Advertisement
ಈ ಗೆಲುವಿನಿಂದ ಹೈದರಾಬಾದ್ ತಂಡವು ಒಟ್ಟಾರೆ 14 ಅಂಕ ಸಂಪಾದಿಸಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು ಪ್ಲೇ ಆಫ್ಗೆ ತೇರ್ಗಡೆಯ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. ಸೋತ ಲಕ್ನೋ ತಂಡ 12 ಅಂಕ ಹೊಂದಿದ್ದು ಐದನೇ ಸ್ಥಾನದಲ್ಲಿದೆ.
Related Articles
ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಲಕ್ನೋ ತಂಡ ಆರಂಭದಲ್ಲಿ ರನ್ ಗಳಿಸಿಲು ಒದ್ದಾಡಿತು. ಪವರ್ ಪ್ಲೇಯಲ್ಲಿ ತಂಡ ಎರಡು ವಿಕೆಟಿಗೆ 27 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಹೈದರಾಬಾದ್ ತಂಡದ ನಿಖರ ದಾಳಿಯಿಂದಾಗಿ ಲಕ್ನೋ ಆಟಗಾರರು ರನ್ ಗಳಿಸಲು ಒದ್ದಾಡಿದರು. ಮೊಹ್ಸಿನ್ ಖಾನ್ ಬದಲಿಗೆ ಬಂದ ಕಾಕ್ ಮಿಂಚಲು ವಿಫಲರಾದರು. ನಾಯಕ ರಾಹುಲ್, ಸ್ಟೋಯಿನಿಸ್, ಕೃಣಾಲ್ ಪಾಂಡ್ಯ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು. ಇದರಿಂದಾಗಿ ತಂಡ 66 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು.
Advertisement
ಈ ಹಂತದಲ್ಲಿ ನಿಕೋಲಾಸ್ ಪೂರಣ್ ಅವರನ್ನು ಸೇರಿಕೊಂಡ ಆಯುಷ್ ಬದೋನಿ ತಾಳ್ಮೆಯಿಂದ ಆಡಿ ತಂಡವನ್ನು ಆಧರಿಸಿದರು. ಇದರಿಂದಾಗಿ ತಂಡ ಉತ್ತಮ ಮೊತ್ತ ದಾಖಲಿಸಲು ಸಾಧ್ಯವಾಯಿತು. ಅವರಿಬ್ಬರು ಮುರಿಯದ ಐದನೇ ವಿಕೆಟಿಗೆ 99 ರನ್ನುಗಳ ಜತೆಯಾಟ ನಡೆಸಿದ್ದರಿಂದ ಲಕ್ನೋದ ಮೊತ್ತ 165 ತಲಪುವಂತಾಯಿತು. ಪೂರಣ್ 26ಎಸೆತಗಳಿಂದ 48 ರನ್ ಗಳಿಸಿದರೆ ಬದೋನಿ 30 ಎಸೆತಗಳಿಂದ 55 ರನ್ ಗಳಿಸಿ ಅಜೇಯರಾಗಿ ಉಳಿದರು.ಬಿಗು ದಾಳಿ ಸಂಘಟಿಸಿದ ಭುವನೇಶ್ವರ್ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ ಕೇವಲ 12 ರನ್ ನೀಡಿ ಎರಡು ವಿಕೆಟ್ ಹಾರಿಸಿದರು. ಸ್ಕೋರ್ ಪಟ್ಟಿ
ಲಕ್ನೋ ಸೂಪರ್ ಜೈಂಟ್ಸ್
ಕೆಎಲ್ ರಾಹುಲ್ ಸಿ ನಟರಾಜನ್ ಬಿ ಕಮಿನ್ಸ್ 29
ಕ್ವಿಂಡನ್ ಡಿ ಕಾಕ್ ಸಿ ನಿತೀಶ್ ಬಿ ಕುಮಾರ್ 2
ಮಾರ್ಕಸ್ ಸ್ಟೋಯಿನಿಸ್ ಸಿ ಸನ್ವಿರ್ ಬಿ ಕುಮಾರ್ 3
ಕೃಣಾಲ್ ಪಾಂಡ್ಯ ರನೌಟ್ 24
ನಿಕೋಲಾಸ್ ಪೂರಣ್ ಔಟಾಗದೆ 48
ಆಯುಷ್ ಬದೋನಿ ಔಟಾಗದೆ 55
ಇತರ: 4
ಒಟ್ಟು (20 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ) 165
ವಿಕೆಟ್ ಪತನ: 1-13, 2-21, 3-57, 4-66
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-12-2
ಪ್ಯಾಟ್ ಕಮಿನ್ಸ್ 4-0-47-1
ಶಾಬಾಜ್ ಅಹ್ಮದ್ 2-0-9-0
ವಿಜಯಕಾಂತ್ ವಿಯಾಸ್ಕಾಂತ್ 4-0-27-0
ಜೈದೇವ್ ಉನಾದ್ಕತ್ 2-0-19-0
ಟಿ. ನಟರಾಜನ್ 4-0-50-0
ಸನ್‌ರೈಸರ್ ಹೈದರಾಬಾದ್
ಅಭಿಷೇಕ್ ಶರ್ಮ ಔಟಾಗದೆ 75
ಟ್ರ್ಯಾವಿಸ್ ಹೆಡ್ ಔಟಾಗದೆ 89
ಇತರ: 3
ಒಟ್ಟು (9.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ) 167
ಬೌಲಿಂಗ್:
ಕೃಷ್ಣಪ್ಪ ಗೌತಮ್ 2-0-29-0
ಯಶ್ ಥಾಕೂರ್ 2.4-0-47-0
ರವಿ ಬಿಷ್ಣೋಯಿ 2-0-34-0
ನವೀನ್ ಉಲ್ ಹಕ್ 2-0-37-0
ಆಯುಷ್ ಬದೋನಿ 1-0-19-0
ಪಂದ್ಯಶ್ರೇಷ್ಠ: ಟ್ರ್ಯಾವಿಸ್ ಹೆಡ್