Advertisement

PAKvsAFG; ಪಾಕ್ ಸೋತ ಸಂತಸದಲ್ಲಿ ರಶೀದ್ ಜತೆ ಡ್ಯಾನ್ಸ್ ಮಾಡಿದ ಇರ್ಫಾನ್ ಪಠಾಣ್ |video

08:58 AM Oct 24, 2023 | Team Udayavani |

ಚೆನ್ನೈ: ಏಕದಿನ ವಿಶ್ವಕಪ್ 2023ರಲ್ಲಿ ಪಾಕಿಸ್ತಾನ ತಂಡವು ಮತ್ತೊಂದು ಹೀನಾಯ ಸೋಲನುಭವಿಸಿದೆ. ಅಫ್ಘಾನಿಸ್ತಾನ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಪಾಕ್ ಗೆ ಎಂಟು ವಿಕೆಟ್ ಗಳ ಸೋಲಾಗಿದೆ. ಈ ವಿಶ್ವಕಪ್ ಕೂಟದಲ್ಲಿ ಎರಡನೇ ಗೆಲುವು ಕಂಡ ಅಫ್ಘಾನಿಸ್ತಾನ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿದೆ.

Advertisement

ಪಂದ್ಯದ ಗೆಲುವಿನ ಬಳಿಕ ಅಫ್ಘಾನಿಸ್ತಾನದ ಆಟಗಾರರು ಚೆನ್ನೈ ಅಂಗಳದಲ್ಲಿ ಕುಣಿದಾಡಿದರು. ಇದೇ ವೇಳೆ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಕೂಡಾ ಇವರ ಜತೆ ಸೇರಿ ಡ್ಯಾನ್ಸ್ ಮಾಡಿ ಗಮನ ಸೆಳೆದರು.

ಅಫ್ಘಾನ್ ಆಲ್ ರೌಂಡರ್ ರಶೀದ್ ಖಾನ್ ಜತೆಗೆ ಇರ್ಫಾನ್ ಪಠಾಣ್ ಕುಣಿದರು. ಬಳಿಕ ಇಬ್ಬರೂ ತಬ್ಬಿಕೊಂಡರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪಠಾಣ್, “ರಶೀದ್ ಖಾನ್ ಅವರು ತಮ್ಮ ಭರವಸೆಯನ್ನು ಪೂರೈಸಿದ್ದಾರೆ ಮತ್ತು ನಾನು ನನ್ನ ಭರವಸೆಯನ್ನು ಪೂರೈಸಿದ್ದೇನೆ. ವೆಲ್ ಡನ್ ಹುಡುಗರೇ” ಎಂದು ಬರೆದುಕೊಂಡಿದ್ದಾರೆ.

ಚೆನ್ನೈನ ಚೆಪಾಕ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಅಫ್ಘಾನಿಸ್ತಾನವು ಕೇವಲ ಎರಡು ವಿಕೆಟ್ ಕಳೆದುಕೊಂಡು ಜಯ ಗಳಿಸಿತು.

Advertisement

ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಅವರು 130 ರನ್‌ಗಳ ಆಕರ್ಷಕ ಜೊತೆಯಾಟವನ್ನು ಕಟ್ಟಿದರು. ಗುರ್ಬಾಜ್ ಕೇವಲ 53 ಎಸೆತಗಳಲ್ಲಿ 65 ರನ್ ಗಳಿಸಿದರು, ಆದರೆ ಝದ್ರಾನ್ 113 ಎಸೆತಗಳಲ್ಲಿ 87 ರನ್ ಗಳಿಸಿದರು. ಬಳಿಕ ರೆಹಮತ್ ಶಾ ಅಜೇಯ 77 ರನ್ ಮತ್ತು ನಾಯಕ ಹಷ್ಮತುಲ್ಲಾ ಶಹಿದಿ ಅಜೇಯ 48 ರನ್ ಗಳಿಸಿದರು.

ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ. ಪಾಕಿಸ್ತಾನ ಐದನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಆಡಿದ ಐದು ಪಂದ್ಯಗಳಲ್ಲಿ ಗೆದ್ದ ಭಾರತ ಮೊದಲ ಸ್ಥಾನದಲ್ಲಿದ್ದರೆ ಕೇವಲ ಒಂದು ಪಂದ್ಯ ಗೆದ್ದ ಇಂಗ್ಲೆಂಡ್ ಕೊನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next