Advertisement

ಗಣ್ಯರ ಮಾತು ಗೌರವ ಕಳೆದುಕೊಳ್ಳುತ್ತಿದೆಯೇ ?

11:50 PM Jul 21, 2023 | Team Udayavani |

ಹಿಂದೆಲ್ಲ ಪ್ರಮುಖ ಸಮಾರಂಭಗಳ ವೇದಿಕೆಯಲ್ಲಿ ಗಣ್ಯರು ಎಂದು ಗುರು ತಿಸಿಕೊಂಡ ಅತಿಥಿಗಳ ಭಾಷಣಕ್ಕೆ ತುಂಬಾ ಮಹತ್ವ ಇರುತ್ತಿತ್ತು. ಸಮಾ ರಂಭಕ್ಕೆ ಅತಿಥಿಯಾಗುವುದು ಕೂಡ ಅವರ ನಡತೆ, ಬುದ್ಧಿವಂತಿಕೆಯನ್ನು ಅವಲಂಬಿಸಿಕೊಂಡಿತ್ತು. ಆದರೆ ಈಗೀಗ ವೇದಿಕೆಯ ಗಣ್ಯರ ಮಾತುಗಳು ಕೇವಲ ತೋರಿಕೆಯ ಹಿತೋಪದೇಶವಾಗು ತ್ತಿದ್ದು, ಅದು ಜನರ ಮನಸ್ಸಿ ನಲ್ಲಿ ಕಿಂಚಿತ್‌ ಗೌರವವನ್ನೂ ಉಳಿಸಿಕೊಳ್ಳುತ್ತಿಲ್ಲ. ಇದಕ್ಕೇನು ಕಾರಣ?

Advertisement

ಮುಖ್ಯವಾಗಿ ಎಷ್ಟೋ ಕಾರ್ಯಕ್ರಮ ಗಳಿಗೆ ಈಗ ಅತಿಥಿಗಳನ್ನು ಆಹ್ವಾನಿಸು ವುದು ಅವರು ನೀಡುವ ದೇಣಿಗೆ ಹಾಗೂ ಇತರ ಸಹಾಯವನ್ನು ಕೇಂದ್ರೀ ಕರಿಸಿಕೊಂಡೇ ಆಗಿದೆ. ದೇಣಿಗೆ ನೀಡಿ ಅತಿಥಿಗಳಾಗಲು ಬಯಸುವ ದೊಡ್ಡ ವರ್ಗವೇ ಇದೆ. ಸ್ವಸಾಮರ್ಥ್ಯದಿಂದ ವೇದಿಕೆಯ ಗಣ್ಯರಾಗುವ ಯೋಗ್ಯತೆ ಇಲ್ಲದವರು ದೇಣಿಗೆ ನೀಡಿಯಾದರೂ ಸಮಾರಂಭದ ವೇದಿಕೆಯಲ್ಲಿ ಕುಳಿತುಕೊ ಳ್ಳಲು ಬಯಸುತ್ತಾರೆ.

ವೇದಿಕೆಯಲ್ಲಿ ನಿಂತು ಅಲ್ಲಿನ ಇತರ ಆಹ್ವಾನಿತರನ್ನು ಹೊಗಳುವುದು, ಸಂದ ರ್ಭಕ್ಕೆ ತಕ್ಕಂತೆ ಮಾತಾಡದೆ ಇರು ವುದು, ಎಲ್ಲಿಂದೆಲ್ಲಿಂದಲೋ ಹುಡುಕಿ ತಂದ ಉಪದೇಶವನ್ನು ಜನರ ಮುಂದಿಡು ವುದು, ತಾನು ನಡೆಯುವುದಕ್ಕೆ ಸಂಪೂ ರ್ಣ ವಿರುದ್ಧವಾದಂಥ ಮಾತುಗಳನ್ನು ಹೇಳುವುದು… ಇವೆಲ್ಲ ಈಗ ಸಾಮಾ ನ್ಯವಾಗಿ ಕಂಡು ಬರುವಂಥವುಗಳಾಗಿವೆ. ಇದು ಇಡೀ ಸಮಾರಂಭದ ಶೋಭೆಯನ್ನೇ ಹಾಳು ಮಾಡುತ್ತದೆ. ವೇದಿಕೆಯ ಗಣ್ಯರಿಗೆ ಬೆಲೆ ಇಲ್ಲದಂತೆ ಮಾಡುತ್ತದೆ.

ವೇದಿಕೆಯ ಗಣ್ಯರು ಪರಸ್ಪರ ಹೊಗ ಳಿಸಿಕೊಳ್ಳಲು ಪೈಪೋಟಿಗೆ ಬಿದ್ದಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂಥ ಹೊಗಳಿಕೆಯ ಮಾತನ್ನು ಕೇಳುವ ಅಗತ್ಯವಾದರೂ ಸಭಿಕರಿಗೆ ಏನಿದೆ ಎಂಬುದನ್ನು ಕಾರ್ಯಕ್ರಮ ಆಯೋಜಕರು ಪ್ರಶ್ನಿಸಿಕೊಳ್ಳಬೇಕಾಗಿದೆ. ವೇದಿಕೆ ಮಾತಿಗೆ ಹೆಚ್ಚು ಬೆಲೆ, ನಿಜವಾಗಿ ಹೇಳುವುದಾದರೆ ವೇದಿಕೆಯ ಮೇಲಿ ನಿಂದ ಗಣ್ಯರು ಆಡುವ ಮಾತುಗಳಿಗೆ ತುಂಬಾ ಬೆಲೆ ಇದೆ. ಎಷ್ಟೋ ಜನರ ಜೀವನವನ್ನೇ ಬದಲಾಯಿಸುವ ಶಕ್ತಿ ಅಂಥ ಮಾತಿಗಿದೆ.

ಆ ಸಮಾರಂಭದ ಮಾತುಗಳು ಕೇವಲ ಹೊಗಳಿಕೆ, ಸ್ವವಿ ಜೃಂಭಣೆ, ಬರಡು ಉಪದೇಶ ಆಗ ಬಾರದು. ಅದು ಜನರ ಮನಸ್ಸನ್ನು ಸ್ಪರ್ಶಿಸಬೇಕು. ಜತೆಗೆ ಮಾತಾಡುವ ವ್ಯಕ್ತಿಯೂ ಮಾದರಿ ವ್ಯಕ್ತಿತ್ವವನ್ನು ಹೊಂದಿರಬೇಕು. ತಾನು ನುಡಿದಂತೆ ನಡೆಯುವವನೂ ಆಗಿರಬೇಕು. ತನ್ನ ವರ್ತನೆಗಾಗಿ ಸಮಾಜದಿಂದ ಛೀ, ಥೂ ಎಂದು ಹೇಳಿಸಿಕೊಳ್ಳುವವರು ಆಗಿರಬಾ ರದು. ಹಾಗಾದಾಗ ಮಾತ್ರ ವೇದಿಕೆಯ ಮೇಲಿನ ಅತಿಥಿಗಳ ಮಾತಿಗೆ ಹಿಂದಿನ ಗೌರವ ಸಿಗಲು ಸಾಧ್ಯ. ಇದೆಲ್ಲವನ್ನೂ ಕಾರ್ಯಕ್ರಮ ಆಯೋ ಜಕರೂ ಗಮನಿಸ
ಬೇಕು ಹಾಗೂ ತಮ್ಮ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಆಯ್ಕೆ ಮಾಡುವಾಗ ಇಂಥ ಕೆಲವು ಮಾನದಂಡಗಳನ್ನು ರೂಪಿಸಿಕೊಳ್ಳುವುದು ಅತೀ ಅಗತ್ಯವಾಗಿದೆ.

Advertisement

ದೇಣಿಗೆಗೂ ಅತಿಥಿಸ್ಥಾನಕ್ಕೂ ಸಂಬಂಧ ಬೇಡ
ಕಾರ್ಯಕ್ರಮಗಳಿಗೆ ದೇಣಿಗೆ ಪಡೆಯುವುದು ತಪ್ಪಲ್ಲ. ಆದರೆ ದೇಣಿಗೆಗೆ ಪ್ರತಿಯಾಗಿ ಅತಿಥಿ ಸ್ಥಾನವನ್ನು ವಿನಿ ಮಯ ಮಾಡಿಕೊಳ್ಳಬಾರದು. ಕಾರ್ಯಕ್ರಮಗಳಿಗೆ ಸೂಕ್ತ ಅತಿಥಿಗಳನ್ನು ಆಯ್ಕೆ ಮಾಡುವುದರಿಂದ ಆಯೋಜಕರು ಹಾಗೂ ಸಂಘಟನೆಯ ಮಹತ್ವವೂ ಹೆಚ್ಚುತ್ತದೆ. ಸಮಾಜಕ್ಕೆ ಮಾದರಿಯಾಗು ವಂಥ ಉತ್ತಮ ವಾಗ್ಮಿಗಳಿಗೆ ವೇದಿಕೆ ಗಣ್ಯರಾಗುವ ಅವಕಾಶ ನೀಡಿದರೆ ಅದರಿಂದ ಸಂಘಟನೆಗೂ ಹೆಸರು, ಅವರ ಮಾತನ್ನು ಕೇಳುವ ಸಭಿಕರಿಗೂ ಲಾಭ ವಿದೆ. ಇಂಥ ಗಣ್ಯರು ಹೆಚ್ಚಾದರೆ ಖಂಡಿತವಾಗಿಯೂ ವೇದಿಕೆಯ ಕಾರ್ಯಕ್ರಮಗಳಿಗೇ ಸಭಿಕರ ಸಂಖ್ಯೆ ಹೆಚ್ಚುವುದು ಖಚಿತ. ಆ ನಿಟ್ಟಿನಲ್ಲಿ ಚಿಂತಿಸ ಬೇಕಾದುದು ಈಗಿನ ತುರ್ತು ಅಗತ್ಯ.

ಮಾತಿನಿಂದ ಗೌರವ ಹೆಚ್ಚಿಸಿಕೊಳ್ಳಿ
ಸಭೆಯಲ್ಲಿ ಅತಿಥಿ ಸ್ಥಾನದಿಂದ ಮಾತಾಡಿದ ಬಳಿಕ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕೇ ಹೊರತು ತಾವಾ ಡಿದ ಮಾತಿನಿಂದ ಜನರ ಮಧ್ಯೆ ತಮಾ ಷೆಯ ವಸ್ತು ಆಗಬಾರದು. ಮಾತ ನಾಡುವಾಗ ಸಮಯ, ಸಂದರ್ಭ ವನ್ನು ಅರಿತಿರುವುದೂ ಅಗತ್ಯ. ಮೈಕ್‌ ಇದೆ ಎಂದು ದೀರ್ಘ‌ ಹೊತ್ತು ವಟಗುಟ್ಟು ತ್ತಿದ್ದರೆ ಸಭಿಕರ ಮುಂದೆ ಕೇವಲ ಆಗಿಬಿಡುತ್ತಾರೆ.

ಈ ಎಲ್ಲ ಕಾರಣಗಳಿಂದ ಎಲ್ಲರೂ ಚಿಂತಿಸಿ ಸಭಾ ವೇದಿಕೆಯ ಮಾತುಗಳಿಗೆ ಹಿಂದಿನ ಘನತೆ, ಗೌರವವನ್ನು ತಂದು ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಅದರಿಂದ ಜನರಿಗೂ, ಸಂಘಟನೆಗೂ, ಸಮಾಜಕ್ಕೂ ಒಳಿತಾಗುವುದು ಖಚಿತ.

ಪ್ರದೀಪ್‌ ಕುಮಾರ್‌ ರೈ, ಐಕಳಬಾವ

Advertisement

Udayavani is now on Telegram. Click here to join our channel and stay updated with the latest news.

Next