Advertisement

ಐರೋಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಮಂಡಲ ಪೂಜೆ

12:02 PM Jan 01, 2019 | Team Udayavani |

ನವಿಮುಂಬಯಿ: ಐರೋಲಿಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಇಪ್ಪತ್ತಾರನೇ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಮಂಡಲ ಪೂಜೆಯು ಡಿ. 29 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಸೂರ್ಯನಾರಾಯಣ ಮೂರ್ತಿ ಗುರುಸ್ವಾಮಿ ಮುಲುಂಡ್‌ ಇವರ ಆಶೀರ್ವಾದ ಗಳೊಂದಿಗೆ ಮತ್ತು ಮಣಿಕಂಠ ಗುರುಸ್ವಾಮಿ ಅವರ ಶುಭಹಸ್ತದೊಂದಿಗೆ ಐರೋಲಿಯ ಸೆಕ್ಟರ್‌ 1 ರಲ್ಲಿರುವ ಶಿವ ಕಾಲನಿಯ ಛತ್ರಪತಿ ಶಿವಾಜಿ ಮಹಾರಾಜ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಮಹಾಪೂಜೆಯಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಶ್ರೀ ಮಣಿಕಂಠ ಗುರುಸ್ವಾಮಿ ಮುಲುಂಡ್‌ ಇವರ ಬಳಗದವರಿಂದ, ಶ್ರೀ ನಿತ್ಯಾನಂದ ಭಕ್ತಿ ಲಹರಿ ಕಲ್ಯಾಣ್‌ ಹಾಗೂ ಶ್ರೀ ವಿಟuಲ ರುಕುಮಾಯಿ ಭಜನಾ ಮಂಡಳಿ ಶಿವಕಾಲನಿ ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು.

ಮಧ್ಯಾಹ್ನ ಮಹಾಮಂಗಳಾರ ತಿಯ ಬಳಿಕ ಅಪರಾಹ್ನ 2 ರಿಂದ ಮಹಾಪ್ರಸಾದ ರೂಪವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಈ ಎಲ್ಲಾ ಪೂಜಾ ಕಾರ್ಯಕ್ರಮಗಳಲ್ಲಿ ಕೇವಲ ನವಿಮುಂಬಯಿ ಪರಿಸರದ ಭಕ್ತಾಭಿಮಾನಿಗಳಲ್ಲದೆ ಮುಂಬಯಿ ಹಾಗೂ ಉಪ ನಗರಗಳ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದು ಅನ್ನ ಪ್ರಸಾದ ಸ್ವೀಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಳುಕೂಟ ಐರೋಲಿ ಸಂಚಾಲಿತ ತುಳು ಕಲಾ ವೇದಿಕೆ ಐರೋಲಿ ಇವರಿಂದ ಕಾಂತಬಾರೆ-ಬೂದಬಾರೆ ಯಕ್ಷಗಾನ ಪ್ರದರ್ಶನಗೊಂಡಿತು. 

ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ ಇದರ ಶಿಬಿರದ ಗುರುಸ್ವಾಮಿ ಅಣ್ಣಿ ಎಚ್‌. ಶೆಟ್ಟಿ, ಶೇಖರ ಎನ್‌. ಶೆಟ್ಟಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಐರೋಲಿ ಇದರ ಗೌರವ ಕಾರ್ಯಾಧ್ಯಕ್ಷ ರಘು ಪಡವ್‌, ಅಧ್ಯಕ್ಷ ಕೃಷ್ಣ ವಿ. ಶೆಟ್ಟಿ, ಉಪಾಧ್ಯಕ್ಷ ಅಮರ್‌ನಾಥ ಶೆಟ್ಟಿ, ಕಾರ್ಯದರ್ಶಿ ವಿರೇಂದ್ರ ವಿ. ಶೆಟ್ಟಿ, ಕೋಶಾಧಿಕಾರಿ ಶ್ಯಾಮ್‌ ಎನ್‌. ಶೆಟ್ಟಿ, ಸ್ಥಾಪಕಾಧ್ಯಕ್ಷ ಮಾಧವ್‌ ಎನ್‌. ಕೋಟ್ಯಾನ್‌, ನಿಕಟಪೂರ್ವ ಅಧ್ಯಕ್ಷ ಜಗನ್ನಾಥ್‌ ಎಸ್‌. ಶೆಟ್ಟಿ ಸೇರಿದಂತೆ ತುಳುಕೂಟ ಐರೋಲಿ, ಹೆಗ್ಗಡೆ ಸೇವಾ ಸಂಘ ಮುಂಬಯಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next