ಹೈದರಾಬಾದ್: ಈ ಕೂಟದ ಬ್ಯಾಟಿಂಗ್ ದೈತ್ಯರಾದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ ಹೈದರಾಬಾದ್ ಗುರುವಾರ ರಾತ್ರಿ ಮುಖಾಮುಖಿಯಾಗಲಿವೆ. ಬಹುಶಃ ಇದು ಕೂಟದ ಬಿಗ್ ಮ್ಯಾಚ್ ಆಗುವ ಎಲ್ಲ ಸಾಧ್ಯತೆ ಇದೆ. ಈ ಪಂದ್ಯವನ್ನು ಗೆದ್ದರೆ ರಾಜಸ್ಥಾನ್ ತಂಡದ ಪ್ಲೇ ಆಫ್ ಅಧಿಕೃತಗೊಳ್ಳಲಿದೆ.
ಪ್ಯಾಟ್ ಕಮಿನ್ಸ್ ಸಾರಥ್ಯದ ಸನ್‌ರೈಸರ್ ಈ ಬಾರಿ ಎರಡು ಸಲ ಐಪಿಎಲ್ ದಾಖಲೆಯನ್ನು ಮುರಿದು ಮೆರೆದ ತಂಡ. ಆದರೆ ಎಸ್‌ಆರ್‌ಎಚ್ ನ್ಪೋಟಿಸುವುದೇನಿದ್ದರೂ ಮೊದಲು ಬ್ಯಾಟಿಂಗ್ ಮಾಡುವ ವೇಳೆ ಮಾತ್ರ ಎಂಬುದು ಈಗಾಗಲೇ ಸಾಬೀತಾಗಿದೆ. ಇದಕ್ಕೆ ಕಳೆದೆರಡು ಪಂದ್ಯಗಳೇ ಸಾಕ್ಷಿ.
ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಹೈದರಾಬಾದ್ 206 ರನ್ ಚೇಸಿಂಗ್ ಮಾಡುವ ವೇಳೆ 8ಕ್ಕೆ 171 ರನ್ ಮಾಡಿ ಶರಣಾಗಿತ್ತು. ಬಳಿಕ ಚೆನ್ನೈಯಲ್ಲಿ 213 ರನ್ ಗಳಿಸುವ ಹಾದಿಯಲ್ಲಿ 134ಕ್ಕೆ ಕುಸಿದಿತ್ತು. ಹೈದರಾಬಾದ್ ಈ ಕೂಟದಲ್ಲಿ ಆಲೌಟ್ ಆದದ್ದು ಇದೇ ಮೊದಲು. ಟಾಸ್ ಗೆದ್ದ ಹೈದರಾಬಾದ್ ಮೊದಲು ಬೌಲಿಂಗ್ ಆರಿಸಿಕೊಂಡಾಗಲೇ, ಚೇಸಿಂಗ್ ಪ್ರ್ಯಾಕ್ಟೀಸ್ ನಡೆಸುವುದೇ ತಂಡದ ಪ್ರಮುಖ ಉದ್ದೇಶ ಎಂಬುದು ಸ್ಪಷ್ಟವಾಗಿತ್ತು. ಆದರೆ ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದರೆ ಬಹುಶಃ ಮೊದಲು ಬ್ಯಾಟಿಂಗೇ ಆರಿಸಿಕೊಳ್ಳಬಹುದು!
ಹೆಡ್-ಅಭಿಷೇಕ್ ಶರ್ಮ ಸ್ಫೋಟಿ ಸಿದರಷ್ಟೇ ಹೈದರಾ ಬಾದ್ ತಂಡದಿಂದ ದೊಡ್ಡ ಮೊತ್ತ ನಿರೀಕ್ಷಿಸಬೇಕಾಗುತ್ತದೆ. ಇವರಿಬ್ಬರೂ ಫ್ಲಾಪ್ ಆದರೆ ಉಳಿದವರು ಇನ್ನಿಂಗ್ಸ್ ಕಟ್ಟಬೇಕಾದ ಜವಾಬ್ದಾರಿ ಹೊರುವುದು ಅನಿವಾರ್ಯ ವಾಗುತ್ತದೆ. ಆಗ ಕ್ಲಾಸೆನ್ ಸಿಡಿದರಷ್ಟೇ ತಂಡಕ್ಕೆ ಲಾಭ ಎಂಬುದು ಕೂಡ ಸಾಬೀತಾಗಿದೆ.
ರಾಜಸ್ಥಾನ್ ಆತ್ಮವಿಶ್ವಾಸ
ರಾಜಸ್ಥಾನ್ ಯಾವುದೇ ಅಬ್ಬರ ವಿಲ್ಲದೆ, ಭಾರೀ ಜೋಶ್ ತೋರದೆ ಮೇಲೇ ರಿದ ತಂಡ. ಯಾವುದೇ ಎದುರಾಳಿಯನ್ನು ಎಲ್ಲಿಯೂ ಎದುರಿಸಿ ಗೆದ್ದು ಬರಬಲ್ಲೆ ಎಂಬಂಥ ಆತ್ಮ ವಿಶ್ವಾಸವೇ ತಂಡದ ಆಸ್ತಿ. ಬಟ್ಲರ್, ಜೈಸ್ವಾಲ್, ಸ್ಯಾಮ್ಸನ್, ಹೆಟ್‌ಮೈರ್, ಪೊವೆಲ್, ಜುರೆಲ್ ಅವರೆಲ್ಲ ದೊಡ್ಡ ಇನ್ನಿಂಗ್ಸ್ ಕಟ್ಟಬಲ್ಲ ಛಾತಿ ಹೊಂದಿದ್ದಾರೆ.
ಒಂದು ವೇಳೆ ಹೈದರಾಬಾದ್ ಬೃಹತ್ ಮೊತ್ತ ಪೇರಿಸಿದರೆ ಅವರಿಗೆ ನೀರು ಕುಡಿಸ ಬಲ್ಲ ಸಾಮರ್ಥ್ಯ ಇರುವು ದಾದರೆ ಅದು ರಾಜಸ್ಥಾನಕ್ಕೆ ಮಾತ್ರ ಎನ್ನಲಡ್ಡಿಯಿಲ್ಲ!