Advertisement

ಗೃಹ ಇಲಾಖೆ ಇದೆಯೋ ಇಲ್ಲವೋ: ದೇವೇಗೌಡ 

06:55 AM Jan 21, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದ್ದು ಕೆಂಪಯ್ಯನ ಉಪಟಳದಿಂದ ಪೊಲೀಸ್‌ ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಆರೋಪಿಸಿದ್ದಾರೆ.

Advertisement

ಗಾಂಧಿನಗರ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಮಾತನಾಡಿ, ರಾಜ್ಯದಲ್ಲಿ ಹಾಡಹಗಲೇ ಕೊಲೆ, ಪೊಲೀಸರ ಮೇಲೆಯೇ ಹಲ್ಲೆ-ದೌರ್ಜನ್ಯ ನಡೆಯುತ್ತಿದೆ. ಗೃಹ ಇಲಾಖೆ ಇದೆಯೋ ಇಲ್ಲವೋ ಎಂಬ ಅನುಮಾನ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪರಾಧ ಕೃತ್ಯಗಳು, ಅಶಾಂತಿ ವಾತಾವರಣದಿಂದ ರಾಜ್ಯದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಭ್ರಷ್ಟಾಚಾರವೆ ಕಾಂಗ್ರೆಸ್ ಸರ್ಕಾರದ ಸಾಧನೆ. ಸರ್ಕಾರದ ಸಾಧನೆ ಹೇಳ್ತೀವಿ ಅಂತ ಕಾಂಗ್ರೆಸ್‌ನವರು ಸಮಾವೇಶ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ಬೊಕ್ಕಸದಿಂದ 650 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಈ ದುಡ್ಡು ಯಾರದು ಎಂದು ಜನತೆಗೆ ಹೇಳಲಿ ಎಂದರು. ಬೆಂಗಳೂರು ಅಭಿವೃದ್ಧಿಗಾಗಿ ನಾನು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಹಲವಾರು ಯೋಜನೆ ರೂಪಿಸಿದೆ. ಬೆಂಗಳೂರಿನಲ್ಲಿ ಕೊಳಗೇರಿ ವಾಸಿಗಳಿಗೆ ಹಕ್ಕುಪತ್ರ ಕೊಡಿಸಲು ಹೋರಾಟ ಮಾಡಿದೆ. ಒಬ್ಬ
ಮಹಾನುಭಾವನನ್ನು ಎಂಎಲ್‌ಎ ಮಾಡಲು ದರಿದ್ರ ನಾರಾಯಣ ಸಮಾವೇಶ ಕೂಟ ಮಾಡಿದ್ದೆ ಎಂದು ಪರೋಕ್ಷವಾಗಿ ಜಮೀರ್‌ ಅಹಮದ್‌ ವಿರುದ್ಧ ಹರಿಹಾಯ್ದರು. ಗಾಂಧಿನಗರದಲ್ಲಿ ನಾರಾಯಣಸ್ವಾಮಿ ಪಕ್ಷದ ಅಭ್ಯರ್ಥಿಯಾಗಿದ್ದು, ಅವರಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next