Advertisement
ಅಪಾಯದಲ್ಲಿ ಸೇತುವೆತೊಡಿಕಾನ ಅಮಚೂರು ಸಮೀಪದ ಹೊಳೆಗೆ ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆಯ ಬದಿಯ ಕೆಲ ಭಾಗಗಳು ಕುಸಿತಗೊಂಡಿದ್ದು, ಅಪಾಯದ ಮುನ್ಸೂಚನೆ ಕಂಡುಬರುತ್ತಿದೆ.
ಪೆರಾಜೆ- ತೊಡಿಕಾನ- ಪಟ್ಟಿ ರಸ್ತೆ ಅಭಿವೃದ್ದಿಯಾಗಬೇಕು ಎನ್ನುವುದು ಪೆರಾಜೆ ಜನತೆಯ ಇನ್ನೊಂದು ಮುಖ್ಯ ಬೇಡಿಕೆ. ಕಾವೇರಿ ರಸ್ತೆಯೂ ಅಭಿವೃದ್ಧಿಯಾಗಬೇಕು ಎನ್ನುವ ಬೇಡಿಕೆಯೂ ಇದೆ. ಪೆರಾಜೆ ಶಾಸ್ತಾವು ದೇಗುಲ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲ, ಕೊಡಗಿನ ತಲಕಾವೇರಿ, ಭಾಗಮಂಡಲ ಭಗಂಡೇಶ್ವರ ದೇಗುಲಕ್ಕೆ ನೇರ ಸಂಬಂಧಗಳಿವೆ. ಪೆರಾಜೆ- ತೊಡಿಕಾನ- ಪಟ್ಟಿ- ಭಾಗಮಂಡಲ ರಸ್ತೆ ಮೂಲಕ ಈ ಭಾಗದ ಜನರು ಕೊಡಗಿನ ಭಾಗಮಂಡಲಕ್ಕೆ ಹಾಗೂ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.
Related Articles
Advertisement
5 ಕೋ.ರೂ. ಅನುದಾನ; ಕಾಮಗಾರಿಗೆ ತೊಡಕುತೊಡಿಕಾನ- ಪಟ್ಟಿ- ಬಾಚಿಮಲೆ ರಸ್ತೆ ಅಭಿವೃದ್ಧಿಗೆ ರಾಜ್ಯ ಸರಕಾರ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಮುಂದಿನ ಕೆಲಸ ನಡೆಯಬೇಕಾಗಿದೆ. ಅರಣ್ಯ ಪ್ರದೇಶದಲ್ಲಿ ಈ ರಸ್ತೆ ಹಾದು ಹೋಗುವುದರಿಂದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಿದೆ. ಆ ಬಳಿಕವಷ್ಟೇ ಕೆಲಸ ಪೂರ್ಣಗೊಳಿಸಲು ಸಾಧ್ಯ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಸ್ತಾರಗೊಳ್ಳಬೇಕು
ಪೆರಾಜೆ-ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆ ಒಂದು ಧಾರ್ಮಿಕ ಇತಿಹಾಸ ಸಂಬಂಧವುಳ್ಳ ರಸ್ತೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲ,ಪೆರಾಜೆ ಶ್ರೀ ಶಾಸ್ತಾವು ದೇಗುಲ, ಅಡೂರು ಶ್ರೀ ಮಹಾಲಿಂಗೇಶ್ವರ ದೇಗುಲ, ತಲಕಾವೇರಿ, ಭಾಗಮಂಡಲ ಭಗವಂಡೇಶ್ವರ ದೇಗುಲ ಧಾರ್ಮಿಕ ಐತಿಹಾಸಿಕ ಸಂಬಂಧ ಹೊಂದಿದೆ. ಇಲ್ಲಿನ ರಸ್ತೆ ಮೂಲಕವೇ ಹಿಂದಿನ ಕಾಲದಲ್ಲಿ ಜನರು ತೆರಳುತ್ತಿದ್ದರು. ಈ ರಸ್ತೆ ಅಭಿವೃದ್ಧಿಯಾಗಬೇಕು. ತೊಡಿಕಾನ-ಅಮಚೂರು-ಪೆರಾಜೆ ರಸ್ತೆ ತುಂಬಾ ಕಿರಿದಾಗಿದ್ದು, ಎರಡು ವಾಹನಗಳು ಎದುರುಗೊಂಡಾಗ ಸಮಸ್ಯೆಯಾಗುತ್ತಿದೆ. ಈ ರಸ್ತೆ ವಿಸ್ತಾರಗೊಳ್ಳಬೇಕು.
– ಎ.ಸಿ. ಹೊನ್ನಪ್ಪ ಅಮಚೂರು, ಸ್ಥಳೀಯರು ತೇಜೇಶ್ವರ್ ಕುಂದಲ್ಪಾಡಿ