Advertisement

 ಐರ್ಲೆಂಡ್‌ ಪ್ರವಾಸ : ನಾಯಕನಾಗಿ ಮರಳಿದ ಬುಮ್ರಾ;  ಪ್ರಸಿದ್ಧ್ ಪುನರಾಗಮನ

11:45 PM Jul 31, 2023 | Team Udayavani |

ಹೊಸದಿಲ್ಲಿ: ಕಳೆದ 11 ತಿಂಗಳಿಂದ ಗಾಯಾಳಾಗಿ ಟೀಮ್‌ ಇಂಡಿ ಯಾದಿಂದ ಬೇರ್ಪಟ್ಟಿದ್ದ ಜಸ್‌ಪ್ರೀತ್‌ ಬುಮ್ರಾ ಸೋಮವಾರ ನಾಯಕನಾಗಿ ಪುನರಾಗಮನ ಸಾರಿದ್ದಾರೆ. ಮುಂಬರುವ ಐರ್ಲೆಂಡ್‌ ಪ್ರವಾಸದ ಟಿ20 ಸರಣಿಗಾಗಿ ಆರಿಸಲಾದ ಯುವ ಪಡೆಯನ್ನು ಬುಮ್ರಾ ಮುನ್ನಡೆಸಲಿದ್ದಾರೆ.

Advertisement

ಇವರೊಂದಿಗೆ ಕರ್ನಾಟಕದ ಸೀಮ್‌ ಬೌಲರ್‌ ಪ್ರಸಿದ್ಧ್ ಕೃಷ್ಣ ಕೂಡ ಭಾರತ ತಂಡಕ್ಕೆ ವಾಪಸಾಗಿದ್ದಾರೆ. ಐಪಿಎಲ್‌ ಹೀರೋಗಳಾದ ರಿಂಕು ಸಿಂಗ್‌, ಜಿತೇಶ್‌ ಶರ್ಮ ಮೊದಲಾದವರು ಈ ತಂಡ ದಲ್ಲಿದ್ದಾರೆ. ಆ. 18-23ರ ಅವಧಿಯಲ್ಲಿ ಟಿ20 ಸರಣಿ ಏರ್ಪಡಲಿದೆ.

ನ್ಯೂಜಿಲ್ಯಾಂಡ್‌ನ‌ಲ್ಲಿ ಬೆನ್ನುನೋವಿ ಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಬುಮ್ರಾ, ಅನಂತರ ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಇತ್ತೀಷೆಗಷ್ಟೇ ಆಲೂರು ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ 10 ಓವರ್‌ಗಳ ಬೌಲಿಂಗ್‌ ಕೂಡ ನಡೆಸಿದ್ದರು. ಐರ್ಲೆಂಡ್‌ ಸರಣಿಗೆ ಬುಮ್ರಾ ಮರಳುವುದು ಕಳೆದ ಕೆಲವು ದಿನಗಳಿಂದ ಸುದ್ದಿಯಾಗಿತ್ತು. ಆದರೆ ಅವರು ನಾಯಕರಾಗಿ ಪುನರಾಗಮನ ಸಾರಲಿದ್ದಾರೆಂಬ ನಿರೀಕ್ಷೆ ಇರಲಿಲ್ಲ.

ಇಂದಷ್ಟೇ ಆಡಲಿಳಿದ ಪ್ರಸಿದ್ಧ್ ಕೃಷ್ಣ
ಪ್ರಸಿದ್ಧ್ ಕೃಷ್ಣ ಸೋಮವಾರವಷ್ಟೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಬೆಂಗಳೂರಿನಲ್ಲಿ ನಡೆದ ಕೆಎಸ್‌ಸಿಎ ಟಿ20 ಸೂಪರ್‌ ಲೀಗ್‌ “ಜಿ. ಕಸ್ತೂರಿರಂಗನ್‌ ಮೆಮೋರಿಯಲ್‌ ಟ್ರೋಫಿ’ ಪಂದ್ಯದಲ್ಲಿ ಆಡಲಿಳಿದ ಅವರು 36 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕೆಡವಿದರು.

ಮೌಂಟ್‌ ಜಾಯ್‌ ಕ್ರಿಕೆಟ್‌ ಕ್ಲಬ್‌ ತಂಡವನ್ನು ಪ್ರತಿನಿಧಿಸಿದ ಪ್ರಸಿದ್ಧ್ ಕೃಷ್ಣ, ಸರ್‌ ಸಯ್ಯದ್‌ ಕ್ರಿಕೆಟರ್ ವಿರುದ್ಧ ಈ ಸಾಧನೆಗೈದರು. ಗಾಯಾಳಾಗಿದ್ದ ಅವರು ಕಳೆದ 6 ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದರು.

Advertisement

ಭಾರತ ತಂಡ
ಜಸ್‌ಪ್ರೀತ್‌ ಬುಮ್ರಾ (ನಾಯಕ), ರುತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌, ಜಿತೇಶ್‌ ಶರ್ಮ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಶಾಬಾಜ್‌ ಅಹ್ಮದ್‌, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶದೀಪ್‌ ಸಿಂಗ್‌, ಮುಕೇಶ್‌ ಕುಮಾರ್‌, ಆವೇಶ್‌ ಖಾನ್‌.

Advertisement

Udayavani is now on Telegram. Click here to join our channel and stay updated with the latest news.

Next