Advertisement

ಐಪಿಎಲ್‌: ಬೇರ್‌ಸ್ಟೊ ಬದಲು ಶಾರ್ಟ್‌

09:21 PM Mar 25, 2023 | Team Udayavani |

ನವದೆಹಲಿ: ಪಂಜಾಬ್‌ ಕಿಂಗ್ಸ್‌ ತಂಡದ ಇಂಗ್ಲೆಂಡ್‌ ಕ್ರಿಕೆಟಿಗ ಜಾನಿ ಬೇರ್‌ಸ್ಟೊ 2023ರ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಫ್ರಾಂಚೈಸಿ ಶನಿವಾರ ಈ ವಿಷಯವನ್ನು ಪ್ರಕಟಿಸಿತು. ಇವರ ಬದಲು ಆಸ್ಟ್ರೇಲಿಯದ ಮ್ಯಾಥ್ಯೂ ಶಾರ್ಟ್‌ ಅವರನ್ನು ಸೇರಿಸಿಕೊಂಡಿದೆ.

Advertisement

33 ವರ್ಷದ ಬೇರ್‌ಸ್ಟೊ ಕೆಲವು ಸಮಯದ ಹಿಂದೆ ಗಾಲ್ಫ್ ಆಡುತ್ತಿದ್ದಾಗ ಎಡಗಾಲಿನ ನೋವಿಗೆ ಸಿಲುಕಿದ್ದರು. ಇದಿನ್ನೂ ವಾಸಿಯಾಗದ ಕಾರಣ ಅವರು ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರಕ್ಕೆ ಬಂದರು. 2022ರ ಮೆಗಾ ಹರಾಜಿನಲ್ಲಿ 9.75 ಕೋಟಿ ರೂ.ಗೆ ಬೇರ್‌ಸ್ಟೊ ಅವರನ್ನು ಪಂಜಾಬ್‌ ಖರೀದಿಸಿತ್ತು.

ಆದರೆ ಈ ಮೌಲ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫ‌ಲರಾಗಿದ್ದರು. 11 ಇನಿಂಗ್ಸ್‌ಗಳಿಂದ ಗಳಿಸಿದ್ದು 253 ರನ್‌ ಮಾತ್ರ. ಬದಲಿ ಆಟಗಾರ ಮ್ಯಾಥ್ಯೂ ಶಾರ್ಟ್‌ ಬಿಗ್‌ಬಾಶ್‌ ಲೀಗ್‌ನಲ್ಲಿ ಅಡಿಲೇಡ್‌ ಸ್ಟ್ರೈಕರ್ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದರು. 14 ಇನಿಂಗ್ಸ್‌ಗಳಿಂದ 458 ರನ್‌ ಪೇರಿಸಿದ ಸಾಧನೆ ಇವರದು. ಇದು ಒಂದು ಶತಕ, 2 ಅರ್ಧಶತಕಗಳನ್ನು ಒಳಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next