Advertisement

ಐಪಿಯು ಸಭೆ: ಓಂ ಬಿರ್ಲಾ ನೇತೃತ್ವದ ಭಾರತೀಯ ನಿಯೋಗ

09:00 PM Mar 09, 2023 | Team Udayavani |

ನವದೆಹಲಿ: ಬೆಹ್ರಾನ್‌ನ ಮನಾಮದಲ್ಲಿ ಮಾ.11ರಿಂದ 15ರವರೆಗೆ ನಡೆಯಲಿರುವ 146ನೇ ಅಂತರ ಸಂಸದೀಯ ಒಕ್ಕೂಟದ (ಐಪಿಯು) ಸಭೆಯಲ್ಲಿ ಭಾಗವಹಿಸುತ್ತಿರುವ ಭಾರತೀಯ ಸಂಸತ್‌ ನಿಯೋಗ (ಐಪಿಡಿ)ದ ನೇತೃತ್ವವನ್ನು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ವಹಿಸಲಿದ್ದಾರೆ.

Advertisement

ಮಾ.10ರಂದು ಬಿರ್ಲಾ ಅವರು ಐಪಿಯು ಅಧ್ಯಕ್ಷ ಡುವಾರ್ಟೆ ಪ್ಯಾಚೆಕೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅದೇ ದಿನ ಸಂಜೆ ಮನಾಮಾದಲ್ಲಿರುವ ಭಾರತೀಯ ಸಮುದಾಯದ ಜತೆ ನಡೆಯುವ ಸಂವಾದದಲ್ಲಿ ಅವರು ಭಾಗವಹಿಸಲಿದ್ದಾರೆ. ಮಾ.12ರಂದು ನಡೆಯುವ ಸಭೆಯಲ್ಲಿ ಓಂ ಬಿರ್ಲಾ ಅವರು ಮಾತನಾಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next