Advertisement
ಹಗರಣಕ್ಕೆ ಸಂಬಂಧಪಟ್ಟಂತೆ ಆಡಿಯೋ ದಾಖಲೆ ಬಿಡುಗಡೆ ಮಾಡಿ ಮಾತನಾಡಿ, 2020ರಲ್ಲಿ 50:50 ಅನುಪಾತದಲ್ಲಿ ನಿವೇಶನ ಕೊಡುವ ಬಗ್ಗೆ ಮುಡಾದಲ್ಲಿ ವಿಷಯ ಮಂಡಿಸಲಾಗಿತ್ತು. ವಿಸ್ತೃತ ಚರ್ಚೆ ನಿರ್ಣಯ ಕೈಗೊಂಡಿಲ್ಲ. ಆ ಸಭೆಯಲ್ಲಿ ಅಧ್ಯಕ್ಷ ರಾಜೀವ್, ಮರಿತಿಬ್ಬೇಗೌಡ, ಜಿ.ಟಿ. ದೇವೇಗೌಡ, ತನ್ವೀರ್ ಸೇಠ್ , ಡಾ| ಯತೀಂದ್ರ, ಆಯುಕ್ತ ನಟೇಶ್ ಮೊದಲಾದವರು ಇದ್ದರು. ಅವರು ಆಡಿದ ಮಾತುಗಳು ಇಲ್ಲಿವೆ. ನಿರ್ಣಯ ಆಗಿದೆ ಎಂದು ರಾಜೀವ್ ಮತ್ತು ಆಯುಕ್ತರು ಹೇಳಿದ್ದರಿಂದ ಸಿದ್ದರಾಮಯ್ಯ ಪತ್ನಿಗೆ 14 ಸೈಟ್ ಕೊಡಲಾಗಿದೆ ಎಂದರು.
ಹೊಸಕೋಟೆ: ಬಿಜೆಪಿ ಕಾರ್ಯಕರ್ತರು ಸರಿಯಾಗಿದ್ದಾರೆ. ಆದರೆ ನಾವು ಮಾಡಿದ ತಪ್ಪುಗಳಿಂದ ಮತ್ತು ಕಾಂಗ್ರೆಸ್‌ನ ಗ್ಯಾರಂಟಿ ಆಶ್ವಾಸನೆಗೆ ಪಕ್ಷದ ರಾಜ್ಯ ನಾಯಕರು ಸರಿಯಾಗಿ ಕೌಂಟರ್ ಮಾಡುವಲ್ಲಿ ಎಡವಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಹೇಳಿದರು. ಹೊಸಕೋಟೆ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಜನಪ್ರಿಯತೆ ಕುಂದಿಲ್ಲ. ಕುಂದಿಸಿದ್ದು ಮಾತ್ರ ಪಕ್ಷದ ಮುಖಂಡರು. ಲೋಕಸಭೆ ಚುನಾವಣೆಯಲ್ಲಿ ಕೆಲವು ತಪ್ಪುಗಳಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು.