Advertisement
ನ.23ರಂದು ಕರಾವಳಿಯಿಂದ ನೂರೈವತ್ತಕ್ಕೂ ಹೆಚ್ಚು ಜೋಡಿ ಕಂಬಳ ಕೋಣಗಳು ರಾಜಧಾನಿಯೆಡೆಗೆ ಪ್ರಯಾಣ ಬೆಳೆಸಲಿದೆ. ಉಪ್ಪಿನಂಗಡಿಯಿಂದ ಹೊರಟು ಹಾಸನದಲ್ಲಿ ವಿರಾಮ ತೆಗೆದುಕೊಂಡು ಬಳಿಕ ನೆಲಮಂಗಲ ಮೂಲಕವಾಗಿ ಕೋಣಗಳು ಮತ್ತು ಯಜಮಾನ ಸೇರಿ ಪರಿಚಾರಕರು ಬೆಂಗಳೂರು ಪ್ರವೇಶಿಸಲಿದ್ದಾರೆ.
Related Articles
Advertisement
ವಿಶಾಲವಾದ 70 ಎಕರೆ ಸ್ಥಳವಿರುವ ಅರಮನೆ ಮೈದಾನದ ಗೇಟ್ 5ರಲ್ಲಿ ಕಂಬಳ ಕ್ರೀಡಾಕೂಟ ನಡೆಯಲಿದೆ. ನ.25ರಂದು ಕಂಬಳಕ್ಕೆ ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 10.30ರಿಂದ ನ.26ರ ಸಂಜೆವರೆಗೆ ನಿರಂತರವಾಗಿ ಕಂಬಳ ನಡೆಯಲಿದೆ.
ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಕಂಬಳ ನಡೆಯುತ್ತಿರುವ ಹಿನ್ನೆಲೆಯಲ್ಲಿ 5 ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಕರಾವಳಿಯಿಂದ ಉದ್ಯೋಗ ಅರಿಸಿಕೊಂಡ ಬಂದವರು ಹಾಗೂ ಕಂಬಳ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಬಂದವರಿಗೆ ಕಂಬಳ ವೀಕ್ಷಣೆಗೆ ಬೇಕಾದ ವಿವಿಐಪಿಗಳಿಗೆ 10,000 ಆಸನದ ವ್ಯವಸ್ಥೆಯನ್ನು ಸಹ ಕಲ್ಪಿಸಲಿದ್ದಾರೆ. ಜತೆಗೆ ಸಾರ್ವಜನಿಕರು ಕಂಬಳವನ್ನು ಕರಾವಳಿ ಗ್ರಾಮೀಣ ಭಾಗದಲ್ಲಿ ವೀಕ್ಷಿಸುವ ಶೈಲಿಯಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.