Advertisement

ಬೇಕಿನಾಳ ಗ್ರಾಪಂನಲ್ಲಿ ಅವ್ಯವಹಾರ

02:37 PM Jan 03, 2020 | Suhan S |

ಸಿಂದಗಿ: ತಾಲೂಕಿನ ಬೇಕಿನಾಳ ಗ್ರಾಮ ಪಂಚಾಯತಿ ವಿವಿಧ ಯೋಜನೆಗಳ ಅನುದಾನ ದುರ್ಬಳಕೆ ಮಾಡುವ ಮೂಲಕ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ಈ ಅವ್ಯವಹಾರವನ್ನು ತನಿಖೆ ನಡೆಸಬೇಕು ಎಂದು ಬೇಕಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಗುರುವಾರ ಪಟ್ಟಣದ ತಾಲೂಕು ಪಂಚಾಯತಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

Advertisement

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಬೇಕಿನಾಳ ಗ್ರಾಮ ಪಂಚಾಯತಿ ಅಧ್ಯಕ್ಷ, ಪಿಡಿಒ ಮತ್ತು ಕಂಪ್ಯೂಟರ್‌ ಆಪರೇಟರ್‌ ಸೇರಿದಂತೆ ಸಾಕಷ್ಟು ಹಗರಣ ಮಾಡಿದ್ದಾರೆ. 14ನೇ ಹಣಕಾಸಿನ ಯೋಜನೆಯಲ್ಲಿ 30-35 ಲಕ್ಷ ರೂ., 192 ಸೌಚಾಲಯದ ಅನುದಾನ ದುರ್ಬಳಕೆ, 80 ಲಕ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ಹೀಗೆ ಗ್ರಾಮಪಂಚಾಯತಿಗೆ ಬಿಡುಗಡೆಯಾದ ಅನುದಾನ ದುರ್ಬಳಕೆ ಮಾಡಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ಸಾಕಷ್ಟು ಸಲ ಮೌಖೀಕವಾಗಿಹಾಗೂ ಲಿಖೀತವಾಗಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಕಿನಾಳ ಗ್ರಾಪಂ ಹಗರಣವನ್ನು ತನಿಖೆ ಮಾಡಿ ತಪ್ಪಿತಸ್ತರಿಗೆ ಶಿಕ್ಷೆ ನೀಡಬೇಕು. ತನಿಖೆ ಕೈಕೊಳ್ಳದಿದ್ದರೇ ಉಗ್ರ ಹೋರಾಟ ಕೈಕೊಳ್ಳಬೇಕಾಗುತ್ತದೆ. ಜಿಪಂ ಸಿಇಒ ಬಂದು ಮನವಿ ಸ್ವೀಕರಿಸುವವರೆಗೂ ಧರಣಿ ಮುಂದುವರೆಸುತ್ತೇವೆ ಎಂದು ಅ ಧಿಕಾರಿಗೆಳಿಗೆ ಎಚ್ಚರಿಕೆ ನೀಡಿದರು.

ತಾಪಂ ಸದಸ್ಯ ಎಂ.ಎನ್‌. ಕಿರಣರಾಜ, ಡಾ| ದಸ್ತಗೀರ ಇಂಗಳಗಿ, ಡಿಎಸ್‌ಎಸ್‌ ಸಂಚಾಲಕ ವಾಯ್‌.ಸಿ. ಮಯೂರ, ಹೂಯೋಗಿ ತಳ್ಳೋಳ್ಳಿ, ರಾಮನಗೌಡ ಬಿರಾದಾರ, ಬಸನಗೌಡ ಗುಂಡಕನಾಲ, , ಸಂತೋಷ ಟಿಖಾರೆ, ರಸುಲ್‌ ಮಳ್ಳಿ, ಶರಣಪ್ಪ ಕಟ್ಟಿಮನಿ,ಗುರುಪಾದಗೌಡ ಪಾಟೀಲ, ಸಂಗಮ್ಮ ಕಟ್ಟಿಮನಿ, ಕಾಸಯ್ಯ ಹಿರೇಮಠ, ಸಮಗಮ್ಮ ಗೊಟಗುಣಕಿ ಸೇರಿದಂತೆ ನೂರಾರು ಜನ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next