Advertisement

ಶರಾಬು ತರಲು ತಡಮಾಡಿದ ಪತ್ನಿಯನ್ನು ಅಮಾನುಷವಾಗಿ ಹೊಡದು ಕೊಂದ ಪತಿ

09:47 AM Jun 18, 2019 | Sathish malya |

ಥಾಣೆ : ಶರಾಬು ತರಲು ತಡ ಮಾಡಿದ ಪತ್ನಿಯನ್ನು 30ರ ಹರೆಯದ ಪತಿ ಅಮಾನುಷವಾಗಿ ಹೊಡೆದು ಕೊಂದ ಘಟನೆ ಥಾಣೆ ಜಿಲ್ಲೆಯ ಮುಂಬ್ರಾದಲ್ಲಿ ನಡೆದಿದೆ.

Advertisement

ಪ್ರವೀಣ ಪೂರ್ವಿಯಾ ಎಂಬ ವ್ಯಕ್ತಿ ನಿನ್ನೆ ಗುರುವಾರ ಮಧ್ಯಾಹ್ನ ತನ್ನ ಪತ್ನಿ ಸಂತೋಷಿ (25) ಯನ್ನು ‘ಅಂಗಡಿಗೆ ಹೋಗಿ ಶರಾಬು ತಾ’ ಎಂದು ಹೇಳಿ ಕಳುಹಿಸಿದ್ದ.

ಆಕೆ ಬರುವುದು ಸ್ವಲ್ಪ ತಡವಾದಾಗ ಸಿಟ್ಟಿಗೆದ್ದ ಆತ ಪತ್ನಿಯನ್ನು ಮರದ ತುಂಡಿನಿಂದ ಅಮಾನುಷವಾಗಿ ಹೊಡೆದ. ಆತನ ಹೊಡೆತ ತಾಳಲಾರದೆ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಳು.

ಇಂದು ಶುಕ್ರವಾರ ಬೆಳಗ್ಗೆ ಪೊಲೀಸರು ಪತ್ನಿಯ ಕೊಂದ ಪೂರ್ವಿಯಾ ನನ್ನು ಬಂಧಿಸಿ ಐಪಿಸಿ ಸೆ.302 (ಕೊಲೆ) ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next