Advertisement
ಡಿ. 17ರಂದು ನವಿಮುಂಬಯಿ ಸೆಕ್ಟರ್ 1ರ ಶಿವಕಾಲನಿಯ ಛತ್ರಪತಿ ಶಿವಾಜಿ ಮೈದಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಐರೋಲಿ ಇದರ ರಜತ ಮಹೋತ್ಸವ ಸಮಾರಂಭದ ದ್ವಿತೀಯ ದಿನದಂದು ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು. ಶಬರಿಮಲೆ ಯಾತ್ರೆಯ ವ್ರತಾಚರಣೆ, ಶಿಷ್ಟಾಚಾರ, ಪವಿತ್ರ 18 ಮೆಟ್ಟಿಲುಗಳ ಇತಿಹಾಸ, ಉದ್ದೇಶ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಿ, ವ್ರತದಾರಿ ಶಬರಿಮಲೆ ಯಾತ್ರೆಯಲ್ಲಿರುವ ಸ್ವಾಮಿಗಳ ಪ್ರಯಾಣ ಸುಖಮಯವಾಗಿರಲಿ ಎಂದು ನುಡಿದು ಶುಭ ಹಾರೈಸಿದರು.
Related Articles
Advertisement
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ, ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, 25 ವರ್ಷಗಳ ಹಿಂದೆ 7 ಮಂದಿ ಸ್ವಾಮಿಗಳಿಂದ ಶುಭಾರಂಭಗೊಂಡ ಈ ಸಮಿತಿ ಇಂದು ರಜತ ಮಹೋತ್ಸವ ಸಂಭ್ರಮದಲ್ಲಿರುವುದು ನಮಗೆಲ್ಲರಿಗೂ ಅಭಿಮಾನದ ವಿಷಯ. ಈ ನಿಟ್ಟಿನಲ್ಲಿ ಅನೇಕರು ಶ್ರಮಿಸಿದ್ದಾರೆ. ಅಯ್ಯಪ್ಪ ಸ್ವಾಮಿಯ ಸೇವೆಯನ್ನು ಭಕ್ತಿಪೂರ್ವಕವಾಗಿ ಮಾಡಿ ಸಮಿತಿಯ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಮಧು ಕೋಟ್ಯಾನ್ ಅವರ ಸಾಧನೆ ಮಹತ್ತರವಾಗಿದೆ. ಸಂಸ್ಥೆಯು ಪ್ರಸ್ತುತ ಕೃಷ್ಣ ವಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಇನ್ನಷ್ಟು ಬೆಳಗುವಂತಾಗಲಿ ಎಂದು ಹಾರೈಸಿದರು.
ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣ ವಿ. ಶೆಟ್ಟಿ ಎಕ್ಕಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಉದ್ಯಮಿಗಳಾದ ಅಶೋಕ್ ಶೆಟ್ಟಿ, ರಾಜೀವ ಶೆಟ್ಟಿ, ಸತೀಶ್ ಶೆಟ್ಟಿ ಮೂಡುಕೊಟ್ರಪಾಡಿ, ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ರಘು ಪಡಾವ್, ಉಪಾಧ್ಯಕ್ಷ ಅಮರನಾಥ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ವೀರೇಂದ್ರ ವಿ. ಶೆಟ್ಟಿ, ಕೋಶಾಧಿಕಾರಿ ಶ್ಯಾಮ್ ವಿ. ಶೆಟ್ಟಿ ಸುರ್ಗೋಳಿ, ಮಾಜಿ ಅಧ್ಯಕ್ಷ ಮಧು ಎನ್. ಕೋಟ್ಯಾನ್, ಮಂಡಲ ಗುರುಸ್ವಾಮಿ ಶೇಖರ್ ಎನ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅತಿಥಿಗಳನ್ನು ಕೃಷ್ಣ ವಿ. ಶೆಟ್ಟಿ, ಹರೀಶ್ ಶೆಟ್ಟಿ ಪಡುಬಿದ್ರೆ, ಕಳತ್ತೂರು ಅಮರ್‌ನಾಥ್ ಶೆಟ್ಟಿ, ವೀರೇಂದ್ರ ಶೆಟ್ಟಿ, ಶ್ಯಾಮ್ ವಿ. ಶೆಟ್ಟಿ, ರಘು ಪಡಾವ್ ಅವರು ಗೌರವಿಸಿದರು. ಉದಯ ಅವರು ಪ್ರಾರ್ಥನೆಗೈದರು. ಸಮಿತಿಯ ಉಪಾಧ್ಯಕ್ಷ ಕಳತ್ತೂರು ಅಮರ್‌ನಾಥ್ ಶೆಟ್ಟಿ ಸ್ವಾಗತಿಸಿದರು. ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷ ಕಷ್ಣ ವಿ. ಶೆಟ್ಟಿ ಎಕ್ಕಾರು, ಮಾಜಿ ಅಧ್ಯಕ್ಷರಾದ ಮಧು ಎನ್. ಕೋಟ್ಯಾನ್, ಜಗನ್ನಾಥ್ ಶೆಟ್ಟಿ, ಗೌರವಾಧ್ಯಕ್ಷ ರಘು ಪಡಾವ್, ಮಂಡಲ ಗುರುಸ್ವಾಮಿಗಳಾದ ಶೇಖರ್ ಎನ್. ಶೆಟ್ಟಿ, ಶಿಬಿರದ ಗುರುಸ್ವಾಮಿಗಳಾದ ಅಣ್ಣಿ ಎಚ್. ಶೆಟ್ಟಿ, 18ನೇ ವರ್ಷದ ಮಾಲಾಧಾರಣೆಗೈದ ಸ್ವಾಮಿಗಳಾದ ಗಿರೀಶ್ ಸ್ವಾಮಿ, ಅರುಣಾಚಲಂ ಸ್ವಾಮಿ, ಶಿಬಿರದ ಸ್ವಾಮಿಯ ಮೂರ್ತಿಗೆ ಬೆಳ್ಳಿ ಕವಚ ನಿರ್ಮಿಸಿದ ಶ್ರೀಪತಿ ಆಚಾರ್ಯ, ಸ್ಥಾಪನೀಯ ನಗರ ಸೇವಕ ಅನಂತ್ ಲಕ್ಷ್ಮಣ್ ಸುತಾರ್ ದಂಪತಿಗಳನ್ನು ಸತ್ಕರಿಸಲಾಯಿತು.
ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಸಮ್ಮಾನಿತರ ಯಾದಿಯನ್ನು ಕಾರ್ಯದರ್ಶಿ ವೀರೇಂದ್ರ ಶೆಟ್ಟಿ ಓದಿದರು. ತುಳುಕೂಟ ಮಾಜಿ ಅಧ್ಯಕ್ಷ ನಾಡಾಜೆಗುತ್ತು ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಅಮರ್‌ನಾಥ್ ಶೆಟ್ಟಿ ಕಳತ್ತೂರು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈವಿಧ್ಯ ಹಾಗೂ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಐರೋಲಿ ಕಲಾವಿದರಿಂದ ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನಗೊಂಡಿತು.
ಸಮಿತಿಯು ರಜತ ಮಹೋತ್ಸವ ಆಚರಣೆಯಲ್ಲಿದ್ದು, ಇದರ ಯಶಸ್ಸಿನ ಹಿಂದೆ ಗಣ್ಯರ ಶ್ರಮವಿದೆ. ಗುರುಸ್ವಾಮಿಗಳ, ಶಿಬಿರ ಸ್ವಾಮಿಗಳ ಹಾಗೂ ಮಾಲಾಧಾರಣೆಗೈದ ಎಲ್ಲಾ ಸ್ವಾಮಿಗಳ ಆಶೀರ್ವಾದದ ಫಲವಿದೆ. ನಾನು ಕೇವಲ ಅಧ್ಯಕ್ಷನಾಗಿದ್ದೇನೆ. ನನ್ನೋರ್ವನಿಂದ ಅಥವಾ ಒಬ್ಬಿಬ್ಬರಿಂದ ಇಂತಹ ಮಹಾನ್ ಕಾರ್ಯಸಾಧನೆ ಅಸಾಧ್ಯ. ಇದರ ಹಿಂದೆ ಶ್ರಮಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಮಹಿಳಾ ವಿಭಾಗ ಸಮಿತಿಯಲ್ಲಿ ಇಲ್ಲದಿದ್ದರೂ ಕೂಡಾ ಐರೋಲಿ, ನವಿಮುಂಬಯಿಯ ಎಲ್ಲ ಮಹಿಳೆಯರು ಒಮ್ಮತದ ಸಹಕಾರವನ್ನು ನೀಡಿದ್ದಾರೆ. ಎಲ್ಲರಿಗೂ ಸ್ವಾಮಿಯ ಅನುಗ್ರಹ, ಸಹಕಾರ ಇರಲಿ – ಕೃಷ್ಣ ವಿ. ಶೆಟ್ಟಿ ಎಕ್ಕಾರು (ಅಧ್ಯಕ್ಷರು: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಐರೋಲಿ).