Advertisement
ನಾಗ್ಪುರದಲ್ಲೇ ನಡೆದ ರಣಜಿ ಫೈನಲ್‌ನಲ್ಲಿ ಫೈಜ್ ಫಜಲ್ ನೇತೃತ್ವದ ವಿದರ್ಭ ತಂಡ ಸೌರಾಷ್ಟ್ರವನ್ನು ಮಣಿಸಿ ಕಿರೀಟ ಉಳಿಸಿಕೊಂಡಿತ್ತು. ಇರಾನಿ ಕಪ್ ಪಂದ್ಯ ಕೂಡ ತವರಿನಂಗಳದಲ್ಲೇ ನಡೆಯುತ್ತಿದ್ದು, ವಿದರ್ಭ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇರಾನಿ ಕಪ್ ಗೆದ್ದರೆ ಕರ್ನಾಟಕದ ಬಳಿಕ ಈ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡವಾಗಿ ವಿದರ್ಭ ಗುರುತಿಸಲ್ಪಡಲಿದೆ. ಕರ್ನಾಟಕ 2013-14 ಮತ್ತು 2014-15ರಲ್ಲಿ ರಣಜಿ ಪ್ರಶಸ್ತಿ ಜತೆಗೆ ಇರಾನಿ ಕಪ್ ಮೇಲೂ ಹಕ್ಕು ಚಲಾಯಿಸಿತ್ತು.
ಕಳೆದ ವರ್ಷ ತಾನು ರಣಜಿ ಟ್ರೋಫಿ ಗೆದ್ದದ್ದು ಆಕಸ್ಮಿಕವಲ್ಲ ಎಂದು ವಿದರ್ಭ “ಇರಾನಿ ಕಪ್’ ಪಂದ್ಯಲ್ಲೇ ಸಾಬೀತುಪಡಿಸಿತ್ತು. ಶೇಷ ಭಾರತ ವಿರುದ್ಧ 7 ವಿಕೆಟಿಗೆ 800 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದೇ ಇದಕ್ಕೆ ಸಾಕ್ಷಿ. ಇದರಲ್ಲಿ ವಾಸಿಮ್ ಜಾಫರ್ ಅವರೊಬ್ಬರ ಪಾಲೇ 286 ರನ್ ಆಗಿತ್ತು. ಇನ್ನು 4 ದಿನಗಳಲ್ಲಿ 41ನೇ ವರ್ಷಕ್ಕೆ ಕಾಲಿಡಲಿರುವ ಜಾಫರ್ ಇದೇ ಸಾಧನೆಯನ್ನು ಪುನರಾವರ್ತಿಸುವ ಸೂಚನೆಯೊಂದನ್ನು ನೀಡಿದ್ದಾರೆ. ಪ್ರಸಕ್ತ ರಣಜಿಯಲ್ಲಿ ಸಾವಿರ ಪ್ಲಸ್ ರನ್ ಬಾರಿಸಿರುವ ಜಾಫರ್ ಉತ್ತಮ ಲಯದಲ್ಲಿದ್ದಾರೆ.ಫೈಜ್ ಫಜಲ್, ಆದಿತ್ಯ ಸರ್ವಟೆ, ಉಮೇಶ್ ಯಾದವ್, ರಜನೀಶ್ ಗುರ್ಬಾನಿ, ತ್ರಿವಳಿ ಅಕ್ಷಯರೆಲ್ಲ ವಿದರ್ಭದ ಶಕ್ತಿ ಆಗಿದ್ದಾರೆ. ಶೇಷ ಭಾರತ ಈ ಬಾರಿ ಬಲಿಷ್ಠ
ಈ ಬಾರಿ ಶೇಷ ಭಾರತ ತಂಡ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ರಹಾನೆ, ಅಗರ್ವಾಲ್, ಅಯ್ಯರ್, ವಿಹಾರಿ, ಸ್ನೆಲ್ ಪಟೇಲ್, ಕೆ. ಗೌತಮ್, ಜಡೇಜ, ವಾರಿಯರ್, ಮೋರೆ, ಇಶಾನ್ ಕಿಶನ್ ಅವರನ್ನೊಳಗೊಂಡ ತಂಡ ಮೇಲ್ನೋಟಕ್ಕೆ ವಿದರ್ಭವನ್ನು ಉರುಳಿಸುವಷ್ಟು ಸಾಮರ್ಥ್ಯ ಹೊಂದಿರುವುದು ಸುಳ್ಳಲ್ಲ.
Related Articles
ವಿದರ್ಭ: ಫೈಜ್ ಫಜಲ್ (ನಾಯಕ), ಸಂಜಯ್ ರಾಮಸ್ವಾಮಿ, ವಾಸಿಮ್ ಜಾಫರ್, ಗಣೇಶ್ ಸತೀಶ್, ಆದಿತ್ಯ ಸರ್ವಟೆ, ಅಕ್ಷಯ್ ವಾಡ್ಕರ್, ಮೋಹಿತ್ ಕಾಳೆ, ಉಮೇಶ್ ಯಾದವ್, ರಜನೀಶ್ ಗುರ್ಬಾನಿ, ಅಕ್ಷಯ್ ವಖಾರೆ, ಅಕ್ಷಯ್ ಕರ್ಣೆವಾರ್, ಅಥರ್ವ ತಾಯೆx, ಶ್ರೀಕಾಂತ್ ವಾಘ…, ಆದಿತ್ಯ ಠಾಕ್ರೆ, ಲಲಿತ್ ಯಾದವ್, ಯಶ್ ಠಾಕೂರ್.
ಶೇಷ ಭಾರತ: ಅಜಿಂಕ್ಯ ರಹಾನೆ (ನಾಯಕ), ಮಾಯಾಂಕ್ ಅಗರ್ವಾಲ್, ಅಮ್ಮೊàಲ್‌ಪ್ರೀತ್ ಸಿಂಗ್, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಹನುಮ ವಿಹಾರಿ, ಕೃಷ್ಣಪ್ಪ ಗೌತಮ್, ತಮಿಮ್ ಉಲ್ ಹಕ್, ಇಶಾನ್ ಕಿಶನ್, ಸ್ನೆಲ್ ಪಟೇಲ್, ಧರ್ಮೇಂದ್ರ ಜಡೇಜ, ರಾಹುಲ್ ಚಹರ್, ಅಂಕಿತ್ ರಜಪೂತ್, ರೋನಿತ್ ಮೋರೆ, ಸಂದೀಪ್ ವಾರಿಯರ್.
Advertisement