Advertisement
ಹೆದ್ದಾರಿಯಿಂದ ಮರವಂತೆಯ ಹೊರಬಂದರನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ಕೇವಲ 500-600 ಮೀ. ಅಷ್ಟೆ ಕಾಂಕ್ರಿಟೀಕರಣಕ್ಕೆ ಬಾಕಿ ಇದೆ. ಇನ್ನುಳಿದ 1 ಕಿ.ಮೀ.ನಷ್ಟು ದೂರದ ರಸ್ತೆಗೆ 3 ವರ್ಷದ ಹಿಂದೆ ಕಾಂಕ್ರೀಟ್ ಕಾಮಗಾರಿ ಆಗಿದೆ. ಕಾಮಗಾರಿ ಬಾಕಿ ಇರುವ ಕಡೆ ರಸ್ತೆಯು ಸಂಪೂರ್ಣ ಹೊಂಡಮಯಗೊಂಡಿದ್ದು, ವಾಹನ ಸವಾರರು ಪ್ರಯಾಸಪಟ್ಟುಕೊಂಡು ಸಂಚರಿಸುವಂತಾಗಿದೆ.
Related Articles
Advertisement
ಮರವಂತೆ ಮೀನುಗಾರಿಕಾ ಹೊರಬಂದರು ಸಂಪರ್ಕಿಸುವ ರಸ್ತೆಯ 500 ಮೀ. ನಷ್ಟು ದೂರದವರೆಗಿನ ಕಾಂಕ್ರಿಟೀಕರಣ ಬಾಕಿಯಿದೆ. ಇದರ ಅಭಿವೃದ್ಧಿಗೆ ಅನುದಾನ ನೀಡುವಂತೆ ನಾವು ಪಂಚಾಯತ್ ವತಿಯಿಂದ ಶಾಸಕರು, ಸಂಸದರು ಹಾಗೂ ಮೀನುಗಾರಿಕಾ ಸಚಿವರಿಗೂ ಮನವಿ ಕೊಟ್ಟಿದ್ದೇವೆ. ಅನುದಾನ ಕೊಡುವ ಭರವಸೆ ನೀಡಿದ್ದಾರೆ. – ಲೋಕೇಶ್ ಖಾರ್ವಿ, ಅಧ್ಯಕ್ಷರು, ಮರವಂತೆ ಗ್ರಾ.ಪಂ.
ಇನ್ನೆಷ್ಟು ವರ್ಷ ಬೇಕು?
ಕಳೆದ 2-3 ವರ್ಷಗಳಿಂದ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಎಂದು ನಾವು ಇಲ್ಲಿಗೆ ಭೇಟಿ ನೀಡಿದ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಮೀನುಗಾರಿಕಾ ಇಲಾಖೆಯವರಿಗೂ ಮನವಿ ಮಾಡಿಕೊಂಡಿದ್ದೇವೆ. ಆದರೆ ಈವರೆಗೆ ಬಾಕಿ ಉಳಿದ ರಸ್ತೆಯ
ಅಭಿವೃದ್ಧಿ ಬಗ್ಗೆ ಮಾತ್ರ ಯಾರೂ ಗಮನಹರಿಸುತ್ತಿಲ್ಲ. ಇಲ್ಲಿ ಸುಮಾರು 200 ಕ್ಕೂ ಮಿಕ್ಕಿ ದೋಣಿಗಳಿವೆ. ಸುಮಾರು 5 ಸಾವಿರದಷ್ಟು ಮೀನುಗಾರರಿಗೆ ಈ ಬಂದರು ಜೀವನಾಧಾರವಾಗಿದೆ. ಈ ರಸ್ತೆಯ ಅಭಿವೃದ್ಧಿಗೆ ಇನ್ನೆಷ್ಟು ವರ್ಷ ಬೇಕು ಎನ್ನುವುದಾಗಿ ಮೀನುಗಾರರು ಪ್ರಶ್ನಿಸುತ್ತಿದ್ದಾರೆ.