ನವದೆಹಲಿ : ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳು, ಪ್ರಕೃತಿ ಬದಲಾವಣೆಗಳು, ಹಲವು ವಿಚಿತ್ರಗಳೂ ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇರಾಕ್ ದೇಶದ ಗಂಡು ಮಗುವಿನಲ್ಲಿ ಮೂರು ಜನನಾಂಗಗಳು ಇರುವುದು ವರದಿಯಾಗಿದೆ.
ಇರಾಕ್ ದೇಶ ದುಹಾಕ್ ಪ್ರದೇಶದ ಮೂರು ತಿಂಗಳ ಮಗುವಿನಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಮೂರು ಜನನಾಂಗ ಇರುವ ಮಗು ವೈದ್ಯಕೀಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದೆ. ಈ ಹಿಂದೆ ಎರಡು ಜನನಾಂಗ ಇರುವ ಬಗ್ಗೆ ಸುದ್ದಿಯಾಗಿತ್ತು.
ಮಗುವಿನ ವೃಷಣ ಕೋಶವು ಊತದ ರೀತಿ ಕಾಣುಸಿಕೊಂಡ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷೆ ಮಾಡಿದ ನಂತರ ಮಗುವಿನ ವೃಷಣ ಕೋಶದಲ್ಲಿ ಮತ್ತೆ ಎರಡು ಜನನಾಂಗಗಳು ಬೆಳೆಯುತ್ತಿರುವುದನ್ನು ತಿಳಿಸಿದ್ದಾರೆ.
ಈ ರೀತಿಯ ಸಮಸ್ಯೆಯನ್ನು ‘ಟ್ರಿಫಾಲಿಯಾ’ ಎಂದು ಕರೆಯಲಾಗುತ್ತದೆ. ಮುಂದೆ ಇದರಿಂದ ಮೂತ್ರನಾಳಗಳಿಗೆ ಸಮಸ್ಯೆಯಾಗುವ ಕಾರಣ ವೃಷಣ ಕೋಶದಲ್ಲಿ ಬೆಳೆಯುತ್ತಿದ್ದ ಎರಡು ಜನನಾಂಗಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿದೆಯಂತೆ.
ಟ್ರಿಫಾಲಿಯಾ ಬಗ್ಗೆ ವರದಿ ಮಾಡಿರುವ ವೈದ್ಯರು, ಈ ಸಮಸ್ಯೆ 5-6 ಮಿಲಿಯನ್ ಮನುಷ್ಯರಲ್ಲಿ ಒಬ್ಬರಿಗೆ ಬರುತ್ತದೆ. ನಮಗೆ ತಿಳಿದಿರುವ ಪ್ರಕಾರ ಜಗತ್ತಿನಲ್ಲಿಯೇ ಇದೇ ಮೊದಲ ಪ್ರಕರಣ ಎಂದಿದ್ದಾರೆ.