ಚಿಕ್ಕಮಗಳೂರು : ಸಿದ್ರಾಮುಲ್ಲಾಖಾನ್ ಎಂದೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಮೈ ಉರಿ ಹತ್ತಿದೆ.ಹೀಗೆ ಉರಿ ಹತ್ತುತ್ತೆ ಎಂದು ಗೊತ್ತಿದ್ದರೆ 10 ವರ್ಷ ಮೊದಲೇ ಹೇಳುತ್ತಿದ್ದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭಾನುವಾರ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ನೀವು ಪ್ರಧಾನಿಗೆ ಕೊಲೆಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದು ಕರೆದಿರಿ,ಸಿದ್ರಾಮುಲ್ಲಾಖಾನ್ ಅನ್ನೋದು ಬೈಗುಳವಾ? ಅದು ಬೈಗುಳ ಅಲ್ಲ.ನಿಮಗೆ ಉರಿ ಹತ್ತಿದ್ಯಾಕೆ…?. ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದು. ಯಡಿಯೂರಪ್ಪ ಅವರನ್ನು ರಾಜಾಹುಲಿ ಅಂತಾರೆ, ಸಿದ್ದರಾಮಯ್ಯ ಅವರನ್ನು ಹುಲಿಯಾ ಅಂದರು. ಇದು ಹಾಗೇ ಒಂದು ಬಿರುದು ಎಂದರು.
”ನಾನು ಹಿಂದೂಗಳಿಗೆ ಅನ್ಯಾಯ ಮಾಡಿದ್ದೆ, ಟಿಪ್ಪು ಜಯಂತಿ ಪರ ಇದ್ದೆ ಎಂದು ಕೊಟ್ಟ ಬಿರುದು ಎಂದು ಸಿದ್ದರಾಮಯ್ಯ ಭಾವಿಸುತ್ತಾರೆ ಎಂದು ತಿಳಿದಿದ್ದೆ” ಎಂದು ಸಿ.ಟಿ.ರವಿ ಹೇಳಿದರು.
ಎಂ.ಬಿ ಪಾಟೀಲ್ ಗೆ ಟಾಂಗ್
ಸಿ. ಟಿ.ರವಿ ಇದನ್ನ ಮುಂದುವರಿಸಿದರೆ ಓಡಾಡುವುದು ಕಷ್ಟವಾಗಬಹುದು ಎಂದಿದ್ದ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಅವರಿಗೆ ಟಾಂಗ್ ನೀಡಿ, ”ಬೆದರಿಕೆ ಹಾಕ್ತಾರಾ, ಪ್ರಜಾಪ್ರಭುತ್ವದಲ್ಲಿ ಈ ಬೆದರಿಕೆ ನಡೆಯೋಲ್ಲ. ಅವರು ಶ್ರೀಮಂತರೇ ಇರಬಹುದು, ಪಾಳೇಗಾರರೇ ಇರಬಹುದು. ನಾನೊಬ್ಬ ಸಾಮಾನ್ಯ ರೈತನ ಮಗ ಪಾಳೆಗಾರ ಮನೆತನದವನ್ನಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಂಬೇಡ್ಕರ್ ಕೊಟ್ಟಿದ್ದು ಒಂದೇ ವೋಟ್.
Related Articles
ಈ ಪಾಳೇಗಾರಿಕೆ ಮನಸ್ಥಿತಿ ಯನ್ನು ಎಂ.ಬಿ.ಪಾಟೀಲರು ಬದಲಾಯಿಸಿಕೊಳ್ಳಬೇಕು. ನೀವು ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ ಚಾಲೆಂಜ್ ಸ್ವೀಕರಿಸುತ್ತೇನೆ, ನಿಮ್ಮೂರಿಗೆ ಬರುತ್ತೇನೆ. ನಾನು ಏನೂ ಹೇಳಬೇಕು ಅಂದುಕೊಂಡಿದ್ದೇನೆ ಅದನ್ನ ನಿಮ್ಮೂರಿನಲ್ಲೇ ಹೇಳುತ್ತೇನೆ. ನಿಮ್ಮಮುಖದ ಎದುರೇ ಹೇಳುತ್ತೇನೆ. ನಿಮ್ಮಷ್ಟು ಶ್ರೀಮಂತಿಗೆ ನನ್ನ ಬಳಿ ಇಲ್ಲ ಎಂದು ನನಗೆ ಗೊತ್ತು,ಆದರೆ, ನಿಮ್ಮ ಶ್ರೀಮಂತಿಕೆ ದರ್ಪವನ್ನು ಜನರ ಮೇಲೆ ತೋರಿಸಬೇಡಿ. ನಿಮ್ಮ ಶ್ರೀಮಂತಿಕೆ ದರ್ಪ ಇಲ್ಲಿ ನಡೆಯುವುದಿಲ್ಲ.ಕರ್ನಾಟಕ ಯಾರ ಅಪ್ಪನ ಸ್ವತ್ತೂ ಅಲ್ಲ.ಯಾರ ಫಾದರ್ ಮನೆ ಪ್ರಾಪರ್ಟಿಯೂ ಅಲ್ಲ ಎಂದು ತಿರುಗೇಟು ನೀಡಿದರು.
7ನೇ ಶತಮಾನದಿಂದಲೂ ಇದೆ
Join CFI ಗೋಡೆ ಬರಹದ ಕುರಿತು ಪ್ರತಿಕ್ರಿಯಿಸಿ, ”ಪಿಎಫ್ಐ, ಸಿಎಫ್ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನ ಇದ್ದಾರೆ. ಇಂದು-ನಿನ್ನೆಯಿಂದಲ್ಲ, 7ನೇ ಶತಮಾನದಿಂದಲೂ ಆ ಮನಸ್ಥಿತಿ ಇದೆ. ಇಸ್ಲಾಮಿಕ್ ಸ್ಟೇಟ್ ಹುಟ್ಟುಹಾಕಬೇಕೆಂದು ಗಜಾವಹಿಂದ್ ಹೆಸರಲ್ಲಿ 7ನೇ ಶತಮಾನದಿಂದ ಶುರುವಾದದ್ದು. ಆ ಮನಸ್ಥಿತಿಯ ಜನ ಇದ್ದಾರೆ ಆ ಮನಸ್ಥಿತಿಯ ಕಾರಣಕ್ಕೆ ಜಿನ್ನಾ ಭಾರತ ವಿಭಜನೆಗೆ ಕೈಹಾಕಿದ್ದು. ವೋಟಿನ ಆಸೆಗೆ ಜೊಲ್ಲು ಸುರಿಸಿಕೊಂಡು ತನ್ನದೆ ಶಾಸಕನ ಮನೆಗೆ ಬೆಂಕಿ ಹಾಕಿದರು. ಆಗ ಅವರು ಅಮಾಯಕರು ಅಂತ ಸರ್ಟಿಫಿಕೇಟ್ ಕೊಡುವವರಿಗೆ ಮತಹಾಕಿದರೆ ಅವರೂ ಉಳಿಯಲ್ಲ ದೇಶವೂ ಉಳಿಯುವುದಿಲ್ಲ” ಎಂದರು.