ಟೆಹ್ರಾನ್: ಹಿಜಾಬ್ ಸರಿಯಾಗಿ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಂಧಿತಳಾಗಿ, ಠಾಣೆಯಲ್ಲೇ ಕೋಮಾಕ್ಕೆ ಜಾರಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಯುವತಿ ಮಹ್ಸಾ ಅಮಿನಿ ಪ್ರಕರಣ ಇರಾನ್ ನಲ್ಲಿ ತೀವ್ರ ಕಿಚ್ಚು ಹೊತ್ತಿಸಿದ್ದು, ಭದ್ರತಾ ಪಡೆಯ ಗುಂಡಿನ ದಾಳಿಗೆ ಐವರು ಪ್ರತಿಭಟನಾಕಾರರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹುಣಸೂರು : ಮನೆಯಿಂದ ಹೊರಹೋದ ವ್ಯಕ್ತಿ ನಾಪತ್ತೆ… ಹುಡುಕಿಕೊಟ್ಟವರಿಗೆ ಬಹುಮಾನ
ಕುರ್ದಿಸ್ತಾನ್ ನಲ್ಲಿ ಸುಮಾರು 500 ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಕಾರುಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಇದಕ್ಕೂ ಮೊದಲು ಕೆಲವು ಮಹಿಳೆಯರು ಕೂದಲು ಕತ್ತರಿಸಿಕೊಂಡು, ಹಿಜಾಬ್ ಗೆ ಬೆಂಕಿ ಹೊತ್ತಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಭಟನಾ ನಿರತ ಮಹಿಳೆಯರ ಮೇಲೆ ಇರಾನ್ ಭದ್ರತಾ ಪಡೆ ಗುಂಡು ಹಾರಿಸಿದ ಪರಿಣಾಮ ಐವರು ಸಾವನ್ನಪ್ಪಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಇರಾನ್ ನಲ್ಲಿ ಮಹಿಳೆಯರು ವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವುದು ಕಾನೂನು ಪ್ರಕಾರ ಅಪರಾಧ ಎಂದು ಟೆಹ್ರಾನ್ ಪೊಲೀಸ್ ವರಿಷ್ಠಾಧಿಕಾರಿ ಹುಸೈನ್ ರಹಿಮಿ ತಿಳಿಸಿದ್ದಾರೆ.
ಮೆಹ್ಸಾ ಘಟನೆಗೆ ಯುರೋಪಿಯನ್ ಒಕ್ಕೂಟ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ತೀವ್ರವಾಗಿ ಖಂಡಿಸಿದ್ದು, ಇರಾನ್ ಅಧಿಕಾರಿಗಳು ದೇಶದ ಪ್ರಜೆಗಳ ಹಕ್ಕುಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿವೆ.