Advertisement

ಉತ್ತರ ಕೊರಿಯಾ ಸುತ್ತ ಅಮೆರಿಕ ಸೇನಾ ಬಲ ಹೆಚ್ಚಳ

01:14 PM Apr 26, 2017 | Karthik A |

ಸಿಯೋಲ್‌: ಉತ್ತರ ಕೊರಿಯಾದೊಂದಿಗೆ ಅಮೆರಿಕ ಸಂಬಂಧ ಮತ್ತಷ್ಟು ಜಟಿಲವಾಗುತ್ತಿರುವಂತೆಯೇ ಅಮೆರಿಕ ತನ್ನ ಪ್ರಬಲ ಜಲಾಂತರ್ಗಾಮಿ ನೌಕೆಯನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಿಕೊಟ್ಟಿದೆ. ಉ. ಕೊರಿಯಾದತ್ತ ಈಗ ಅಮೆರಿಕದ ಅತೀ ದೊಡ್ಡ ವಿಮಾನ ವಾಹಕ ನೌಕೆಗಳಲ್ಲಿ ಒಂದಾದ ‘ಯುಎಸ್‌ಎಸ್‌ ಕಾರ್ಲ್ ವಿನ್ಸನ್‌’ ಆಗಮಿಸುತ್ತಿರುವಂತೆಯೇ, ಕ್ಷಿಪಣಿಗಳನ್ನು ಉಡಾಯಿಸಬಲ್ಲ ಸಾಮರ್ಥ್ಯದ ‘ಯುಎಸ್‌ಎಸ್‌ ಮಿಷಿಗನ್‌’ ಜಲಾಂತರ್ಗಾಮಿ ನೌಕೆಯನ್ನೂ ಕಳುಹಿಸಿದೆ.

Advertisement

ಭಾರೀ ಸಮರಾಭ್ಯಾಸ: ಏತನ್ಮಧ್ಯೆ ಉತ್ತರ ಕೊರಿಯಾ ಭಾರೀ ಪ್ರಮಾಣದಲ್ಲಿ ಫಿರಂಗಿ ಇತ್ಯಾದಿಗಳ ಸಮರಾಭ್ಯಾಸ ನಡೆಸಿದೆ. ಇದೇ ವೇಳೆ ಜಪಾನ್‌, ದ. ಕೊರಿಯಾ, ಅಮೆರಿಕಗಳೂ ತಮ್ಮ ಮಿಲಿಟರಿ ಶಕ್ತಿ ಸಂಚಯಕ್ಕೆ ತೊಡಗಿಕೊಂಡಿವೆ. ಅಮೆರಿಕ, ಜಪಾನ್‌ನ ಯುದ್ಧನೌಕೆಗಳು ಹಳದಿ ಸಮುದ್ರ ಮತ್ತು ಕೊರಿಯನ್‌ ವಲಯದ ಪಶ್ಚಿಮ ಭಾಗದಲ್ಲಿ ಸಮರಾಭ್ಯಾಸ ನಿರತವಾಗಿವೆ. ‘ನಮ್ಮ ಎಚ್ಚರಿಕೆ ಹೊರತಾಗಿಯೂ ಶತ್ರುಗಳು ಮಿಲಿಟರಿ ದುಸ್ಸಾಹಸಕ್ಕೆ ಮುಂದಾದಲ್ಲಿ ನಮ್ಮ ಸಶಸ್ತ್ರ ಪಡೆಗಳು ಅವುಗಳನ್ನು ಪರಮಾಣು ಬಾಂಬ್‌ ದಾಳಿ ಮೂಲಕ ಭೂಮಿಯಿಂದಲೇ ನಿರ್ನಾಮ ಮಾಡಿಬಿಡಬಲ್ಲವು’ ಎಂದು ಉತ್ತರ ಕೊರಿಯಾ ರಕ್ಷಣಾ ಸಚಿವ ಪಾಕ್‌ ಯಂಗ್‌ ಸಿಕ್‌ ಬೆದರಿಕೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next