ಇರಾನ್: ಕಳೆದ ವರ್ಷ ಮಹ್ಸಾ ಅಮಿನಿಯ ಸಾವಿನ ಘಟನೆ ನಡೆದ ನಂತರ ಪ್ರತಿಭಟನೆ ಸಂದರ್ಭದಲ್ಲಿ ಭದ್ರತಾ ಪಡೆಯ ಯೋಧರನ್ನು ಕೊಂದ ಆರೋಪದಲ್ಲಿ ಇರಾನ್ ಸರ್ಕಾರ ಮೂವರನ್ನು ನೇಣುಗಂಬಕ್ಕೆ ಏರಿಸಿದ್ದು, ಇದಕ್ಕೆ ಹಲವು ದೇಶಗಳು ತೀವ್ರ ಖಂಡನೆ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Father: 58ನೇ ವಯಸ್ಸಿನಲ್ಲಿ 8ನೇ ಬಾರಿಗೆ ತಂದೆಯಾಗಲಿದ್ದಾರೆ ಬ್ರಿಟಿಷ್ ಮಾಜಿ ಪ್ರಧಾನಿ
2022ರ ನವೆಂಬರ್ 16ರಂದು ಇರಾನ್ ನ ಕೇಂದ್ರ ನಗರವಾದ ಇಸ್ಫಾಹಾನ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಭದ್ರತಾ ಪಡೆಯ ಯೋಧರನ್ನು ಕೊಂದಿದ್ದರು. ಈ ಪ್ರಕರಣದಲ್ಲಿ ಮಜೀದ್ ಕಾಝೇಮಿ, ಸಲೇಹ್ ಮಿರ್ಹಾಶೆಮಿ ಮತ್ತು ಸಯೀದ್ ಯಾಗೌಬಿಯನ್ನು ದೋಷಿ ಎಂದು ಘೋಷಿಸಲಾಗಿತ್ತು ಎಂದು ಮಿಝಾನ್ ಆನ್ ಲೈನ್ ನ್ಯೂಸ್ ವೆಬ್ ಸೈಟ್ ವರದಿ ಮಾಡಿದೆ.
ಪೊಲೀಸರ ವಶದಲ್ಲಿದ್ದ 22 ವರ್ಷದ ಮೆಹ್ಸಾ ಅಮಿನಿ ಸಾವನ್ನಪ್ಪಿದ್ದ ನಂತರ ಇರಾನ್ ನಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಇಸ್ಲಾಮಿಕ್ ರಿಪಬ್ಲಿಕ್ ನ ಕಠಿಣ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಅಮಿನಿಯನ್ನು ಇರಾನ್ ಕುರ್ದ್ ಪೊಲೀಸರು ಬಂಧಿಸಿದ್ದರು.
ಪ್ರಕರಣದಲ್ಲಿ ದೋಷಿಯಾದ ಮೂವರನ್ನು ಇರಾನ್ ಸರ್ಕಾರ ಶುಕ್ರವಾರ ನೇಣುಗಂಬಕ್ಕೆ ಏರಿಸಿದೆ. ಈ ಬಗ್ಗೆ ಯುರೋಪಿಯನ್ ಯೂನಿಯನ್ ತೀವ್ರ ಅಸಮಧಾನ ವ್ಯಕ್ತಪಡಿಸಿವೆ.