Advertisement

ಇನ್ನು ಬೀದಿ ಬದಿ ಆಹಾರಕ್ಕೂ ಪ್ರಮಾಣ ಪತ್ರ?

06:00 AM Dec 22, 2017 | Team Udayavani |

ಹೊಸದಿಲ್ಲಿ: ರಸ್ತೆ ಬದಿಯ ಆಹಾರ ಸೇವನೆ ಒಳ್ಳೆಯದಲ್ಲ. ಆದರೆ, ಇನ್ನು ಮುಂದೆ ಅಲ್ಲಿ ಸಿಗುವ ಆಹಾರ ಸುರಕ್ಷಿತ ಹೌದೋ ಅಲ್ಲವೋ  ಎಂಬ ಪ್ರಮಾಣ ಪತ್ರ ಸಿಗಲಿದೆ!

Advertisement

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ದೇಶದ ಹಲವು ಭಾಗಗಳಲ್ಲಿ ಶುಚಿಯಾಗಿ ಬೀದಿ ಬದಿಯ ಆಹಾರ ಸಿಗುವ ಸ್ಥಳಗಳನ್ನು ಗುರುತಿಸಲು ಮುಂದಾಗಿದೆ. “ಕ್ಲೀನ್‌ ಸ್ಟ್ರೀಟ್‌ ಫ‌ುಡ್‌ ಹಬ್‌’ ಎಂದು ಗುರುತಿಸಲೋಸುಗ ಈ ಕ್ರಮಕ್ಕೆ ಮುಂದಾಗಿದೆ ಪ್ರಾಧಿಕಾರ.

ಅದಕ್ಕಾಗಿ ಕೆಲವು ನಿಯಮ ಸಿದ್ಧಪಡಿಸುತ್ತಿದ್ದು, ರಸ್ತೆ ಬದಿಯ ಆಹಾರ ಮಾರಾಟಗಾರರು ಅದಕ್ಕೆ ಒಳಪಟ್ಟರೆ ಮಾನ್ಯತೆ ನೀಡಲಾಗುತ್ತದೆ ಎಂದು ಎಫ್ಎಸ್‌ಎಸ್‌ಎಐ ಸಿಇಒ ಪವನ್‌ ಅಗರ್ವಾಲ್‌ ಹೇಳಿದ್ದಾರೆ. ಈ ಬಗ್ಗೆ “ದ ಹಿಂದೂಸ್ಥಾನ್‌ ಟೈಮ್ಸ್‌’ ವರದಿ ಮಾಡಿದೆ.

“ದೇಶದ ಹೆಚ್ಚಿನ ಭಾಗಗಳಲ್ಲಿ ರಸ್ತೆ ಬದಿಯ ಆಹಾರ ಸೇವನೆ ಜನಪ್ರಿಯ. ಶುಚಿ ಮತ್ತು ಗುಣಮಟ್ಟದಲ್ಲಿ ಅದನ್ನು ಪೂರೈಕೆ ಮತ್ತು ಸೇವನೆ ಪ್ರಾಧಿಕಾರದ ಆದ್ಯತೆ’ ಎಂದಿದ್ದಾರೆ ಅಗರ್ವಾಲ್‌. ಸರಿಯಾದ ರೀತಿಯಲ್ಲಿ ಆಹಾರ ತ್ಯಾಜ್ಯ ವಿಲೇವಾರಿ, ಆಹಾರ ಸಿದ್ಧಪಡಿಸುವ ವ್ಯಕ್ತಿಯೂ ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳುವುದು, ಅಡುಗೆ ಮಾಡುವ ಮತ್ತು ಅದಕ್ಕೆ ಸಂಬಂಧಿಸಿದ ಸ್ಥಳ ಎಂದು ಪ್ರತ್ಯೇಕಿಸುವುದು, ಬೀದಿ ದೀಪ,  ಕೀಟಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳ ಲಾಗಿದೆಯೇ ಎಂಬ ವಿಚಾರಗಳನ್ನು ಗಮನಿಸ ಲಾಗುತ್ತದೆ. ಕೆಲವೊಂದು ಅಂಶಗಳು ಪ್ರಾಧಿ ಕಾರದ ವ್ಯಾಪ್ತಿಯಿಂದ ಹೊರತಾಗಿರುವ ಕಾರಣ ಸ್ಥಳೀಯ ಆಡಳಿತ ಸಂಸ್ಥೆಗಳ ನೆರವು ಪಡೆಯಲೇಬೇಕಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next