Advertisement

ಮಧುಗಿರಿ ತಾಲೂಕಿನ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವೆ

03:11 PM Jun 01, 2021 | Team Udayavani |

ಮಧುಗಿರಿ: ಜಿಲ್ಲೆಯಲ್ಲಿ ಮಧುಗಿರಿ ಬರಪೀಡಿತವಾಗಿದ್ದು, ರೈತರ ಅಭಿವೃದ್ಧಿಗಾಗಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಂಸದ ಜಿ.ಎಸ್‌. ಬಸವರಾಜು ತಿಳಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನೇತ್ರಾವತಿ 2ನೇ ತಿರುವು ಯೋಜನೆಯಡಿ ಕೆ.ಟಿ.ತಿಮ್ಮನಹಳ್ಳಿ ಕೆರೆಗೆ ನೀರು ಹರಿಸುವ ಕಾರ್ಯಕ್ರಮವಿದ್ದು, ಇದು ಸಾಕಾರಗೊಂಡರೆ ತಾಲೂಕು ಬರಪೀ ಡಿತ ಮುಕ್ತ ಕ್ಷೇತ್ರವಾಗುವುದು. ಇದರಿಂದ ರೈತರೂ ಅಭಿವೃದ್ಧಿ ಹೊಂದುವರು ಎಂದರು.

ತಾಲೂಕಿನಲ್ಲಿ ಕೋವಿಡ್‌ ಸೋಂಕುಇ ಳಿಮುಖವಾಗುತ್ತಿದ್ದು, ಅಧಿಕಾರಿಗಳು ಮತ್ತಷ್ಟು ಹೆಚ್ಚಿನ ಶ್ರಮ ಹಾಕಿ ನಿಯಂತ್ರಣ ಮಾಡಬೇಕು. ಪರೀಕ್ಷಾ ವರದಿ ಶೀಘ್ರನೀಡಲು ಕ್ರಮ ವಹಿಸಬೇಕಿದ್ದು, ಲಸಿಕೆಯನ್ನು ಎಲ್ಲರೂ ಪಡೆಯಬೇಕಿದೆ ಎಂದರು.

ಕಾಂಗ್ರೆಸ್‌ನವರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ ಕಾರಣ 35 ಲಕ್ಷ ಡೋಸ್‌ ಲಸಿಕೆಯನ್ನು ಕೇಂದ್ರ ಆಫ್ರಿಕಾಗೆ ಕಳುಹಿಸಿತ್ತು. ಈಗ ರಾಜ್ಯದಲ್ಲೇ ಹೆಚ್ಚು ಲಸಿಕೆ ನೀಡಲಾಗಿದೆ ಎಂದರು.

ಮಧುಗಿರಿ ಪುನರ್ಜನ್ಮ ನೀಡಿದೆ: ರಾಜಕೀಯವಾಗಿ ಮಧುಗಿರಿ ಪುನರ್ಜನ್ಮ ನೀಡಿದ್ದು, ಯಾವುದೇ ಯೋಜನೆ ಬಂದರೂ ಮಧುಗಿರಿಗೆ ಮೊದಲ ಆದ್ಯತೆ ನೀಡುತ್ತೇನೆ. ಕೇಂದ್ರ ಸರ್ಕಾರದ ಜಲಜೀವನ್‌ಯೋಜನೆ ಜಾರಿಗೊಳಿಸುವ ಸಂಬಂಧ ಈಗಾಗಲೇ ಕಾರ್ಯ ಪ್ರವೃತ್ತನಾಗಿದ್ದು, 2 ವರ್ಷದ ಸಂಸದನ ಕಾಲಮಿತಿಯಲ್ಲಿ 1.5 ತಿಂಗಳು ಮಾತ್ರ ಅಧಿವೇಶನನಡೆದಿದೆ. ಪ್ರಸ್ತುತ ಜೂ.1 ರಿಂದ ಹೇಮಾವತಿ ನೀರು ಹರಿಸಲು ಕ್ರಮ ವಹಿಸಿದ್ದು, ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ ಎಂದರು.

Advertisement

ಆಸ್ಪತ್ರೆಗೆ ಆಕ್ಸಿಜನ್‌ ಘಟಕ: ಜಿಲ್ಲಾ ಉಸ್ತುವಾರಿ ಸಚಿವರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಸ್ಪತ್ರೆಗೆ ಆಕ್ಸಿಜನ್‌ ಘಟಕಕ್ಕಾಗಿ ವೈದ್ಯರು ಮನವಿ ಮಾಡಿದ್ದು, 0.5 ಕೆ ಯುನಿಟ್‌ ಆಕ್ಸಿಜನ್‌ ಘಟಕ ಮಂಜೂರಾಗಿದೆ. ಇದರಿಂದ ತುರ್ತು ಸಮಯದಲ್ಲಿ ರೋಗಿಗಳಿಗೆ ನೆರವಾಗಲಿದ್ದು, ಆಸ್ಪತ್ರೆ ಕೂಡ ಮೇಲ್ದರ್ಜೆಗೆ ಏರಲಿದೆ ಎಂದರು. ಉಪವಿಭಾಗಾಧಿ ಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್‌ ವೈ.ವಿ.ರವಿ, ಡಿವೈಎಸ್ಪಿ ರಾಮಕೃಷ್ಣ, ಯುವ ಕಾಂಗ್ರೆಸ್‌ಉಪಾಧ್ಯಕ್ಷ ಆರ್‌.ರಾಜೇಂದ್ರ, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ, ಇಒ ದೊಡ್ಡಸಿದ್ದಯ್ಯ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗೇಶ್‌ಬಾಬು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next