Advertisement
ಮುಖ್ಯವಾಗಿ ರಾತ್ರಿ 8 ಗಂಟೆಗೆ ಆರಂಭವಾಗಲಿರುವ ಪಂದ್ಯಗಳ ಬಗ್ಗೆ ಅನೇಕ ಕಡೆಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಇದು ಮಧ್ಯರಾತ್ರಿ ತನಕ ಮುಂದುವರಿಯುವುದರಿಂದ ವೀಕ್ಷಕರಿಗೆ ಮನೆಗೆ ತೆರಳುವುದು, ಟಿ.ವಿ.ಯಲ್ಲಿ ಇದನ್ನು ವೀಕ್ಷಿಸುವ ಚಿಕ್ಕ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಸಮಸ್ಯೆಯಾಗಿ ಕಾಡುತ್ತಿದೆ ಎಂಬ ದೂರು ಕೇಳಿಬಂದಿದೆ. ಹೀಗಾಗಿ ಇದನ್ನು ರಾತ್ರಿ ಎಂಟರ ಬದಲು 7 ಗಂಟೆಗೆ ಆರಂಭಿಸುವ ಚಿಂತನೆ ಬಿಸಿಸಿಐ ಚಾವಡಿಯಲ್ಲಿ ನಡೆದಿದೆ. ಆಗ ಹಗಲಿನ ಪಂದ್ಯವನ್ನೂ ಒಂದು ಗಂಟೆ ಮುಂಚಿತವಾಗಿ, ಅಂದರೆ ನಾಲ್ಕರ ಬದಲು 3 ಗಂಟೆಗೆ ಪ್ರಾರಂಭಿಸುವುದು ಅನಿವಾರ್ಯವಾಗುತ್ತದೆ. ಸ್ಟಾರ್ ನ್ಪೋರ್ಟ್ಸ್ ಒಪ್ಪಿದರೆ ಬಿಸಿಸಿಐದೇನೂ ಅಭ್ಯಂತರವಿಲ್ಲ ಎಂದು ವರದಿಯಾಗಿದೆ.
ಇದೇ ವೇಳೆ ಐಪಿಎಲ್ ಚಾವಡಿಯಿಂದ ಇನ್ನೊಂದು ಸುದ್ದಿಯೂ ಕೇಳಿಬಂದಿದೆ. ಇದೆಂದರೆ, ಪಂದ್ಯಾವಳಿ ನಡುವೆಯೇ ಆಟಗಾರನೊಬ್ಬ ಮೂಲ ತಂಡ ಬಿಟ್ಟು ಮತ್ತೂಂದು ತಂಡದ ಪರ ಆಡುವುದು. ಇಂಥ ಕ್ರಮ ಯುರೋಪಿಯನ್ ಫುಟ್‌ಬಾಲ್‌ನಲ್ಲಿ ಚಾಲ್ತಿಯಲ್ಲಿದೆ. 7 ಪಂದ್ಯಗಳ ಪೈಕಿ 2 ಪಂದ್ಯಗಳನ್ನಾಡಿದ ಆಟಗಾರನೊಬ್ಬ ಬೇರೆ ಫ್ರಾಂಚೈಸಿ ಪರ ಆಡಲು ಅರ್ಹನಾಗುತ್ತಾನೆ. ಇದಕ್ಕೆ “ಮಿಡ್-ಟೂರ್ನಮೆಂಟ್ ಟ್ರಾನ್ಸ್‌ಫರ್’ ಎನ್ನುತ್ತಾರೆ.
Related Articles
Advertisement