ಅಬುಧಾಬಿ : ಐಪಿಎಲ್ ನ 53 ನೇ ಪಂದ್ಯದಲ್ಲಿ ಚೆನ್ನೈ ಹಾಗೂ ಪಂಜಾಬ್ ಮುಖಾಮುಖಿಯಾಗಲಿವೆ. ಟಾಸ್ ಗೆದ್ದ ಧೋನಿ ಪಡೆ ಬೌಲಿಂಗ್ ಆಯ್ದುಕೊಂಡಿದೆ.
ಪಂಜಾಬ್ ಗೆದ್ದರೆ ಮಾತ್ರ ಉಳಿವು : ಪಂಜಾಬ್ ತಂಡಕ್ಕೆ ಗೆಲುವು ಮಾತ್ರ ದಕ್ಕಿದ್ದರೆ ಸಾಲದು.ಉತ್ತಮ ರನ್ ರೇಟ್ ಯೊಂದಿಗೆ ಗೆದ್ದರೆ ಮುಂದಿನ ಸುತ್ತಿಬ ಲೆಕ್ಕಚಾರವನ್ನು ಹಾಕಬಹುದು. ಆಡಿದ 13 ಪಂದ್ಯದಲ್ಲಿ 6 ಪಂದ್ಯದಲ್ಲಿ ಗೆಲುವು ಸಾಧಿಸಿದ್ದು 7 ರಲ್ಲಿ ಮುಗ್ಗರಿಸಿ 12 ಅಂಕದೊಂದಿಗೆ ಅಂಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಪಂಜಾಬ್ ಗೆ ಲೀಗ್ ಹಂತದ ಕೊನೆಯ ಪಂದ್ಯ ಇಂದಿನ ಪಂದ್ಯದಲ್ಲಿ ಉತ್ತಮ ರನ್ ರೇಟ್ ನಲ್ಲಿ ಗೆದ್ದು, ರಾತ್ರಿ ಕೆಕೆಆರ್ ಹಾಗೂ ರಾಜಸ್ಥಾನ್ ನಡುವಿನ ಪಂದ್ಯದ ಫಲಿತಾಂಶದತ್ತ ದೃಷ್ಟಿ ನೆಟ್ಟಬೇಕಿದೆ.
ಚೆನ್ನೈಗೆ ಔಪಚಾರಿಕ ಪಂದ್ಯ : ಕ್ಯಾಪ್ಟನ್ ಕೂಲ್ ಧೋನಿಯ ಚೆನ್ನೈ ತಂಡಕ್ಕೆ ಈ ಬಾರಿಯ ಕೂಟದಲ್ಲಿ ಕಹಿ ಅನುಭವಗಳೇ ಹಚ್ಚಿವೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಪಂಜಾಬ್ಗೆ ಆಘಾತವಿತ್ತು ಚೆನ್ನೈ ಗೆದ್ದರೆ, ಗೆಲುವಿನೊಂದಿಗೆ ಕೂಟವನ್ನು ಮುಗಿಸಲಿದೆ.
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಫಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ ವಾಡ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ಕೀಪರ್ /ನಾಯಕ), ಎನ್ ಜಗದೀಸನ್, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದುಲ್ ಠಾಕೂರ್, ದೀಪಕ್ ಚಹರ್, ಲುಂಗಿ ಎನ್‌ಜಿಡಿ, ಇಮ್ರಾನ್ ತಾಹಿರ್
ಕಿಂಗ್ಸ್ ಇಲೆವೆನ್ ಪಂಜಾಬ್ (ಪ್ಲೇಯಿಂಗ್ ಇಲೆವೆನ್ ) : ಕೆ.ಎಲ್. ರಾಹುಲ್ (ನಾಯಕ/ಕೀಪರ್), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಮನ್ ದೀಪ್ ಸಿಂಗ್, ಜೇಮ್ಸ್ ನೀಶಮ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ