Advertisement

ಗೋವಾ ಬೀಚ್‌ನಲ್ಲಿ ಐರಿಷ್‌ ಮಹಿಳೆಯ ಶವಪತ್ತೆ: ರೌಡಿ ಶೀಟರ್‌ ಸೆರೆ

03:58 PM Mar 15, 2017 | Team Udayavani |

ಪಣಜಿ : ದಕ್ಷಿಣ ಗೋವೆಯ ಬೀಚ್‌ನಲ್ಲಿ ನಿನ್ನೆ ಮಂಗಳವಾರ  25ರ ಹರೆಯದ ಐರಿಷ್‌ ಮಹಿಳೆಯ ಶವ ಪತ್ತೆಯಾದ ಘಟನೆಗೆ ಸಂಬಂಧಪಟ್ಟು ಪೊಲೀಸರು ಇಂದು ರೌಡಿ ಶೀಟರ್‌ ಓರ್ವನನ್ನು ಬಂಧಿಸಿದ್ದಾರೆ.

Advertisement

ಇಲ್ಲಿಂದ 80 ಕಿ.ಇಮà. ದೂರದ ದಕ್ಷಿಣ ಗೋವೆಯ ದೇವಬಾಗ್‌ ಬೀಚ್‌ನಲ್ಲಿ ನಗ್ನ ಸ್ಥಿತಿಯಲ್ಲಿ  ಐರಿಷ್‌ ಮಹಿಳೆಯ ಶವ ಪತ್ತೆಯಾಗಿತ್ತು. ಆಕೆ ಕೊನೇ ಬಾರಿಗೆ ಕಂಡುಬಂದದ್ದು  ಸ್ಥಳೀಯರೊಂದಿಗೆ ಹೋಳಿ ಓಕುಳಿಯಾಟವನ್ನು ಆಡುತ್ತಿದ್ದಾಗ ಎಂದು ಕಾಣಕೋಣ ಡಿವೈಎಸ್ಪಿ ಸ್ಯಾಮಿ ಟ್ಯಾವರಿಸ್‌ ತಿಳಿಸಿದ್ದಾರೆ. 

ಐರಿಷ್‌ ಮಹಿಳೆಯ ಶಂಕಾಸ್ಪದ ಸಾವಿನ ಕುರಿತಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಇಂದು ದೇವಬಾಗ್‌ ಸಮೀಪದ ಕಾಣಕೋಣ ಗ್ರಾಮದಲ್ಲಿ ಹಿಸ್ಟರಿ ಶೀಟರ್‌ ಆಗಿರುವ ವಿಕಾಸ್‌ ಭಗತ್‌ ಎಂಬಾತನನ್ನು ವಶಕ್ಕೆ ತೆಗೆದುಕೊಂಡರು. 

ಐರಿಷ್‌ ಮಹಿಳೆಯ ಸಾವನ್ನು ಕೊಲೆಯ ದೃಷ್ಟಿಕೋನದಿಂದ ತನಿಖೆ ಮಾಡಲಾಗುತ್ತಿದ್ದು ಆಕೆಯನ್ನು ಕೊಲೆ ಮಾಡುವ ಮುನ್ನ ರೇಪ್‌ ಮಾಡಲಾಗಿತ್ತೇ ಎಂಬುದನ್ನು ಕೂಡ ತಿಳಿಯಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next