Advertisement

ಇರ್ಫಾನ್‌ ಪಠಾಣ್‌ ಪತ್ನಿಯ ಫೋಟೋ ;ಸಂಪ್ರದಾಯವಾದಿಗಳ ವ್ಯಾಪಕ ಟೀಕೆ !

04:00 PM Jul 18, 2017 | Team Udayavani |

ಅಹಮದಾಬಾದ್‌ : ಭಾರತದ ಎಡಗೈ ವೇಗಿ ಇರ್ಫಾನ್‌ ಪಠಾಣ್‌ ಅವರು ಪತ್ನಿಯೊಂದಿಗೆ ತೆಗೆಸಿಕೊಂಡ ಸೆಲ್ಫಿಯೊಂದು ವ್ಯಾಪಕವಾಗಿ ಇಸ್ಲಾಂ ಸಂಪ್ರದಾಯವಾದಿಗಳ ಟೀಕೆಗೆ ಗುರಿಯಾಗಿ ದೊಡ್ಡ ಸುದ್ದಿ ಮಾಡಿದೆ.

Advertisement

ಫೇಸ್‌ಬುಕ್‌ನಲ್ಲಿ ಪತ್ನಿ ಸಫಾ ಬೇಗ್‌ ತನ್ನ ಕೈಗಳಿಂದ ಮುಖ ಮುಚ್ಚಿಕೊಂಡಿದ್ದ ಫೋಟೋವನ್ನು ಅಪ್‌ಲೋಡ್‌ ಮಾಡಿ ಈ ಹುಡುಗಿಯಿಂದ ತೊಂದರೆ? ಪ್ರೀತಿ ,ವೈಫಿ ಎಂದು ಅಡಿಬರಹ ನೀಡಿದ್ದರು.

ಫೋಟೋ ನೋಡಿದ ಇಸ್ಲಾಂ ಸಂಪ್ರದಾಯವಾದಿ ಟೀಕಾಕಾರು ಈ ರೀತಿ ಪೋಸ್‌ ನೀಡುವುದು ಇಸ್ಲಾಂನಲ್ಲಿ ನಿಷಿದ್ಧ ಎಂದು ಬರೆದಿದ್ದಾರೆ. ಕೈ ಉಗುರುಗಳಿಗೆ ನೇಲ್‌ ಪಾಲಿಷ್‌ ಹಚ್ಚಿಕೊಳ್ಳಬೇಡಿ ಮೆಹಂದಿ ಹಚ್ಚಿಕೊಳ್ಳಿ ಎಂಬ ನೂರಾರು ಟೀಕೆಗಳನ್ನು ಮಾಡಿದ್ದಾರೆ. 

ಜೆಡ್ಡಾದ ಮಾಡೆಲ್‌ ಸಫಾರನ್ನು ವಿವಾಹವಾಗಿದ್ದ ಪಠಾಣ್‌ಗೆ ಒಂದು ಗಂಡು ಮಗುವಿದೆ. 

Advertisement

Udayavani is now on Telegram. Click here to join our channel and stay updated with the latest news.

Next