Advertisement
ಮಣಿಪಾಲ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿರುವುದರಿಂದ ಮತ್ತೆ ಕಠಿಣ ಲಾಕ್ ಡೌನ್ ನಿಯಮ ಜಾರಿಗೆ ತರಬೇಕಾದ ಅನಿವಾರ್ಯತೆ ಇದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
Related Articles
Advertisement
ಗೋಪಾಲಕೃಷ್ಣ ಜಿ: ಎಷ್ಟು ದಿನ ಮಾಡಲು ಸಾಧ್ಯ ?ಕೋವಿಡ್ ಇರುವಾಗ ಹೇಗೆ ಇರಬೇಕೆಂದು ಸುಮಾರು 60 ದಿನ ತಿಳಿಸಿದ್ದಾರೆ.ಸಾಮಾಜಿಕ ಅಂತರ, ಮಾಸ್ಕ್, ಸಾರ್ವಜನಿಕ ಸಾರಿಗೆ ಬಳಸುವ ಮಾರ್ಗ ತಿಳಿಸಿದ್ದಾರೆ. ಆದರೆ ನಾವು ಮಾಸ್ಕ್ ಹಾಕುವುದಿಲ್ಲ, ಸಾಮಾಜಿಕ ಅಂತರ ಪಾಲಿಸುತ್ತಿಲ್ಲ, ಸಾರ್ವಜನಿಕ ಸಾರಿಗೆಯಲ್ಲಿ ಹೆಚ್ಚು ಜನ ಬಸ್ಸು ಹತ್ತುತ್ತೇವೆ. ನಮಗೆ ನಮ್ಮ ಜೀವದ ಬಗ್ಗೆ ಎಚ್ಚರ ಇರಬೇಕು. ಬಲವಂತವಾಗಿ ಮಾಡಲು ಸಾಧ್ಯ ಇಲ್ಲ
ದಾವೂದ್ ಕೂರ್ಗ್: ಸರ್ಕಾರ ಮುಗ್ಗರಿಸಿದ ಆರ್ಥಿಕತೆಯನ್ನು ಮೇಲೆತ್ತುವ ಕೆಲಸ ಮಾಡಲಿ, ಜನರು ಸ್ವಯಂಪ್ರೇರಿತರಾಗಿ ಕೊರೊನಾದ ವಿರುದ್ಧ ಸಮರ ಸಾರಲಿ, ಸರ್ಕಾರದ ಕೈಲಿ ಆಗದ ಕೆಲಸವಿದು
ಸತ್ಯ ಕುಡುಂಬಿಲಾ: ಸರಿಯಾದ ರೀತಿಯಲ್ಲಿ ಮಾಡಿದ್ರು. ಆದ್ರೆ ಅದನ್ನ ಪಾಲಿಸೋ ಯೋಗ್ಯತೆ ನಮ್ಮ ಜನಗಳಿಗೆ ಬೇಕಲ್ವಾ. ಬರೀ ಸರಕಾರನ ದೂರೋದು ಮಾಡೋದಲ್ಲ. ಅವರವರ ಜವಾಬ್ದಾರಿ ಅರಿತು ಎಲ್ಲರೂ ವರ್ತಿಸಿದ್ದರೆ ಇಷ್ಟು ಜಾಸ್ತಿ ಆಗುತ್ತಿರಲಿಲ್ಲ. ರಿಲ್ಯಾಕ್ಸ್ ಸಿಕ್ಕ ತಕ್ಷಣ ಬೀದಿನಾಯಿ ಸುತ್ತಾಡೋ ತರ ಸುತ್ತಾಡಿದ್ರೆ ಇನ್ನೇನಾಗುತ್ತೆ?