Advertisement

ಐಪಿಎಲ್‌ ಓಪನಿಂಗ್‌ ಮ್ಯಾಚ್‌: 2020: ಚಾಂಪಿಯನ್‌ ಮುಂಬೈ ವಿರುದ್ಧ ಚೆನ್ನೈ ಗೆಲುವಿನ ಆರಂಭ

05:46 PM May 24, 2022 | Team Udayavani |

2020ರ ಐಪಿಎಲ್‌ ಪಂದ್ಯಾವಳಿ ಬಹಳ ವಿಳಂಬವಾಗಿ ಯುಎಇಯಲ್ಲಿ ಮೊದಲ್ಗೊಂಡಿತ್ತು. ಕಾರಣ, ಕೊರೊನಾ. ಅಬುಧಾಬಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಎದುರಾದ ತಂಡಗಳೆಂದರೆ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈಸೂಪರ್‌ ಕಿಂಗ್ಸ್‌. ಇವೆರಡೂ 2019ರ ಫೈನಲಿಸ್ಟ್‌ ಆಗಿದ್ದವು. ಹೈದರಾಬಾದ್‌ನಲ್ಲಿ ನಡೆದ ಅಂದಿನ ರೋಚಕ ಫೈನಲ್‌ನಲ್ಲಿ ಮುಂಬೈ ಒಂದು ರನ್ನಿನಿಂದ ಚೆನ್ನೈಯನ್ನು ಮಣಿಸಿ 4ನೇ ಸಲ ಕಪ್‌ ಎತ್ತಿತ್ತು.

Advertisement

2020ರ ಆರಂಭಿಕ ಮುಖಾಮುಖಿಯಲ್ಲಿ ಚೆನ್ನೈ 5 ವಿಕೆಟ್‌ಗಳಿಂದ ಮುಂಬೈಯನ್ನು ಮಣಿಸಿ ಸೇಡು ತೀರಿಸಿಕೊಂಡಿತು. ಆದರೆ ಆರಂಭಿಕ ಪಂದ್ಯದ ಸೋಲು ಮುಂಬೈಗೆ ಶುಭ ಶಕುನವಾಗಿ ಪರಿಣಮಿಸಿತು. ಆ ಸೀಸನ್‌ನಲ್ಲಿ ರೋಹಿತ್‌ ಶರ್ಮ ಪಡೆ ಮತ್ತೆ ಫೈನಲ್‌ಗೆ ಲಗ್ಗೆ ಇರಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ ಸೋಲುಣಿಸಿ ದಾಖಲೆ 5ನೇ ಸಲ ಚಾಂಪಿಯನ್‌ ಆಗಿ ಮೂಡಿಬಂತು.

ರಾಯುಡು ಬ್ಯಾಟಿಂಗ್‌ ರಭಸ
2020ರ ಆರಂಭಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 9 ವಿಕೆಟಿಗೆ 162 ರನ್‌ ಗಳಿಸಿದರೆ, ಚೆನ್ನೈ 19.2 ಓವರ್‌ಗಳಲ್ಲಿ 5 ವಿಕೆಟಿಗೆ 166 ರನ್‌ ಬಾರಿಸಿ ಗೆಲುವಿನ ಸಂಭ್ರಮ ಆಚರಿಸಿತು.

ಚೆನ್ನೈ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ಆರಂಭಿಕರಾದ ಮುರಳಿ ವಿಜಯ್‌ (1) ಮತ್ತು ಶೇನ್‌ ವಾಟ್ಸನ್‌ (4) ವಿಕೆಟ್‌ ಬೇಗನೇ ಉರುಳಿತು. ಆದರೆ ಫಾ ಡು ಪ್ಲೆಸಿಸ್‌ ಮತ್ತು ಅಂಬಾಟಿ ರಾಯುಡು ಸೇರಿಕೊಂಡು ಕುಸಿತಕ್ಕೆ ದೊಡ್ಡ ತಡೆಯಾಗಿ ನಿಂತರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. 3ನೇ ವಿಕೆಟಿಗೆ 115 ರನ್‌ ಹರಿದು ಬಂತು.

ಅಂಬಾಟಿ ರಾಯುಡು ಸರ್ವಾಧಿಕ 71 ರನ್‌ ಬಾರಿಸಿದರು. 48 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 6 ಫೋರ್‌, 3 ಸಿಕ್ಸರ್‌ ಸೇರಿತ್ತು. ಡು ಪ್ಲೆಸಿಸ್‌ 58 ರನ್‌ ಹೊಡೆದು ಔಟಾಗದೆ ಉಳಿದರು (44 ಎಸೆತ, 6 ಬೌಂಡರಿ). ಉರುಳಿದ 5 ವಿಕೆಟ್‌ಗಳನ್ನು ಮುಂಬೈಯ ಐವರು ಬೌಲರ್ ಹಂಚಿಕೊಂಡರು.

Advertisement

ಮುಂಬೈ ಸರದಿಯಲ್ಲಿ ಸೌರಭ್‌ ತಿವಾರಿ ಸರ್ವಾಧಿಕ 42 ರನ್‌ ಹೊಡೆದರು. ಓಪನರ್‌ ಕ್ವಿಂಟನ್‌ ಡಿ ಕಾಕ್‌ ಅವರದು ಅನಂತರದ ಹೆಚ್ಚಿನ ಗಳಿಕೆ (33). ಲುಂಗಿ ಎನ್‌ಗಿಡಿ 3 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು.

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಕರನ್‌ ಬಿ ಚಾವ್ಲಾ 12
ಕ್ವಿಂಟನ್‌ ಡಿ ಕಾಕ್‌ ಸಿ ವಾಟ್ಸನ್‌ ಬಿ ಕರನ್‌ 33
ಸೂರ್ಯಕುಮಾರ್‌ ಯಾದವ್‌ ಸಿ ಕರನ್‌ ಬಿ ಚಹರ್‌ 17
ಸೌರಭ್‌ ತಿವಾರಿ ಸಿ ಡು ಪ್ಲೆಸಿಸ್‌ ಬಿ ಜಡೇಜ 42
ಹಾರ್ದಿಕ್‌ ಪಾಂಡ್ಯ ಸಿ ಡು ಪ್ಲೆಸಿಸ್‌ ಬಿ ಜಡೇಜ 14
ಕೈರನ್‌ ಪೊಲಾರ್ಡ್‌ ಸಿ ಧೋನಿ ಬಿ ಎನ್‌ಗಿಡಿ 18
ಕೃಣಾಲ್‌ ಪಾಂಡ್ಯ ಸಿ ಧೋನಿ ಬಿ ಎನ್‌ಗಿಡಿ 3
ಜೇಮ್ಸ್‌ ಪ್ಯಾಟಿನ್ಸನ್‌ ಸಿ ಡು ಪ್ಲೆಸಿಸ್‌ ಬಿ ಎನ್‌ಗಿಡಿ 11
ರಾಹುಲ್‌ ಚಹರ್‌ ಔಟಾಗದೆ 2
ಟ್ರೆಂಟ್‌ ಬೌಲ್ಟ್ ಬಿ ಚಹರ್‌ 0
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 5
ಇತರ 5
ಒಟ್ಟು (9 ವಿಕೆಟಿಗೆ) 162
ವಿಕೆಟ್‌ ಪತನ: 1-46, 2-48, 3-92, 4-121, 5-124, 6-136, 7-151, 8-156, 9-156.
ಬೌಲಿಂಗ್‌:
ದೀಪಕ್‌ ಚಹರ್‌ 4-0-32-2
ಸ್ಯಾಮ್‌ ಕರನ್‌ 4-0-28-1
ಲುಂಗಿ ಎನ್‌ಗಿಡಿ 4-0-38-3
ಪೀಯೂಷ್‌ ಚಾವ್ಲಾ 4-0-21-1
ರವೀಂದ್ರ ಜಡೇಜ 4-0-42-2

ಚೆನ್ನೈ ಸೂಪರ್‌ ಕಿಂಗ್ಸ್‌
ಮುರಳಿ ವಿಜಯ್‌ ಎಲ್‌ಬಿಡಬ್ಲ್ಯು ಪ್ಯಾಟಿನ್ಸನ್‌ 1
ಶೇನ್‌ ವಾಟ್ಸನ್‌ ಎಲ್‌ಬಿಡಬ್ಲ್ಯು ಬೌಲ್ಟ್ 4
ಫಾ ಡು ಪ್ಲೆಸಿಸ್‌ ಔಟಾಗದೆ 58
ಅಂಬಾಟಿ ರಾಯುಡು ಸಿ ಮತ್ತು ಬಿ ಚಹರ್‌ 71
ರವೀಂದ್ರ ಜಡೇಜ ಎಲ್‌ಬಿಡಬ್ಲ್ಯು ಪಾಂಡ್ಯ 10
ಸ್ಯಾಮ್‌ ಕರನ್‌ ಸಿ ಪ್ಯಾಟಿನ್ಸನ್‌ ಬಿ ಬುಮ್ರಾ 18
ಎಂ.ಎಸ್‌. ಧೋನಿ ಔಟಾಗದೆ 0
ಇತರ 4
ಒಟ್ಟು (5 ವಿಕೆಟಿಗೆ) 166
ವಿಕೆಟ್‌ ಪತನ: 1-5, 2-6, 3-121, 4-134, 5-153.
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 3.3-0-23-1
ಜೇಮ್ಸ್‌ ಪ್ಯಾಟಿನ್ಸನ್‌ 4-0-27-1
ಜಸ್‌ಪ್ರೀತ್‌ ಬುಮ್ರಾ 4-0-43-1
ಕೃಣಾಲ್‌ ಪಾಂಡ್ಯ 4-0-37-1
ರಾಹುಲ್‌ ಚಹರ್‌ 4-0-36-1
ಪಂದ್ಯಶ್ರೇಷ್ಠ: ಅಂಬಾಟಿ ರಾಯುಡು

Advertisement

Udayavani is now on Telegram. Click here to join our channel and stay updated with the latest news.

Next