Advertisement

ಸನ್‌ರೈಸರ್ಸ್ ಹೈದರಾಬಾದ್ ಎದುರು ಅಮೋಘ ಜಯ ಸಾಧಿಸಿದ ರಾಜಸ್ಥಾನ ರಾಯಲ್ಸ್

07:44 PM Apr 02, 2023 | Team Udayavani |

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 4 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ 72 ರನ್‌ಗಳ ಅಮೋಘ ಜಯ ಸಾಧಿಸಿತು.ಸಂಜು ಸ್ಯಾಮ್ಸನ್ ಬಳಗ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯಮೋಘ ತಂಡ ಎನ್ನುವುದನ್ನು ತೋರಿಸಿಕೊಟ್ಟಿತು.

Advertisement

ಹೈದರಾಬಾದ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆರಂಭಿಕ ಆಟಗಾರರು ಯಶಸ್ವಿ ಜೈಸ್ವಾಲ್ 54(37 ಎಸೆತ) ಜೋಸ್ ಬಟ್ಲರ್ 54 ರನ್ (22 ಎಸೆತ) ಉತ್ತಮ ಆರಂಭ ಒದಗಿಸಿಕೊಟ್ಟರು. ಆಬಳಿಕ ನಾಯಕ ಸಂಜು ಸ್ಯಾಮ್ಸನ್ 55 ರನ್ ಕೊಡುಗೆ ಸಲ್ಲಿಸಿದರು. 32 ಎಸೆತಗಲ್ಲಿ ಭರ್ಜರಿ ಅರ್ಧ ಶತಕ ಗಳಿಸಿ ಔಟಾದರು. ಹೆಟ್ಮೆಯರ್ ಔಟಾಗದೆ 22 ರನ್ ಕೊಡುಗೆ ನೀಡಿದರು. 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 203 ರನ್ ಕಲೆ ಹಾಕಿತು.

ಹೈದರಾಬಾದ್  ನಾಯಕ ಭುವನೇಶ್ವರ್ ಕುಮಾರ್ 3 ಓವರ್ ಗಳಲ್ಲಿ 36 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡರು. ಫಜಲ್ಹಕ್ ಫಾರೂಕಿ ಮತ್ತು ಟಿ ನಟರಾಜನ್ ತಲಾ 2 ವಿಕೆಟ್ ಮತ್ತು ಉಮ್ರಾನ್ ಮಲಿಕ್ 1 ವಿಕೆಟ್ ಪಡೆದರು.

ಬೃಹತ್ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 131 ರನ್ ಗಳನ್ನು ಮಾತ್ರ ಗಳಿಸಿ ಸೋಲಿಗೆ ಶರಣಾಗಬೇಕಾಯಿತು. ಆರಂಭಿಕ ಆಘಾತದಿಂದ ಹೊರ ಬರಲಾಗದೆ ಪರದಾಡಿತು. ಶೂನ್ಯಕ್ಕೆ ಅಭಿಷೇಕ್ ಶರ್ಮಾ ಅವರ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು.

ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ 27 ರನ್ ಗಳಿಸಿ ಔಟಾದರು. ರಾಹುಲ್ ತ್ರಿಪಾಠಿ ಶೂನ್ಯಕ್ಕೆ ನಿರ್ಗಮಿಸಿದರು. ಹ್ಯಾರಿ ಬ್ರೂಕ್13, ವಾಷಿಂಗ್ಟನ್ ಸುಂದರ್ 1, ಗ್ಲೆನ್ ಫಿಲಿಪ್ಸ್ 8, , ಆದಿಲ್ ರಶೀದ್ 18 ರನ್, ಭುವನೇಶ್ವರ್ ಕುಮಾರ್ 6 ರನ್ ಗಳಿಸಲಷ್ಟೇ ಶಕ್ತರಾದರು. ಅಬ್ದುಲ್ ಸಮದ್ ಔಟಾಗದೆ 32 ರನ್,ಉಮ್ರಾನ್ ಮಲಿಕ್ ಔಟಾಗದೆ 19 ರನ್ ಗಳಿಸಿದ್ದರು.

Advertisement

ರಾಜಸ್ಥಾನ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಯುಜ್ವೇಂದ್ರ ಚಹಾಲ್ 4 ಓವರ್ ಗಳಲ್ಲಿ 17 ರನ್ ಮಾತ್ರ ಬಿಟ್ಟುಕೊಟ್ಟು 4 ವಿಕೆಟ್ ತನ್ನದಾಗಿಸಿಕೊಂಡರು. ವೇಗಿ ಟ್ರೆಂಟ್ ಬೌಲ್ಟ್ 1 ಮೇಡನ್ ಓವರ್ ಎಸೆದು 21 ರನ್ ಮಾತ್ರ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದರು. ಜೇಸನ್ ಹೋಲ್ಡರ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಸ್ಪೋಟಕ ಆಟವಾಡಿದ ಜೋಸ್ ಬಟ್ಲರ್ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

ಇನ್ನೊಂದು ರೋಚಕ ಜಿದ್ದಾಜಿದ್ದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next