Advertisement

Jindal ಕಂಪೆನಿಗೆ ಕೊಡುವ ಭೂಮಿ ನಿಮ್ಮಪ್ಪನ ಮನೆಯ ಆಸ್ತಿಯೇ?

01:14 AM Aug 25, 2024 | Team Udayavani |

ಬೆಂಗಳೂರು: ಹಗರಣಗಳ ಮೇಲೆ ಹಗರಣ ಎಸಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಜಿಂದಾಲ್‌ ಕಂಪೆನಿಗೆ ಅತ್ಯಂತ ಕಡಿಮೆ ಬೆಲೆಗೆ ಭೂಮಿ ಕೊಟ್ಟಿದ್ದು, ಜೆಎಸ್‌ಡಬ್ಲ್ಯು ಜತೆಗೆ ಯಾವ ಒಳ ಒಪ್ಪಂದ ಆಗಿದೆ ಎಂದು ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ಸಿದ್ದರಾಮಯ್ಯನವರೇ ಅದೇನು ನಿಮ್ಮಪ್ಪನ ಮನೆಯ ಆಸ್ತಿಯೇ ಎಂದೂ ಹರಿಹಾಯ್ದಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ 23 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, 1970-71ರಲ್ಲಿ ಆಗಿನ ವಿಜಯನಗರ ಸ್ಟೀಲ್‌ ಲಿಮಿಟೆಡ್‌ಗಾಗಿ ಕೇಂದ್ರ ಸರಕಾರ ಪಡೆದಿದ್ದ 9,600 ಎಕರೆ ಭೂಮಿಯನ್ನು ಖಾಸಗೀಕರಣದ ಭರದಲ್ಲಿ ಕರ್ನಾಟಕ ಸರಕಾರಕ್ಕೆ 13 ಕೋಟಿ ರೂ.ಗೆ ಕೊಟ್ಟಿತ್ತು. ಬಳಿಕ 2006ರಲ್ಲಿ 2 ಸಾವಿರ ಎಕರೆ ಹಾಗೂ 2007ರಲ್ಲಿ 1700 ಎಕರೆಯನ್ನು ಕರ್ನಾಟಕ ಸರಕಾರವು ಜೆಎಸ್‌ಡಬ್ಲ್ಯು ಸ್ಟೀಲ್‌ ಪ್ಲಾಂಟ್‌ಗೆ ಕೊಟ್ಟಿತ್ತು ಎಂದರು.

ಲೀಸ್‌ ಕಮ್‌ ಸೇಲ್‌ ಡೀಡ್‌ ಅನ್ನು ಖಾಯಂ ಮಾಡುವ ವೇಳೆ ಆಗಿನ ಕಾಂಗ್ರೆಸ್‌ ಸರಕಾರವು ಪ್ರತೀ ಎಕರೆಗೆ 1.20 ಲಕ್ಷ ರೂ.ಗೆ ಭೂಮಿ ನೋಂದಣಿ ಮಾಡುವ ನಿರ್ಧಾರ ತೆಗೆದುಕೊಂಡಾಗ ಬಿಜೆಪಿ ಸದಸ್ಯರು ಅದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಿ¨ªೆವು. ನಮ್ಮ ಸರಕಾರ ಬಂದಾಗಲೂ ಕಡಿಮೆ ಬೆಲೆಗೆ ಖನಿಜಯುಕ್ತ ಈ ಭೂಮಿ ಕೊಡುವ ನಿರ್ಧಾರ ಬೇಡ ಎಂದಿದ್ದೆವು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next