Advertisement

ಮೇಲೇರುವ ತವಕದಲ್ಲಿ ಡೆಲ್ಲಿ ,ಕೆಕೆಆರ್‌; ಅಗ್ರ ಆರರಿಂದ ಹೊರಗುಳಿದಿರುವ ತಂಡಗಳ ಮೇಲಾಟ

11:22 PM Apr 27, 2022 | Team Udayavani |

ಮುಂಬಯಿ: ಟಿ20 ಸ್ಪೆಷಲಿಸ್ಟ್‌ ಆಟಗಾರರನ್ನೇ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಕೋಲ್ಕತಾ ನೈಟ್‌ರೈಡರ್ ಈ ಬಾರಿ ಆರಂಭಿಕ ಅಬ್ಬರದ ಬಳಿಕ ತಣ್ಣಗಾಗಿವೆ. ಎರಡೂ ತಂಡಗಳು ಅಗ್ರ ನಾಲ್ಕರಿಂದಲ್ಲ, ಅಗ್ರ ಆರರಿಂದ ಹೊರಗುಳಿದಿವೆ.

Advertisement

ಎರಡೂ ತಂಡಗಳು 3 ಪಂದ್ಯಗಳನ್ನಷ್ಟೇ ಗೆದ್ದಿವೆ. ಡೆಲ್ಲಿ 7 ಪಂದ್ಯ ಆಡಿದರೆ, ಕೆಕೆಆರ್‌ 8 ಪಂದ್ಯ ಆಡಿ ಮುಗಿಸಿದೆ. ಗುರುವಾರ ಈ ತಂಡಗಳೆರಡು ದ್ವಿತೀಯ ಸುತ್ತಿನ ಕದನಕ್ಕೆ ಇಳಿಯಲಿವೆ.

ಇಲ್ಲಿ ಜಯಿಸಿದ ತಂಡ ನಿಧಾನವಾಗಿ ಟಾಪ್‌-ಫೋರ್‌ನತ್ತ ಸಾಗಲೂಬಹುದು. ಆದರೆ ಸೋತ ತಂಡದ ಮುಂದಿನ ಹಾದಿ ದುರ್ಗಮಗೊಳ್ಳಲಿದೆ.

ಹಿಂದಿನ ಪಂದ್ಯದಲ್ಲಿ ಸೋಲು
ಇತ್ತಂಡಗಳು ಹಿಂದಿನ ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಸಿಲುಕಿವೆ. ಡೆಲ್ಲಿ 15 ರನ್ನುಗಳಿಂದ ರಾಜಸ್ಥಾನ್‌ಗೆ ಶರಣಾಗಿತ್ತು. ಈ ಪಂದ್ಯದ ಹೈ ಫ‌ುಲ್‌ಟಾಸ್‌ ಒಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ತಗಾದೆ ತೆಗೆದ ಡೆಲ್ಲಿಯ ಸಹಾಯಕ ಕೋಚ್‌ ಪ್ರವೀಣ್‌ ಆಮ್ರೆ ಅವರಿಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ.

ಆಗ ರಿಕಿ ಪಾಂಟಿಂಗ್‌ ಕ್ವಾರಂಟೈನ್‌ನಲ್ಲಿದ್ದುದರಿಂದ ಪರಿಸ್ಥಿತಿ ನಿಭಾಯಿಸುವ ಸ್ಥಿತಿಯಲ್ಲಿರಲಿಲ್ಲ. ಆದರೀಗ ಪಾಂಟಿಂಗ್‌ ಕ್ವಾರಂಟೈನ್‌ ಮುಗಿಸಿ ಬಂದಿದ್ದಾರೆ.

Advertisement

ಡೆಲ್ಲಿ ವಾರ್ನರ್‌, ಪೃಥ್ವಿ ಶಾ, ರಿಷಭ್‌ ಪಂತ್‌, ಪೊವೆಲ್‌, ಸಫ‌ರಾಜ್‌ ಅವರಂಥ ಹೊಡಿಬಡಿ ಆಟಗಾರರನ್ನು ಹೊಂದಿದೆ. ಲಲಿತ್‌ ಯಾದವ್‌, ಅಕ್ಷರ್‌ ಪಟೇಲ್‌, ಶಾರ್ದೂಲ್ ಠಾಕೂರ್ ಅವರ ಆಲ್‌ರೌಂಡ್‌ ಬಲವನ್ನೂ ಪಡೆದಿದೆ. ಕುಲದೀಪ್‌ ಯಾದವ್‌, ಲುಂಗಿ ಎನ್‌ಗಿಡಿ, ಖಲೀಲ್‌ ಅಹ್ಮದ್‌ ಅವರಂಥ ಸ್ಟಾರ್‌ ಬೌಲರ್‌ಗಳನ್ನು ಹೊಂದಿದೆ. ಕಾಯು ತ್ತಿರುವವರ ಯಾದಿಯಂತೂ ಬಹಳ ದೊಡ್ಡದಿದೆ. ಆದರೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ಡೆಲ್ಲಿ ಸತತ ವೈಫ‌ಲ್ಯ ಅನುಭವಿಸುತ್ತ ಇದೆ. ಇಲ್ಲಿಂದ ಗೆಲುವಿನ ಓಟ ಬೆಳೆಸದೇ ಹೋದರೆ ಪಂತ್‌ ಪಡೆಗೆ ಪ್ಲೇ ಆಫ್ ಟಿಕೆಟ್‌ ದೊರಕುವುದು ಕಷ್ಟವಾದೀತು.

ಇಕ್ಕಟ್ಟಿನಲ್ಲಿ ಕೆಕೆಆರ್‌
ಡೆಲ್ಲಿಗಿಂತಲೂ ಒಂದು ಮೆಟ್ಟಿಲು ಕೆಳಗಿರುವ ಕೆಕೆಆರ್‌ ಇನ್ನಷ್ಟು ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಹಿಂದಿನ ಪಂದ್ಯದಲ್ಲಿ ಗುಜರಾತ್‌ಗೆ 8 ರನ್ನಿನಿಂದ ಸೋತ ಆಘಾತ ಅಯ್ಯರ್‌ ಬಳಗದ್ದು. 156 ರನ್‌ ಚೇಸ್‌ ಮಾಡುವ ವೇಳೆ ಅಯ್ಯರ್‌ ಸೇರಿದಂತೆ ಅಗ್ರ ಕ್ರಮಾಂಕದ ಅಷ್ಟೂ ಮಂದಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದರು. ಹೆಟ್‌ಮೈರ್‌ ಹೋರಾಟ ಸಂಘಟಿಸಿದರೂ ತಂಡವನ್ನು ದಡ ತಲುಪಿಸುವಲ್ಲಿ ವಿಫ‌ಲರಾಗಿದ್ದರು.

ಶ್ರೇಯಸ್‌ ಅಯ್ಯರ್‌, ನಿತೀಶ್‌ ರಾಣಾ, ವೇಕಟೇಶ್‌ ಅಯ್ಯರ್‌, ರಿಂಕು ಸಿಂಗ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಸುನೀಲ್‌ ನಾರಾಯಣ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಸರದಿ ವೈವಿಧ್ಯ ಮಯವಾಗಿದ್ದರೂ ಸೂಕ್ತ ಆರಂಭಿಕರನ್ನು ಹೊಂದಿಸಿ ಕೊಳ್ಳುವಲ್ಲಿ ತಂಡ ವಿಫ‌ಲ ವಾಗಿದೆ. ಜತೆಗೆ ಬ್ಯಾಟಿಂಗ್‌ ಲೈನ್‌ಅಪ್‌ನ ಯಾವ ಬದ ಲಾವಣೆಗಳೂ ಕ್ಲಿಕ್‌ ಆಗಿಲ್ಲ.

ಬೌಲಿಂಗ್‌ ವಿಭಾಗದಲ್ಲಿ ಸೌಥಿ, ಉಮೇಶ್‌ ಯಾದವ್‌ ಅವರದು ಅಮೋಘ ಸಾಧನೆ.ಆದರೆ ಮಿಸ್ಟರಿ ಸ್ಪಿನ್ನರ್‌ ವರುಣ್‌ ಇನ್ನೂ ಚಕ್ರ ವರ್ತಿ ಆಗದಿರುವುದು ತಂಡಕ್ಕೆ ಎದುರಾಗಿ ರುವ ದೊಡ್ಡ ಹಿನ್ನಡೆ.

ಬೃಹತ್‌ ಮೊತ್ತದ ಮೊದಲ ಮುಖಾಮುಖಿ
ಕೆಕೆಆರ್‌ ಮತ್ತು ಡೆಲ್ಲಿ ಈ ಋತುವಿನ ಮೊದಲ ಪಂದ್ಯವನ್ನು ಎ. 10ರಂದು “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ಆಡಿದ್ದವು. ಇದು ಬೃಹತ್‌ ಮೊತ್ತದ ಮೇಲಾಟವಾಗಿತ್ತು.

ಈ ತೀವ್ರ ಹೋರಾಟದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 5ಕ್ಕೆ 215 ರನ್‌ ರಾಶಿ ಹಾಕಿದರೆ, ಕೆಕೆಆರ್‌ 19.4 ಓವರ್‌ಗಳಲ್ಲಿ 171ಕ್ಕೆ ಆಲೌಟಾಗಿ 44 ರನ್‌ ಸೋಲಿಗೆ ತುತ್ತಾಗಿತ್ತು.

ಡೆಲ್ಲಿಗೆ ಪೃಥ್ವಿ ಶಾ-ಡೇವಿಡ್‌ ವಾರ್ನರ್‌ ಸ್ಫೋಟಕ ಆರಂಭ ನೀಡಿದ್ದರು. 8.4 ಓವರ್‌ಗಳಲ್ಲಿ 93 ರನ್‌ ಹರಿದು ಬಂದಿತ್ತು. ಶಾ 29 ಎಸೆತಗಳಿಂದ 51 ರನ್‌, ವಾರ್ನರ್‌ 45 ಎಸೆತಗಳಿಂದ 61 ರನ್‌ ಸಿಡಿಸಿದ್ದರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ ಮತ್ತು ಶಾರ್ದೂಲ್ ಠಾಕೂರ್ ಕೂಡ ಬಿರುಸಿನ ಆಟಕ್ಕೆ ಇಳಿದಿದ್ದರು.

ಡೆಲ್ಲಿ ಆರಂಭ ನಿರೀಕ್ಷಿತ ಮಟ್ಟದಲ್ಲಿ ರಲಿಲ್ಲ. ಅಜಿಂಕ್ಯ ರಹಾನೆ 8, ವೆಂಕಟೇಶ್‌ ಅಯ್ಯರ್‌ 18 ರನ್‌ ಮಾಡಿ ಔಟಾದಾಗಲೇ ಒತ್ತಡ ತೀವ್ರಗೊಂಡಿತು. ನಾಯಕ ಶ್ರೇಯಸ್‌ ಅಯ್ಯರ್‌, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ನಿತೀಶ್‌ ರಾಣಾ ಬಿರುಸಿನ ಆಟಕ್ಕಿಳಿದರೂ ಪ್ರಯೋಜನವಾಗಲಿಲ್ಲ.

ಅಂದಿನ ಸೋಲಿಗೆ ತಮ್ಮ ತಂಡ ಸೇಡು ತೀರಿಸಿಕೊಂಡೀತೇ ಎಂಬುದು ಕೆಕೆಆರ್‌ ಅಭಿಮಾನಿಗಳ ತೀವ್ರ
ನಿರೀಕ್ಷೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next