ಚೆಮ್ಸ್‌ಫೋರ್ಡ್: ಐರ್ಲೆಂಡ್- ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪ್ರವಾಸಿ ಬಾಂಗ್ಲಾದೇಶ 9 ವಿಕೆಟಿಗೆ 246 ರನ್ ಗಳಿಸಿತು. ಐರ್ಲೆಂಡ್ 16.3 ಓವರ್‌ಗಳಲ್ಲಿ 3 ವಿಕೆಟಿಗೆ 65 ರನ್ ಮಾಡಿದ ವೇಳೆ ಮಳೆ ಸುರಿಯತೊಡಗಿತು. ಪಂದ್ಯ ಈ ಹಂತದಲ್ಲಿ ಸ್ಥಗಿತಗೊಂಡಿದೆ.
ಬಾಂಗ್ಲಾದೇಶ ಪರ ಮುಶ್ಫಿಕರ್ ರಹೀಂ ಸರ್ವಾಧಿಕ 61 ರನ್ ಹೊಡೆದರು (70 ಎಸೆತ, 6 ಬೌಂಡರಿ). ನಜ್ಮುಲ್ ಹೊಸೇನ್ 44 ರನ್ ಮಾಡಿದರು.
ಐರ್ಲೆಂಡ್ ಬೌಲಿಂಗ್ ಸರದಿಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದವರೆಂದರೆ ಜೋಶುವ ಲಿಟ್ಲ. ಅವರು 61 ರನ್ನಿತ್ತು 3 ವಿಕೆಟ್ ಕೆಡವಿದರು. ಮಾರ್ಕ್ ಅಡೈರ್ ಮತ್ತು ಗ್ರಹಾಂ ಹ್ಯೂಮ್ ತಲಾ 2 ವಿಕೆಟ್ ಉರುಳಿಸಿದರು.
ಚೇಸಿಂಗ್ ವೇಳೆ ಐರ್ಲೆಂಡ್ ಕುಸಿತ ಅನುಭವಿಸಿದ್ದು, ಆರಂಭಿಕರಾದ ಪಾಲ್ ಸ್ಟರ್ಲಿಂಗ್ (15), ಸ್ಟೀಫನ್ ಡೊಹೆನಿ (17) ಮತ್ತು ನಾಯಕ ಆ್ಯಂಡ್ರೂ ಬಾಲ್‌ಬಿರ್ನಿ (5) ಈಗಾಗಲೇ ಪೆವಿಲಿಯನ್ ಸೇರಿದ್ದಾರೆ. ಹಸನ್ ಮಹ್ಮದ್, ಶೊರಿಫುಲ್ ಇಸ್ಲಾಮ್ ಮತ್ತು ತೈಜುಲ್ ಇಸ್ಲಾಮ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.