ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿರುವುದಕ್ಕೂ ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನ ಪಾತ್ರ ಮಾಡಿರುವುದಕ್ಕೂ ಸಂಬಂಧ ಇದೆಯಾ ? ಕೌರವಾಧೀಶನ ವೇ಼ಷ ಹಾಕಿದ್ದಕ್ಕೆ ಡಿ ಬಾಸ್ ಅವರಿಗೆ ಸಂಕಷ್ಟ ಎದುರಾಗುತ್ತಿದ್ದೆಯಾ ? ಎನ್ನುವ ಚರ್ಚೆಯೊಂದು ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದೆ.
ಕಷ್ಟದಿಂದ ಮೇಲೆ ಬಂದು ಕನ್ನಡ ಚಿತ್ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಚಾಲೆಂಜಿಂಗ್ ಸ್ಟಾರ ದರ್ಶನ್ ಅವರಿಗೆ ಇದೀಗ ವಿವಾದಗಳ ಮೇಲೆ ವಿವಾದಗಳು ಬೆಂಬಿಡದೆ ಕಾಡುತ್ತಿವೆ. ಇದಕ್ಕೆ ಕಾರಣ ದುರ್ಯೋಧನನ ಪಾತ್ರ ಎನ್ನುತ್ತಾರೆ ಉಪ್ಪರಕನಹಳ್ಳಿ ಗ್ರಾಮಸ್ಥರು.
ಗ್ರಾಮಸ್ಥರು ಹೇಳುವುದೇನು ?
ಗ್ರಾಮದಲ್ಲಿ ಅನೇಕರು ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನ ಪಾತ್ರ ಮಾಡಿದ್ದಾರೆ. ಅವರು ಈಗ ಹೇಳುವ ಪ್ರಕಾರ ದುರ್ಯೋಧನನ ಪಾತ್ರ ಮಾಡಿದ ನಂತರ ತಮ್ಮಲ್ಲಿ ತಮಗೆ ಅರಿವೆ ಇಲ್ಲದಂತೆ ಹುಂಬರಾಗಿ ಬಿಡುತ್ತಿದ್ದರಂತೆ. ಗ್ರಾಮದಲ್ಲಿ ಯಾರೇ ಮಾತನಾಡಿಸಿದರು ನಕಾರಾತ್ಮಕ ಉತ್ತರವನ್ನ ಜಂಬದಿಂದ ನೀಡುತ್ತುದ್ದರಂತೆ. ಬಳಿಕ ಹಿರಿಯರ ಮಾರ್ಗದರ್ಶನದಂತೆ ಕೃಷ್ಣ ಅಥವಾ ಈಶ್ವರನ ಪಾತ್ರ ಮಾಡಿದ ಮೇಲೆ ಸಂಕಷ್ಟ ಪರಿಹಾರವಾಗ್ತಿತ್ತಂತೆ.
ಈ ಗ್ರಾಮದ ಮಾದೇವಪ್ಪ ದುರ್ಯೋಧನನ ಪಾತ್ರ ಮಾಡಿದ್ದರಂತೆ. ಬಳಿಕ ಅವರ ಮನಸ್ಸು ನಿಯಂತ್ರಣದಲ್ಲಿ ಇರದೆ ಗ್ರಾಮದ ಜನರ ಜೊತೆ ಮೇಲಿಂದ ಮೇಲೆ ಜಗಳವಾಗಿ, ಸಾಕಷ್ಟು ತೊಂದರೆಗಳನ್ನ ಅನುಭಸಿದ್ದರಂತೆ. ಅದೇ ರೀತಿ ಗ್ರಾಮದ ಮತ್ತೊರ್ವ ಶಿವಕುಮಾರ್ ಆರಾಧ್ಯ ಎಂಬಾತ ಕೂಡ ಇದನ್ನೆ ವಿವರಿಸಿದ್ದಾರೆ. ಸದ್ಯ ಇವರೆಲ್ಲರೂ ಬೇರೋಂದು ದೇವರ ಪಾತ್ರ ಮಾಡೋ ಮೂಲಕ ಆ ಸಂಕಷ್ಟದಿಂದ ಪಾರಾಗಿದ್ದಾಗಿ ಹೇಳ್ತಿದ್ದಾರೆ.