್ತು ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿಯರು ಅಫ್ಘಾನಿಸ್ತಾನ ಪ್ರವೇಶಿಸಿದ್ದಾರೆ. ಇನ್ನು ಹಲವರು ಅಮೆರಿಕ ಮತ್ತು ಮಿತ್ರ ಪಡೆಗಳ ವಿರುದ್ಧದ ಹೋರಾಟದಲ್ಲಿ ಹಲವಾರು ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದಾರೆ.

Advertisement

2001ರಲ್ಲಿ ತಾಲಿಬಾನ್ ಅನ್ನು ಕಾಬೂಲ್‌ ನಿಂದ ಹೊರಹಾಕಿದ ಬಳಿಕ ಭಾರತವು 3 ಶತಕೋಟಿ ಡಾಲರ್ ಗೂ ಹೆಚ್ಚು ಹಣವನ್ನು ಅಫ್ಘಾನಿಸ್ಥಾನದಲ್ಲಿ ಖರ್ಚು ಮಾಡಿದೆ. ಡೆಲಾರಾಮ್ ಮತ್ತು ಜರಂಜ್ ನಡುವಿನ 218 ಕಿ.ಮೀ ರಸ್ತೆ, ಇಂಡಿಯಾ ಅಫ್ಘಾನಿಸ್ತಾನ್ ಸ್ನೇಹ ಅಣೆಕಟ್ಟು (ಸಲ್ಮಾ ಅಣೆಕಟ್ಟು ಎಂದೂ ಕರೆಯುತ್ತಾರೆ) ಮತ್ತು 2015 ರಲ್ಲಿ ಉದ್ಘಾಟಿಸಲಾದ ಅಫ್ಘಾನ್ ಸಂಸತ್ತು ಕಟ್ಟಡ ಭಾರತೀಯ ಆಸ್ತಿಗಳ ಸಂಕೇತಗಳಲ್ಲಿ ಪ್ರಮುಖವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next