ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ನ (ಐಪಿಎಲ್) 2023 ರ ಆವೃತ್ತಿಯು ಇಂದಿನಿಂದ ಆರಂಭವಾಗಲಿದೆ. ಅಭಿಮಾನಿಗಳು ಹೊಸ ರೀತಿಯ ಐಪಿಎಲ್ ಗಾಗಿ ಕಾಯುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ತಂಡವು ಶುಕ್ರವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸುವ ಮೂಲಕ ಈ ಬಾರಿಯ ಕೂಟ ಆರಂಭವಾಗಲಿದೆ.
ಹೊಸ ಋತುವಿನ ಆರಂಭದ ಮೊದಲು, ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾನ್ ಐಪಿಎಲ್ 2023 ರ ವಿಜೇತರ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಮೈಕಲ್ ವಾನ್ ಅವರು ರಾಜಸ್ಥಾನ ತಂಡವನ್ನು ಬೆಂಬಲಿಸಿದ್ದು, ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಈ ಬಾರಿ ಟ್ರೋಫಿ ಗೆಲ್ಲುವುದು ಎಂದಿದ್ದಾರೆ.
ಇದನ್ನೂ ಓದಿ:ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ
“ಐಪಿಎಲ್ ಪ್ರಾರಂಭವಾಗುವವರೆಗೆ ಕಾಯಲು ಸಾಧ್ಯವಿಲ್ಲ .. ಕ್ರಿಕ್‌ಬಜ್ ತಂಡದ ಭಾಗವಾಗಲು ಎದುರು ನೋಡುತ್ತಿದ್ದೇನೆ.. ಇದು ರಾಜಸ್ಥಾನ ರಾಯಲ್ಸ್ ವರ್ಷವಾಗಲಿದೆ ಎಂದು ನಾನು ಭಾವಿಸುತ್ತೇನೆ .. ಅವರು ಮೇ ಅಂತ್ಯದಲ್ಲಿ ಟ್ರೋಫಿಯನ್ನು ಎತ್ತುತ್ತಾರೆ” ಎಂದು ವಾನ್ ಟ್ವೀಟ್ ಮಾಡಿದ್ದಾರೆ.
ಲೆಜೆಂಡ್ ಶೇನ್ ವಾರ್ನ್ ಅವರ ನಾಯಕತ್ವದಲ್ಲಿ ಆರಂಭಿಕ ಆವೃತ್ತಿಯಲ್ಲಿ ಗೆದ್ದ ನಂತರ ರಾಜಸ್ಥಾನ ರಾಯಲ್ಸ್ ಎಂದೂ ಐಪಿಎಲ್ ಕಪ್ ಗೆದ್ದಿಲ್ಲ.
ರಾಜಸ್ಥಾನ ತಂಡವು ತಮ್ಮ ಐಪಿಎಲ್ 2023 ಅಭಿಯಾನವನ್ನು ಏಪ್ರಿಲ್ 2 ರಂದು ಹೈದರಾಬಾದ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪ್ರಾರಂಭಿಸಲಿದೆ