Advertisement

ಡೆಲ್ಲಿ ಮೆಂಟರ್‌ ರಾಹುಲ್‌ ದ್ರಾವಿಡ್‌ಗೆ 4.5 ಕೋಟಿ ರೂ. ವೇತನ

03:32 PM May 21, 2017 | Team Udayavani |

ನವದೆಹಲಿ: ಐಪಿಎಲ್‌ನಲ್ಲಿ ಆಟಗಾರರು ಕೋಟ್ಯಂತರ ರೂ. ಹಣ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಕೋಚ್‌ಗಳು, ಮೆಂಟರ್‌ಗಳಿಗೆ ಸಿಗುವ ಹಣ ಎಷ್ಟು ಗೊತ್ತೆ? ಮೂಲಗಳ ಪ್ರಕಾರ ಡೆಲ್ಲಿ ಡೇರ್‌ ಡೆವಿಲ್ಸ್‌ ಮೆಂಟರ್‌ ರಾಹುಲ್‌ ದ್ರಾವಿಡ್‌ ಕೇವಲ 47 ದಿನಗಳ ಕೂಟಕ್ಕಾಗಿ 4.5 ಕೋಟಿ ರೂ.ಪಡೆಯುತ್ತಾರೆ. ಇದು ಐಪಿಎಲ್‌ನಲ್ಲಿ ಮೆಂಟರ್‌ ಒಬ್ಬರು ಪಡೆಯುವ ಗರಿಷ್ಠ ಮೊತ್ತವಾಗಿದೆ. 

Advertisement

ಮುಂಬೈ ಇಂಡಿಯನ್ಸ್‌ ತಂಡ ಐಕಾನ್‌ ಆಗಿರುವ ತೆಂಡುಲ್ಕರ್‌ ಇದಕ್ಕಿಂತ ಹೆಚ್ಚು ಪಡೆಯುತ್ತಾರೆ ಎಂದು ಹೇಳಲಾಗಿದೆ. ಐಪಿಎಲ್‌ ಮೆಂಟರ್‌ಗಳ ಪೈಕಿ ಕನಿಷ್ಠ ಹಣ ಪಡೆಯುವವರು ಗುಜರಾತ್‌ ಕೋಚ್‌ ಬ್ರಾಡ್‌ ಹಾಗ್‌. ಅವರು 70 ಲಕ್ಷ ರೂ. ಕಿಸೆಗಿಳಿಸುತ್ತಾರೆ. ಇನ್ನುಪಂಜಾಬ್‌ ನಿರ್ದೇಶಕ ವೀರೇಂದ್ರ ಸೆಹವಾಗ್‌ 2.5 ಕೋಟಿ ರೂ.ಗೂ ಹೆಚ್ಚು ಹಣ ಪಡೆಯುತ್ತಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next