Advertisement
ಒಂದು ವೇಳೆ ಇದು ಜಾರಿಯಾದರೆ 2 ಸಂವಿಧಾನಾತ್ಮಕ ಸಂಸ್ಥೆಗಳ ಮಧ್ಯೆ ಮತ್ತೊಂದು ಹಗ್ಗಜಗ್ಗಾಟಕ್ಕೆ ಕಾರಣ ವಾಗುವ ಸಾಧ್ಯತೆ ಇದೆ. ಮಂಗಳವಾರ ಕಲ ಬುರಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.
Related Articles
Advertisement
ಕಾನೂನು ಸಂಘರ್ಷಕ್ಕೂ ಸಿದ್ಧತೆಆದರೆ ರಾಜ್ಯಪಾಲರ ಆಡಳಿತಾತ್ಮಕ ಅಧಿಕಾರಕ್ಕೆ ಕತ್ತರಿ ಹಾಕುವ ಪ್ರಸ್ತಾವ ಸಂವಿಧಾನಾತ್ಮಕ ಸಂಘರ್ಷಕ್ಕೂ ಎಡೆಮಾಡಿಕೊಡುವ ಸಾಧ್ಯತೆ ಇದೆ. ಹೀಗಾಗಿ ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ| ಎಂ.ಸಿ. ಸುಧಾಕರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯ ಶಿಕ್ಷಣ ಸಚಿವ ಡಾ| ಶರಣ್ ಪ್ರಕಾಶ್ ಪಾಟೀಲ್ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 11 ಮಸೂದೆ ವಾಪಸ್
ಕಳೆದ 2 ತಿಂಗಳ ಅವಧಿಯಲ್ಲಿ ರಾಜ್ಯಪಾಲರು ಒಟ್ಟು 11 ಮಸೂದೆಗಳನ್ನು ವಾಪಸ್ ಕಳುಹಿಸಿದ್ದರು. ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಡಾ ಪ್ರಕರಣದ ಬಳಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಈ ಹಿಂದಿನ ರಾಜ್ಯಪಾಲರು ಕೂಡ ಮಸೂದೆಗಳನ್ನು ವಾಪಸ್ ಕಳುಹಿಸಿದ್ದ ದೃಷ್ಟಾಂತವನ್ನು ಆಧರಿಸಿ 5 ಪ್ರಕರಣ ಸಂಬಂಧ ಸರಕಾರ ಸ್ಪಷ್ಟನೆ ನೀಡಿದೆ. 6 ಮಸೂದೆಗಳಿಗೆ ಹೆಚ್ಚಿನ ಮಾಹಿತಿ ಹಾಗೂ ಟಿಪ್ಪಣಿಯೊಂದಿಗೆ ರಾಜಭವನಕ್ಕೆ ಕಳುಹಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದಾದ ಬಳಿಕ 3 ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದರು. ಯಾಕೆ ಈ ಲೆಕ್ಕಾಚಾರ?
-ರಾಜ್ಯ ಸರಕಾರ ಹಾಗೂ ರಾಜ್ಯಪಾಲರ ನಡುವೆ ಹಲವು ವಿಚಾರಗಳಿಗೆ ಸಂಘರ್ಷ
-ಸರಕಾರದ 11 ಮಸೂದೆಗಳಿಗೆ ಸಹಿ ಹಾಕದೇ ಹಿಂದೆ ಕಳುಹಿಸಿರುವ ರಾಜ್ಯಪಾಲರು
-ಮುಡಾ ಪ್ರಕರಣದಲ್ಲಿ ಸಿಎಂ ವಿಚಾರಣೆಗೆ ರಾಜ್ಯಪಾಲರ ಅನುಮತಿ, ಸರಕಾರಕ್ಕೆ ಸಿಟ್ಟು?
-ವಿ.ವಿ. ಕುಲಪತಿಗಳು, ಸಿಂಡಿಕೇಟ್ ಸದಸ್ಯರ ನೇಮಕ ಅಧಿಕಾರಕ್ಕೆ ಕತ್ತರಿ ಹಾಕಿ ಸಡ್ಡು? ಚಳಿಗಾಲದ ಅಧಿವೇಶನದಲ್ಲೇ “ಅಂಕುಶ’ ಮಸೂದೆ?
ವಿಶ್ವವಿದ್ಯಾನಿಲಯ ಕಾಯಿದೆಗೆ ಸಮಗ್ರ ತಿದ್ದುಪಡಿ ತರುವ ಮೂಲಕ ರಾಜ್ಯಪಾಲರ ಅಧಿಕಾರಕ್ಕೆ ಮೂಗುದಾರ ಹಾಕುವುದು ಸರಕಾರದ ಲೆಕ್ಕಾಚಾರ ಎನ್ನಲಾಗಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ ಇದ್ದು, ಶಿಕ್ಷಣ ತಜ್ಞರ ಜತೆಗೆ ಸಮಾಲೋಚನೆ ನಡೆಯುವ ಸಾಧ್ಯತೆಯೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ಅಧಿವೇಶನದೊಳಗೆ ವಿಧಾನ ಪರಿಷತ್ತಿನಲ್ಲೂ ಕಾಂಗ್ರೆಸ್‌ನ ಸಂಖ್ಯಾಬಲ ಹೆಚ್ಚುವುದರಿಂದ ಈ ಪ್ರಯೋಗಕ್ಕೆ ಇರುವ ಅಡ್ಡಿಯೂ ನಿವಾರಣೆಯಾಗುತ್ತದೆ ಎಂಬುದು ಸರಕಾರದ ಲೆಕ್ಕಾಚಾರವಾಗಿದೆ. -ರಾಘವೇಂದ್ರ ಭಟ್