Advertisement

ತಹಶೀಲ್ದಾರ್‌ಗೂ ಕ್ಯಾರೇ ಎನ್ನದ ಐಆರ್‌ಬಿ ಅಧಿಕಾರಿಗಳು

06:08 PM Feb 27, 2021 | Team Udayavani |

ಅಂಕೋಲಾ: ರಾಷ್ಟೀಯ ಹೆದ್ದಾರಿ 66ರ ಬಳಲೆ ಮಾದನಗೇರಿಯಲ್ಲಿ ಬಹುಜನರ ಬೇಡಿಕೆಯಾದಮೇಲ್ಸೇತುವೆ ಮಂಜೂರಿ ಇತ್ಯರ್ಥವಾಗುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ತಹಶೀಲ್ದಾರ್‌ ಉದಯ ಕುಂಬಾರ ಸೂಚನೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ರಸ್ತೆ ಕಾಮಗಾರಿಮುಂದುವರೆಸಿದ ಐಆರ್‌ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅಸಡ್ಡೆತನದಧೋರಣೆ ವಿರುದ್ಧ ಸ್ಥಳೀಯ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

Advertisement

ತಹಶೀಲ್ದಾರ್‌ ಉದಯ ಕುಂಬಾರ ಐಆರ್‌ಬಿ ಅಧಿಕಾರಿಗಳ ಮತ್ತು ಹೋರಾಟಗಾರರನ್ನು ಕರೆಸಿ ಸಮಾಲೋಚನೆ ನಡೆಸಿದರು. ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ 66ರ ಮಾದನಗೇರಿ ಬಳಲೆಯಲ್ಲಿ ಮೇಲ್ಸೇತುವೆಗಾಗಿ ಸ್ಥಳೀಯರುಕಳೆದೆರಡು ವರ್ಷಗಳಿಂದ ಬೇಡಿಕೆಯಿಡುತ್ತಲೇ ಇದ್ದಾರೆ. ಇತ್ತೀಚೆಗೆ ಜಿಲ್ಲಾ ಗ್ರಾಮೀಣ ಹೋರಾಟಸಮಿತಿ ಸಗಡಗೇರಿ ಇದರ ಮುಂದಾಳತ್ವದಲ್ಲಿಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿಘೋಷಿಸಲಾಗಿತ್ತು. ಆದರೆ ತಹಶೀಲ್ದಾರ್‌ಉದಯ ಕುಂಬಾರ ಮಧ್ಯಸ್ಥಿಕೆ ವಹಿಸಿಜನಪ್ರತಿನಿಧಿಗಳ ಮತ್ತು ಐಆರ್‌ಬಿ ಅಧಿಕಾರಿಗಳಸಭೆ ಕರೆದು ಸುದೀರ್ಘ‌ ಚರ್ಚೆ ನಡೆಸಿ ಮೇಲ್ಸೇತುವೆಮಂಜೂರಾಗುವವರೆಗೆ ಯಾವುದೇ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಐಆರ್‌ಬಿ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದರು.

ಇದರನ್ವಯ ರಸ್ತೆತಡೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಆದರೆಇದಕ್ಕೆ ಕ್ಯಾರೇ ಅನ್ನದ ಐಆರ್‌ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮೇಲ್ಸೇತುವೆಯ ಭರವಸೆ ನೀಡದೆ ರಸ್ತೆ ಕಾಮಗಾರಿ ಮುಂದುವರೆಸಿದ್ದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು. ಬಳಲೆ ಮಾದನಗೇರಿ ಜಂಕ್ಷನ್‌ ಅಪಾಯಕಾರಿಯಾಗಿದ್ದು ಗೋಕರ್ಣ, ಯಾಣ,ಹುಬ್ಬಳ್ಳಿ ಅಂಕೋಲಾ ಕೂಡುರಸ್ತೆಯಾಗಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿ ರಸ್ತೆಯನ್ನು ಐದಾರು ಅಡಿ ಎತ್ತರಿಸಲಾಗಿದೆ. ಸರ್ವಿಸ್‌ ರೋಡನ್ನೂ ನಿರ್ಮಿಸಿಲ್ಲ. ಇದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಎರಡೆರಡು ರಸ್ತೆಯನ್ನು ಕ್ರಾಸ್‌ ಮಾಡಬೇಕಾಗುತ್ತದೆ. ಅದೂ ಐದಾರಡಿ ಎತ್ತರದಲ್ಲಿ. ಸುತ್ತಮುತ್ತಲಿನ ದೇವಸ್ಥಾನಗಳ ಜಾತ್ರೆ, ಬಂಡೀ ಉತ್ಸವ ಮುಂತಾದ ಧಾರ್ಮಿಕ ಆಚರಣೆಗಳಿಗೂ ಅವಕಾಶವಿಲ್ಲದಂತಾಗುತ್ತದೆ. ಈ ಜಂಕ್ಷನನಲ್ಲಿ ಮೇಲ್ಸೇತುವೆ ಅತೀ ಅವಶ್ಯವಾಗಿದೆ. ಆದರೆ ಐಆರ್‌ಬಿ ಅಧಿಕಾರಿಗಳು ಇಲ್ಲದ ಸಬೂಬು ಹೇಳಿ ತರಾತುರಿಯಲ್ಲಿ ರಸ್ತೆ ನಿರ್ಮಿಸುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ತಹಶೀಲ್ದಾರ್‌ ಉದಯ ಕುಂಬಾರ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಹೋರಾಟಗಾರರ ಸಮಿತಿ ಹಾಗೂ ಸ್ಥಳೀಯ ನಿವಾಸಿಗಳು ಐಆರ್‌ಬಿ ಅಧಿ ಕಾರಿಗಳ ಅಸಡ್ಡೆತನದ ಧೋರಣೆ ವಿರುದ್ಧ ಕ್ರಮ ಕೈಗೊಳ್ಳುವಂತೆಸ್ಥಳದಲ್ಲಿಯೇ ಮನವಿ ಸಲ್ಲಿಸಿ ಐಆರ್‌ಬಿ ಅಧಿಕಾರಿಗಳಿಗೆ ತಮ್ಮ ತಾಳ್ಮೆ ಪರೀಕ್ಷೆ ಮಾಡದೆ ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು.

ಹೀಗಾಗಿ ತಹಶೀಲ್ದಾರರು ಶುಕ್ರವಾರ ಮತ್ತೂಂದು ಸುತ್ತಿನ ಸಮಾಲೋಚನಾ ಸಭೆ ಕರೆದಿದ್ದರು. ಐಆರ್‌ಬಿ ಕಡೆಯಿಂದ ಸಮರ್ಪಕ ಉತ್ತರ ದೊರೆಯದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನೇ ಸ್ಥಳದಲ್ಲಿ ಕರೆಸಿ ವಸ್ತುಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲು ಐಆರ್‌ಬಿ ಅಧಿಕಾರಿಗಳಿಗೆ ಬುಧವಾರದವರೆಗೆ ಗಡುವು ನೀಡಲಾಗಿದೆ. ಇಲ್ಲದಿದ್ದಲ್ಲಿ ತಾಲೂಕಿನಾದ್ಯಂತ ಹೆದ್ದಾರಿ ಕಾಮಗಾರಿ ನಿಲ್ಲಿಸಿ ಪ್ರತಿಭಟಿಸಲಾಗುವದೆಂದು ಹೋರಾಟಗಾರರು ತಿಳಿಸಿದರು.

Advertisement

ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ ಈ ಸ್ಥಳದಲ್ಲಿ ಮೇಲ್ಸೇತುವೆ ಅನಿವಾರ್ಯವಾಗಿದೆ. ಐಆರ್‌ಬಿ ಕಂಪನಿ ಹಠಮಾರಿ ಧೋರಣೆಯಿಂದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇಲ್ಲಿ ಈಗಾಗಲೇ ಅಪಘಾತಗಳು ಹೆಚ್ಚಾಗುತ್ತಿವೆ. ಮುಂದಾಗುವ ಅನಾಹುತಗಳಿಗೆ ಕಂಪನಿಯೇ ನೇರ ಕಾರಣವಾಗುತ್ತದೆ ಎಂದರು.

ಐಆರಬಿ ಕಂಪನಿಯ ಪರ ವಿ.ಎಂ. ನಾಯಕ ಮತ್ತು ಸಚಿನ್‌ ಹಾಜರಿದ್ದರು ಹಾಗೂ ಸಗಡಗೇರಿ ಗ್ರಾಪಂ ಅಧ್ಯಕ್ಷೆ ಸೀತಾ ಗೌಡ, ಉಪಾಧ್ಯಕ್ಷ ಶ್ರವಣ ನಾಯ್ಕ, ಜಿಲ್ಲಾ ಗ್ರಾಮೀಣ ಹೋರಾಟಗಾರ ಸಂಘದ ಅಧ್ಯಕ್ಷ ದೇವರಾಯ ನಾಯಕ, ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ, ಜೆಡಿಎಸ್‌ ತಾಲೂಕಾಧ್ಯಕ್ಷ ಸಂದೀಪ ಬಂಟ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next