Advertisement

ಚೀನದಿಂದ ‘ಸೂಪರ್‌ ಸೈನಿಕ’ರ ಸೃಷ್ಟಿ

12:24 AM Dec 05, 2020 | mahesh |

ಹೊಸದಿಲ್ಲಿ: ಕಲ್ಪಿಸಿಕೊಳ್ಳಿ… -20 ಡಿಗ್ರಿ ಸೆಂಟಿಗ್ರೇಡ್‌ನ‌ಷ್ಟು ಮೈ ಕೊರೆಯುವ ಚಳಿ. ಗಾಲ್ವಾನ್‌ ತೀರದ ಆಚೆಗಿನ ಹಿಮಗಡ್ಡೆಯ ಅಡಿಯಲ್ಲಿ ಕುತಂತ್ರಿ ಚೀನೀ ಸೈನಿಕ ತಿಂಗಳುಗಟ್ಟಲೆ ಅವಿತಿದ್ದಾನೆ! ಅವನಿಗೆ ಘೋರ ಚಳಿ ತಟ್ಟದು. ಅಷ್ಟು ಕಡು ಶೀತ ಇದ್ದರೂ ಯಾವ ಸೋಂಕಿಗೂ ತುತ್ತಾಗ ದಷ್ಟು ಗಟ್ಟಿ ಮುಟ್ಟು ಆತ. ಆ ರಣ ರಕ್ಕಸನಿಗೆ ದಣಿವಿಲ್ಲ. ಹಸಿವಿಲ್ಲ. ರೋಗಗಳ ದಿಗಿಲಿಲ್ಲ!

Advertisement

ಭವಿಷ್ಯದ ಯುದ್ಧಭೂಮಿಯಲ್ಲಿ ಕಾದಾಡಲು ಇಂಥ “ಸೂಪರ್‌ ಸೈನಿಕ’ ರನ್ನು ರೂಪಿಸಲು ಚೀನ ಪಿತೂರಿ ಆರಂಭಿ ಸಿದೆ. ಇದಕ್ಕಾಗಿ ಜೈವಿಕ ತಂತ್ರಜ್ಞಾನದ ಮೊರೆ ಹೋಗಿದೆ. ಸೈನಿಕರ ವಂಶವಾಹಿಗಳನ್ನೇ ತಿದ್ದಿ, ಲಸಿಕೆ ಮೂಲಕ ಅವರಲ್ಲಿ “ಅತಿಮಾನುಷ’ ಶಕ್ತಿ ತುಂಬುವ ನೀಚ ಕೆಲಸಕ್ಕೆ ಇಳಿದಿದೆ.

ಹಾಲಿವುಡ್‌ ಸಿನೆಮಾಗಳಲ್ಲಿ “ಸೂಪರ್‌ ಸೈನಿಕ’ರ ದೃಶ್ಯಗಳಿವೆ. ಚೀನವು ಇಂತಹ ತಂತ್ರಜ್ಞಾನವನ್ನು ತನ್ನ ಸೇನೆಯಲ್ಲಿ ಅಳವಡಿಸಿಕೊಳ್ಳುತ್ತಿದೆ ಎಂದು ಯುಎಸ್‌ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಜಾನ್‌ ರ್ಯಾಟ್‌ಕ್ಲಿಫ್ “ವಾಲ್‌ ಸ್ಟ್ರೀಟ್‌ ಜರ್ನಲ್‌’ಗೆ ಬರೆದ ಲೇಖನದಲ್ಲಿ ಆರೋಪಿಸಿದ್ದಾರೆ.

“ಅಧಿಕಾರಕ್ಕಾಗಿ ಬೀಜಿಂಗ್‌ ಯಾವ ನೈತಿಕ ಚೌಕಟ್ಟುಗಳನ್ನೂ ಇಟ್ಟುಕೊಳ್ಳುವುದಿಲ್ಲ’ ಎಂದು ರ್ಯಾಟ್‌ ಕ್ಲಿಫ್ ಎಚ್ಚರಿಸಿದ್ದಾರೆ.

ಏನಿದು “ಸೂಪರ್‌ ಪವರ್‌’?
ಸೈನಿಕರನ್ನು ಜೈವಿಕ ಪರೀಕ್ಷೆಗೆ ಒಳಪಡಿಸಿ, ಜೀನ್‌ (ವಂಶವಾಹಿ) ಸಾಮರ್ಥ್ಯ ಅಧ್ಯಯನ ಮಾಡಲಾಗುತ್ತದೆ. ಇವರಲ್ಲಿ ಅರ್ಹರಿಗೆ ಜೀವವರ್ಧಕ ಲಸಿಕೆ ನೀಡಿ ಜೀನ್‌ಗಳನ್ನು ತಿದ್ದುವ ಮೂಲಕ ಸೂಪರ್‌ ಪವರ್‌ ಸೈನಿಕರನ್ನಾಗಿ ರೂಪಿಸಲಾಗುತ್ತದೆ. ಇಂಥವರನ್ನು ಮುಂಚೂಣಿಯ ನೆಲೆಗಳಲ್ಲಿ ಕಾದಾಡಲು ಛೂ ಬಿಡುವುದು ಚೀನದ ಕುತಂತ್ರ. “ಸಿಆರ್‌ಐಎಸ್‌ಪಿಆರ್‌ ಸಾಧನದ ಮೂಲಕ ಚೀನವು, ಪಿಎಲ್‌ಎ ಸೈನಿಕರ ಜೀನ್‌ಗಳನ್ನು ತಿದ್ದುತ್ತಿದೆ’ ಎಂದು ಅಮೆರಿಕದ ತಜ್ಞರು ಕಳೆದ ವರ್ಷವೇ ಖಚಿತಪಡಿಸಿದ್ದರು. ರ್ಯಾಟ್‌ಕ್ಲಿಫ್ ಇದನ್ನು ಪುನರುಚ್ಚರಿಸಿದ್ದಾರೆ.

Advertisement

“ಕ್ಯಾಪ್ಟನ್‌ ಆಫ್ ಅಮೆರಿಕ’ ಪ್ರೇರಣೆ?
ಹಾಲಿವುಡ್‌ನ‌ “ಕ್ಯಾಪ್ಟನ್‌ ಆಫ್ ಅಮೆರಿಕ’ ಚಲನಚಿತ್ರವು ಇಂಥ “ಸೂಪರ್‌ ಸೈನಿಕ’ನ ಪಾತ್ರವನ್ನು ಸೃಷ್ಟಿಸಿತ್ತು. ಆ ಚಿತ್ರದಲ್ಲಿ ಕ್ಯಾಪ್ಟನ್‌ ಸ್ಟೀವ್‌ ರೋಜರ್ಸ್‌ಗೆ ಮಿಲಿಟರಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಪ್ರಯೋಗಿಸುವ ಮೂಲಕ ಆತನಿಗೆ ಅತಿಮಾನುಷ ಶಕ್ತಿ ನೀಡಲಾಗುತ್ತದೆ. ಚೀನವು ಇದನ್ನು ಯುದ್ಧಭೂಮಿಯಲ್ಲಿ ನಿಜವಾಗಿಸುತ್ತಿದೆ!

Advertisement

Udayavani is now on Telegram. Click here to join our channel and stay updated with the latest news.

Next