Advertisement

ನೀರಾವರಿಗೆ ಶೇ. 15 ಹಣ ಮೀಸಲಿಡಿ; ಎಸ್‌. ಆರ್‌. ಪಾಟೀಲ

05:25 PM Apr 16, 2022 | Team Udayavani |

ಕೂಡಲಸಂಗಮ: ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಉತ್ತರ ಕರ್ನಾಟಕ ಮಹಾದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ನವಲಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕೃಷ್ಣಾ, ಮಹಾದಾಯಿ, ನವಲಿ ಸಂಕಲ್ಪ ಯಾತ್ರೆ ಆರಂಭಿಸಲಾಗಿದೆ ಎಂದು ಯಾತ್ರೆಯ ನೇತೃತ್ವ ವಹಿಸಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌. ಆರ್‌. ಪಾಟೀಲ ಹೇಳಿದರು.

Advertisement

ಕೂಡಲಸಂಗಮ ಸಭಾಭವನದಲ್ಲಿ ನಡೆದ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಈ ನೀರಾವರಿ ಯೋಜನೆಗೆ ಶೇ. 15ರಷ್ಟು ಹಣ ಮೀಸಲಿಟ್ಟಾಗ ಯೋಜನೆ ಯಶಸ್ವಿಯಾಗುವುದು. ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಬಜೆಟ್‌ನಲ್ಲಿ ಐದು ಸಾವಿರ ಕೋಟಿ ಮೀಸಲಿಟ್ಟಿದೆ. ಇದರಿಂದ ಯೋಜನೆಗಳು ವಿಳಂಬವಾಗುತ್ತವೆ. 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಗೆ 60 ಸಾವಿರ ಕೋಟಿ ಅಗತ್ಯ ಇದ್ದು, ಇದರಿಂದ 7 ಜಿಲ್ಲೆಯ
14 ಸಾವಿರ ಹೆಕ್ಟೇರ್‌ ಪ್ರದೇಶದ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಪಕ್ಷಾತೀತವಾಗಿ ನಡೆಸುತ್ತಿರುವ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರಕಿದೆ. ಸ್ವಪಕ್ಷದಿಂದ ನೀರಾವರಿ ಯೋಜನೆಗೆ ಅನ್ಯಾಯವಾದರೂ ವಿರೋಧಿ ಸುವ ಕಾರ್ಯ ಮಾಡುತ್ತೇನೆ. ಉತ್ತರ ಕರ್ನಾಟಕದ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಹೋರಾಟ ಅಗತ್ಯ ಇದ್ದು, ಎಲ್ಲರೂ ಬೆಂಬಲಿಸಬೇಕು ಎಂದು ಕರೆಕೊಟ್ಟರು.

ನಾರಾಯಣಪುರ ಜಲಾಶಯ ಹಿನ್ನಿರಿನಲ್ಲಿ ಮುಳುಗಡೆಗೊಂಡ ಪುನರ್‌ ವಸತಿ ಗ್ರಾಮಗಳಿಗೆ ಸರ್ಕಾರ ಮೂಲಭೂತ ಸೌಲಭ್ಯ ಕಲ್ಪಿಸಲು ವಿಫಲವಾಗಿದೆ. 40 ವರ್ಷ ಗತಿಸಿದರೂ ಈ ಯೋಜನೆಗೆ ಮನೆ, ಜಮೀನು ಕಳೆದುಕೊಂಡ ಸಂತ್ರಸ್ತರು ಇನ್ನೂ ತಗಡಿನ ಶೆಟ್ಟಿನಲ್ಲಿ ವಾಸವಿರುವರು. ಇಂದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ನೀರಾವರಿ ಯೋಜನೆಗಳು ಸಮರ್ಪಕ ಅನುಷ್ಟಾನಗೊಳ್ಳದೇ ಇರುವುದರಿಂದ ಉತ್ತರ ಕರ್ನಾಟಕದ ಜನ ಅಧಿಕವಾಗಿ ವಲಸೆ ಹೊಗುತ್ತಿದ್ದಾರೆ. ಈ ಮೂರು ನೀರಾವರಿ ಯೋಜನೆಗಳು ಅನುಷ್ಟಾನಗೊಂಡರೆ ಯಾರು ವಲಸೆ ಹೋಗುವುದಿಲ್ಲ, ಬೇರೆ ರಾಜ್ಯದವರು ನಮ್ಮ ಕಡೆ ವಲಸೆ ಬರುವರು. ನವಲಿ ಬಳಿ ತುಂಗಭದ್ರಾ ನದಿಗೆ ಸಮತೋಲನ ಜಲಾಶಯ ನಿರ್ಮಿಸಿ 37 ಟಿ.ಎಂ.ಸಿ ನೀರು ಸಂಗ್ರಹಿಸಿ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಯ ಜಮೀನುಗಳನ್ನು ನೀರಾವರಿಗೆ ಒಳಪಡಿಸಬಹುದು ಎಂದು.

Advertisement

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಮಾತನಾಡಿ, ನೀರಾವರಿ ಯೋಜನೆಗಳ ಶಾಶ್ವತ ಅನುಷ್ಠಾನಕ್ಕೆ ಆಂದೋಲನದ ಅಗತ್ಯವಿದ್ದು, ಈ ಯಾತ್ರೆಗೆ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದರು. ಎಸ್‌ಆರ್‌ಎನ್‌ಇ ಫೌಂಡೇಶನ್‌ ಅಧ್ಯಕ್ಷ ಎಸ್‌.ಆರ್‌.ನವಲಿಹಿರೇಮಠ ಪ್ರಾಸ್ತಾವಿಕವಾಗಿ ಮತನಾಡಿದರು. ಕಳಸಾ ಬಂಡೂರಿ ಹೋರಾಟ ವೇದಿಕೆಯ ವೀರೇಶ ಸೊಬರದಮಠ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡರಾದ ಎಲ್‌.ಎಂ.ಪಾಟೀಲ, ಎಂ.ಎಸ್‌. ಪಾಟೀಲ, ಬಸಪ್ಪ ಹೆಸರೂರ, ಅಬ್ದುಲರಜಾಕ್‌ ತಟಗಾರ, ಜಗದೀಶ ಹೊಸಮನಿ, ಚೇತನ ಮುಕ್ಕನವರ, ಶಿವಪ್ಪ ಹೊರಕೇರಿ, ಎಸ್‌.ಟಿ.ಪಾಟೀಲ, ಎಮ್‌.
ಎನ್‌.ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next