Advertisement
ಮುಂಬೈ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮ ಅವರ ಅಮೋಘ ಆಟದಿಂದಾಗಿ 7 ವಿಕೆಟಿಗೆ 192 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಅಮೋಘ ಹೋರಾಟ ಸಂಘಟಿಸಿದರೂ ಕೊನೆಯಲ್ಲಿ ಬಿಗಿ ದಾಳಿ ಎದುರಿಸುವಲ್ಲಿ ವಿಫಲವಾಯಿತು. 19.1 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟಾಗಿ ಸೋಲು ಒಪ್ಪಿಕೊಂಡಿತು.
Related Articles
Advertisement
ಮುಂಬೈ ಆಡಿದ 7ನೇ ಪಂದ್ಯದಲ್ಲಿ 3ನೇ ಗೆಲುವು ತನ್ನದಾಗಿಸಿಕೊಂಡಿತು. ಪಂಜಾಬ್ ಆಡಿದ 7ನೇ ಪಂದ್ಯದಲ್ಲಿ 5 ನೇ ಸೋಲು ಅನುಭವಿಸಿತು.
ಮುಂಬೈ ಅಬ್ಬರಆರಂಭದಲ್ಲಿ ನಿಧಾನ ಗತಿಯಲ್ಲಿ ಆಡಿದ್ದ ಸೂರ್ಯ ಕುಮಾರ್ ಆಬಳಿಕ ಬಿರುಸಿನ ಆಟವಾಡಿದರು. ಕೇವಲ 53 ಎಸೆತಗಳಲ್ಲಿ 78 ರನ್ ಗಳಿಸಿದ ಅವರು ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರು 7 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ರೋಹಿತ್ ಶರ್ಮ ಅವರೊಂದಿಗೆ ದ್ವಿತೀಯ ವಿಕೆಟಿಗೆ 81 ರನ್ನುಗಳ ಜತೆಯಾಟ ನಡೆಸಿದ ಅವರು ತಂಡ ದೊಡ್ಡ ಮೊತ್ತ ಪೇರಿಸಲು ನೆರವಾದರು. ರೋಹಿತ್ 25 ಎಸೆತಗಳಿಂದ 2 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 36 ರನ್ ಹೊಡೆದರು. ಐಪಿಎಲ್‌ನಲ್ಲಿ 250ನೇ ಪಂದ್ಯವನ್ನಾಡಿದ ರೋಹಿತ್ 6,500 ರನ್ ಪೂರ್ತಿಗೊಳಿಸಿದರು. ಕೊನೆ ಹಂತದಲ್ಲಿ ಟಿಮ್ ಡೇವಿಡ್, ತಿಲಕ್ ವರ್ಮ ಬಿರುಸಿನ ಆಟ ಪ್ರದರ್ಶಿಸಿದ್ದರಿಂದ ಮುಂಬೈಯ ಮೊತ್ತ 192 ತಲುಪುವಂತಾಯಿತು. ಇದು ಐಪಿಎಲ್‌ನ ಹೊಸ ತಾಣದಲ್ಲಿ ದಾಖಲಾದ ಗರಿಷ್ಠ ಮೊತ್ತವೂ ಆಗಿದೆ. ಡೇವಿಡ್ 7 ಎಸೆತಗಳಿಂದ 14 ರನ್ ಹೊಡೆದರೆ ವರ್ಮ 18 ಎಸೆತ ಎದುರಿಸಿದ್ದು 34 ರನ್ ಗಳಿಸಿ ಅಜೇಯರಾಗಿ ಉಳಿದರು. 2 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು. ಬಿಗು ದಾಳಿ ಸಂಘಟಿಸಿದ ಹರ್ಷಲ್ ಪಟೇಲ್ 31 ರನ್ನಿಗೆ 3 ವಿಕೆಟ್ ಕಿತ್ತು ಮಿಂಚಿದರು. ನಾಯಕ ಸ್ಯಾಮ್ ಕರನ್ 41 ರನ್ನಿಗೆ 2 ವಿಕೆಟ್ ಪಡೆದರು. ಸ್ಯಾಮ್ ಕರನ್ ನಾಯಕರಾಗಿ ಮುಂದುವರಿಕೆ
ಶಿಖರ್ ಧವನ್ ಭುಜದ ನೋವಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಈ ಪಂದ್ಯದಲ್ಲೂ ಆಡುತ್ತಿಲ್ಲ. ಅವರ ಬದಲಿಗೆ ಸ್ಯಾಮ್ ಕರನ್ ತಂಡವನ್ನು ಮುನ್ನಡೆಸಿದರು. ಪಂಜಾಬ್ ತಂಡವು ಜಾನಿ ಬೇರ್‌ಸ್ಟೋ ಬದಲಿಗೆ ರೀಲಿ ರೋಸೊ ಅವರನ್ನು ಕರೆಸಿಕೊಂಡಿದೆ. ಅಥರ್ವ ಟೈಡ್ ಕೂಡ ಈ ಪಂದ್ಯದಲ್ಲಿ ಆಡಲಿಲ್ಲ.ಮುಂಬೈ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.