Advertisement

ಇರಾನಿ ಟ್ರೋಫಿ ಕ್ರಿಕೆಟ್‌: ಮಾಯಾಂಕ್‌ ಅಗರ್ವಾಲ್‌ಗೆ ಅಗ್ನಿಪರೀಕ್ಷೆ

11:31 PM Feb 28, 2023 | Team Udayavani |

ಗ್ವಾಲಿಯರ್‌: ರಣಜಿ ಚಾಂಪಿಯನ್‌ ಮತ್ತು ಶೇಷ ಭಾರತ ತಂಡಗಳ ನಡುವಿನ 2021-22ನೇ ಸಾಲಿನ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯ ಬುಧವಾರ ಗ್ವಾಲಿಯರ್‌ನಲ್ಲಿ ಆರಂಭವಾಗಲಿದೆ. ಇದು ಕಳೆದ ಸಲದ ರಣಜಿ ಚಾಂಪಿಯನ್‌ ಮಧ್ಯಪ್ರದೇಶ ವಿರುದ್ಧ ನಡೆಯುವ ಪಂದ್ಯ.

Advertisement

ಶೇಷ ಭಾರತ ತಂಡವನ್ನು ಕರ್ನಾಟಕದ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಮುನ್ನಡೆಸಲಿದ್ದಾರೆ.

ಟೀಮ್‌ ಇಂಡಿಯಾಕ್ಕೆ ಮರಳಲು ಅವರಿಗೆ ಇದೊಂದು ಮೆಟ್ಟಿಲಾ ದೀತೇ ಎಂಬುದೊಂದು ನಿರೀಕ್ಷೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅನುಭವಿಸಿದ ವೈಫ‌ಲ್ಯದ ಬಳಿಕ ಅಗರ್ವಾಲ್‌ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು.

ಕರ್ನಾಟಕದವರೇ ಆದ ಕೆ.ಎಲ್‌. ರಾಹುಲ್‌ ತೀವ್ರ ರನ್‌ ಬರಗಾಲದಲ್ಲಿರುವಾಗ ಇತ್ತ ಮಾಯಾಂಕ್‌ ಅಗರ್ವಾಲ್‌ ಪ್ರಸಕ್ತ ರಣಜಿ ಋತುವಿನಲ್ಲಿ 990 ರನ್‌ ಪೇರಿಸುವ ಮೂಲಕ ಗಮನ ಸೆಳೆದಿದ್ದರು. ಆದರೆ ಈಗಾಗಲೇ ಆಸ್ಟ್ರೇಲಿಯ ವಿರುದ್ಧದ ಉಳಿದೆರಡು ಟೆಸ್ಟ್‌ ಪಂದ್ಯಗಳಿಗಾಗಿ ತಂಡ ಅಂತಿಮಗೊಂಡಿದೆ. ಇದರಲ್ಲಿ ಅಗರ್ವಾಲ್‌ ಸ್ಥಾನ ಪಡೆದಿಲ್ಲ. ಇರಾನಿ ಕಪ್‌ನಲ್ಲಿ ಕ್ಲಿಕ್‌ ಆದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಅವಕಾಶ ಲಭಿಸಲೂಬಹುದು.
ಮಧ್ಯಪ್ರದೇಶವನ್ನು ಹಿಮಾಂಶು ಮಂತ್ರಿ ಮುನ್ನಡೆ ಸಲಿದ್ದಾರೆ. ಬಲಾಬಲದ ಲೆಕ್ಕಾಚಾರದಲ್ಲಿ ಶೇಷ ಭಾರತವೇ ಮೇಲುಗೈ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next